Bank Updates: ಬ್ಯಾಂಕ್ ಕೆಲಸದ ಸಮಯದಲ್ಲಿ ಬದಲಾವಣೆ, ಇನ್ನುಮುಂದೆ ವಾರದಲ್ಲಿ 5 ದಿನ ಮಾತ್ರ.

ಮುಂದಿನ ದಿನಗಳಲ್ಲಿ ದೇಶದಲ್ಲಿ ಎಲ್ಲಾ ಬ್ಯಾಂಕುಗಳು ವಾರದಲ್ಲಿ ಐದು ದಿನ ಮಾತ್ರ ಕಾರ್ಯ ನಿರ್ವಹಿಸಲಿದೆ.

Bank Workinh Days: ಹೊಸ ಹಣಕಾಸು ವರ್ಷದ (New Financial Year) ಆರಂಭದ ಹಿನ್ನಲೆ ಅನೇಕ ನಿಯಮಗಳು ಬದಲಾಗಿವೆ. ಇನ್ನು ದೇಶಿಯ ಬ್ಯಾಂಕ್ ಗಳು ಈ ವರ್ಷದಲ್ಲಿ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಬ್ಯಾಂಕ್ ಉದ್ಯೋಗಿಗಳಿಗೂ ಕೂಡ ಹೊಸ ಹೊಸ ನಿಯಮಗಳು ಜಾರಿಯಾಗಿವೆ.

ಇದೀಗ ಬ್ಯಾಂಕ್ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಬ್ಯಾಂಕ್ ನೌಕರರ ರಜೆ ದಿನಗಳ ಬಗ್ಗೆ ಸರ್ಕಾರ ಮಹತ್ವದ ಘೋಷಣೆಯನ್ನು ಹೊರಡಿಸಿದೆ.

In the coming days, all banks in the country will function only five days a week.
Image Credit: livemint

ಬ್ಯಾಂಕ್ ನಲ್ಲಿ ಇನ್ನುಮುಂದೆ ವಾರಕ್ಕೆ ಐದು ದಿನ ಮಾತ್ರ ಕೆಲಸ
ಸರ್ಕಾರೀ ಬ್ಯಾಂಕ್ ನೌಕರರು ತಿಂಗಳಿನಲ್ಲಿ ಹೆಚ್ಚಿನ ರಜೆಯನ್ನು ಪಡೆಯುತ್ತಾರೆ. ಪ್ರತಿ ತಿಂಗಳ ಭಾನುವಾರ ಬ್ಯಾಂಕ್ ನೌಕರರಿಗೆ ರಜೆ ಇರುತ್ತದೆ. ಇನ್ನು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ತಿಂಗಳಿನಲ್ಲಿ ಒಂದನೇ, ಮೂರನೇ ಮತ್ತು ಐದನೇ ಶನಿವಾರಗಳು ಬ್ಯಾಂಕ್ ನೌಕರರಿಗೆ ರಜೆ ಇರುವುದಿಲ್ಲ.

ಸರ್ಕಾರೀ ಬ್ಯಾಂಕ್ ನೌಕರು ವಾರದಲ್ಲಿ 5 ದಿನಗಳ ಕೆಲಸವನ್ನು ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ತಿಂಗಳ ಪ್ರತಿ ಶನಿವಾರ ಮತ್ತು ಭಾನುವಾರವೂ ರಜೆ ಬೇಕೆನ್ನುವುದು ಸರ್ಕಾರೀ ಉದ್ಯೋಗಿಗಳ ಬೇಡಿಕೆಯಾಗಿದೆ. ಸರ್ಕಾರೀ ನೌಕರರ ಬೇಡಿಕೆಯ ಕುರಿತು ಸರ್ಕಾರ ಯಾವ ನಿರ್ಧಾರವನ್ನು ಕೈಗೊಂಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

All banks in the country will be closed on every Saturday and Sunday in the coming days
Image Credit: businessinsider

ಬ್ಯಾಂಕ್ ಕೆಲಸದ ಸಮಯ ಇನ್ನುಮುಂದೆ ಹೆಚ್ಚಳ
ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಬ್ಯಾಂಕ್ ನೌಕರರ ಬೇಡಿಕೆಗೆ ಒಪ್ಪಿಗೆ ನೀಡಿದೆ. ಬ್ಯಾಂಕ್ ನೌಕರರು ಇನ್ನುಮುಂದೆ ವಾರದ ಐದು ದಿನಗಳು ಮಾತ್ರ ಕೆಲಸ ಮಾಡಲಿದ್ದಾರೆ. ತಿಂಗಳ ಪ್ರತಿ ಶನಿವಾರ ಮತ್ತು ಪ್ರತಿ ಭಾನುವಾರ ನೌಕರರಿಗೆ ರಜೆ ನೀಡಲು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಒಪ್ಪಿಗೆ ನೀಡಿದೆ.

Join Nadunudi News WhatsApp Group

ಹಾಗೆಯೆ ನೌಕರರ ದಿನದ ಕೆಲಸದ ಅವಧಿಯನ್ನು 40 ನಿಮಿಷ ಹೆಚ್ಚಿಸಿದೆ. ಇನ್ನುಮುಂದೆ ಬ್ಯಾಂಕ್ ನೌಕರರು ಪ್ರತಿದಿನ ಬೆಳಿಗ್ಗೆ 9 :45 ರಿಂದ 5 :30 ರವರೆಗೆ ಕೆಲಸ ಮಾಡಬೇಕಾಗುತ್ತದೆ.

Join Nadunudi News WhatsApp Group