Best Pension: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಕೇಂದ್ರದಿಂದ ಪಿಂಚಣಿ ಯೋಜನೆ, ನಿಮಗೂ ಸಿಗಲಿದೆ ಪಿಂಚಣಿ.

ಸರ್ಕಾರೀ ನೌಕರರ ರೀತಿ ಖಾಸಗಿ ನೌಕರರಿಗೂ ಸಿಗಲಿದೆ ಪಿಂಚಣಿ ಹಣ.

Best Pension Scheme For Investment: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಹೆಚ್ಚು ಹೆಚ್ಚು ಯೋಜನೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಹೌದು ಜನರು ತಮ್ಮ ವೃದ್ದಾಪ್ಯದ ಭವಿಷ್ಯದ ಉದ್ದೇಶದಿಂದ ಹಣವನ್ನ ಹೂಡಿಕೆ ಮಾಡಲು ಹೆಚ್ಚು ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ದೇಶದಲ್ಲಿ ಹಣವನ್ನ ಹೂಡಿಕೆ ಮಾಡಲು ಸಾಕಷ್ಟು ಯೋಜನೆಗಳು ಜಾರಿಯಲ್ಲಿ ಇದ್ದು ಜನರ ಲಾಭದಾಯಕವಾದ ಯೋಜನೆಯಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ಸರ್ಕಾರೀ ನೌಕರರು ತಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಇಂತಿಷ್ಟು ಹಣವನ್ನ ಪಿಂಚಣಿ (Pension) ಯೋಜನೆಗೆ ಹಾಕುತ್ತಿದ್ದು ನಿವೃತ್ತಿಯ ನಂತರ ಪ್ರತಿ ತಿಂಗಳು ಆ ಹಣವನ್ನ ಪಿಂಚಣಿ ರೂಪದಲ್ಲಿ ಪಡೆದುಕೊಳ್ಳುತ್ತಾರೆ.

Employees Pension Scheme
Image Credit: Moneycontrol

ಸರ್ಕಾರೀ ನೌಕರರಿಗೆ ಪ್ರತಿ ತಿಂಗಳು ಬರಲಿದೆ ಪಿಂಚಣಿ
ಹೌದು ಸರ್ಕಾರೀ ನೌಕರರ ಸಂಬಳದಲ್ಲಿ ಸರ್ಕಾರವೇ ಪ್ರತಿ ತಿಂಗಳು ಇಂತಿಷ್ಟು ಹಣವನ್ನ ಪಿಂಚಣಿಗೆ ಹಾಕುತ್ತದೆ ಎಂದು ಹೇಳಬಹುದು. ಹೌದು ನೌಕರರ ವೃದ್ದಾಪ್ಯದ ಭವಿಷ್ಯದ ಉದ್ದೇಶದಿಂದ ಪಿಂಚಣಿ ಯೋಜನೆಯನ್ನ ಜಾರಿಗೆ ತರಲಾಗಿದ್ದು ಸದ್ಯ ಸರ್ಕಾರೀ ನೌಕರರು ತಮ್ಮ ನಿವೃತ್ತಿಯ ನಂತರ ಪಿಂಚಣಿ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ.

ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಸಿಗಲಿದೆ ಪಿಂಚಣಿ
ಹೌದು ಈಗ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಜನರು ಕೂಡ ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದು. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರ ಜನರ ಮುಂದಿನ ಭವಿಷ್ಯದ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಯೋಜನೆಯನ್ನ ಜಾರಿಗೆ ತಂದಿದ್ದು ಸದ್ಯ ನೌಕರರು ಈ ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು ಸರ್ಕಾರೀ ನೌಕರರಿಗಿಂತ ದೊಡ್ಡ ಮಟ್ಟದ ಪಿಂಚಣಿ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

National Pension Scheme
Image Credit: Financialexpress

ಖಾಸಗಿ ನೌಕರರಿಗೆ ಲಭ್ಯವಿರುವ ಪಿಂಚಣಿಗಳು ಯಾವುದು
Employees Pension Scheme (EPS)
ಖಾಸಗಿ ನೌಕರರು EPS ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದು. ಈ ಹೂಡಿಕೆ ಖಾಸಗಿ ವಲಯದ ಭಾಗವಾಗಿದ್ದು ಹೂಡಿಕೆ ಮಾಡಲು ಇದೊಂದು ಉತ್ತಮ ಯೋಜನೆ ಆಗಿದೆ. ನೌಕರರು ತನ್ನ ಆದಾಯಕ್ಕೆ ಅನುಗುಣವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

Join Nadunudi News WhatsApp Group

National Pension Scheme (NPS)
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಸರ್ಕಾರೀ ನೌಕರರು ಮತ್ತು ಖಾಸಗಿ ನೌಕರರು ದೊಡ್ಡ ಮಟ್ಟದ ಪಿಂಚಣಿ ಲಾಭ ಪಡೆದುಕೊಳ್ಳಬಹುದು. ಈ ಪಿಂಚಣಿ ಯೋಜನೆ ಎಲ್ಲಾ ವರ್ಗದ ಜನರಿಗೂ ಲಭ್ಯವಿದ್ದು ದೇಶದ ಎಲ್ಲಾ ಜನರು ಕೂಡ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

Atal Pension Scheme
Image Credit: India TV News

Atal Pension Scheme (APY)
ಕೇಂದ್ರದ ಅಟಲ್ ಪಿಂಚಣಿ ಯೋಜನೆಯಲ್ಲಿ ಕೂಡ ಹೂಡಿಕೆ ಮಾಡುವುದರ ಮೂಲಕ ಜನರು ಪ್ರೈ ತಿಂಗಳು 5000 ರೂಪಾಯಿಯ ತನಕ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ಜನರು ಪ್ರತಿ ತಿಂಗಳು ಹೂಡಿಕೆ ಮಾಡುವ ಅವಶ್ಯಕತೆ ಇದ್ದು 60 ವರ್ಷದ ನಂತರ ಪ್ರತಿ ತಿಂಗಳು 5000 ರೂ ತನಕ ಪಿಂಚಣಿ ಲಾಭವನ್ನ ಪಡೆದುಕೊಳ್ಳಬಹುದು.

Join Nadunudi News WhatsApp Group