Election Ink: ಚುನಾವಣೆಯಲ್ಲಿ ಕೈ ಬೆರಳಿಗೆ ಹಾಕುವ ಈ ಶಾಯಿ ಯಾವುದರಿಂದ ಮಾಡಲಾಗುತ್ತದೆ, 99% ಜನರಿಗೆ ತಿಳಿದಿಲ್ಲ.

ಚುನಾವಣೆಯಲ್ಲಿ ಮತದಾರರಿಗೆ ಕೈ ಬೆರಳಿಗೆ ಹಾಕುವ ಶಾಯಿಯ ಗುರುತಿನ ಬಗ್ಗೆ ಮಾಹಿತಿ.

Black Ink Election: ಕರ್ನಾಟಕಾ ರಾಜ್ಯ ವಿಧಾನಸಭಾ ಚುನಾವಣೆಗೆ (Assembly Election) ಕ್ಷಣಗಣನೆ ಪ್ರಾರಂಭವಾಗಿದೆ. ರಾಜಕೀಯ ಮುಖಂಡರು ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯ ಮುಗಿಸಿದ್ದಾರೆ. ನಿನ್ನೆ ಸಂಜೆಯಿಂದ ಪ್ರಚಾರ ಕಾರ್ಯಕ್ಕೆ ತಡೆಬಿದ್ದಿದೆ. ಇನ್ನು ನಾಳೆ ರಾಜ್ಯದಾದ್ಯಂತ ಚುನಾವಣೆ ನಡೆಯಲಿದ್ದು ಮತದಾದರೂ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಲು ಕಾಯುತ್ತಿದ್ದಾರೆ.

Assembly Election
Image Credit: hindustantimes

ಮತದಾರರಿಗೆ ಕೈ ಬೆರಳಿಗೆ ಶಾಯಿ ಗುರುತು ಕಡ್ಡಾಯ
ರಾಜ್ಯ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆಯ ಕಾರಣ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು ಪಕ್ಷದ ಪ್ರಚಾರದಲ್ಲಿ ತೊಡಗಿದ್ದಾರೆ. ಮೇ 10 ರಂದು ಚುನಾವಣೆ ನಡೆಯಲಿದ್ದು.

ಮೇ 13 ರಂದು ಫಲಿತಾಂಶ ಕೂಡ ಹೊರಬೀಳಲಿದೆ. ಇನ್ನು ಚುನಾವಣೆಯ ಸಲುವಾಗಿ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಯಲ್ಲಿದೆ. ಚುನಾವಣಾ ಅಧಿಕಾರಿಗಳು ಸಾಕಷ್ಟು ನಿಯಮಗಳನ್ನು ಘೋಷಿಸಿದ್ದಾರೆ.ಇದೀಗ ಚುನಾವಣೆಯಲ್ಲಿ ಮತದಾರರಿಗೆ ಕೈ ಬೆರಳಿಗೆ ಹಾಕುವ ಶಾಯಿಯ ಗುರುತಿನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಚುನಾವಣೆಯಲ್ಲಿ ಕೈ ಬೆರಳಿಗೆ ಹಾಕುವ ಈ ಶಾಯಿ ಯಾವುದರಿಂದ ಮಾಡಲಾಗುತ್ತದೆ
ಚುನಾವಣೆಯ ಸಲುವಾಗಿ ಮತ ನೀಡಿದವರ ಕೈ ಬೆರಳಿಗೆ ಶಾಯಿಯನ್ನು ಹಾಕಲಾಗುತ್ತದೆ. ಈ ಶಾಯಿ ಪೂರೈಕೆ ಮೈಸೂರಿನಿಂದ ಮಾಡಲಾಗುತ್ತದೆ. ಈ ಬಾರಿಯ ಚುನಾವಣೆಗೆ ಕೂಡ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಶಾಯಿ ಪೂರೈಕೆ ಮಾಡಿದೆ.

 karnataka assembly election
Image Credit: karnataka

ಮಾಸ್ಟರಿಂಗ್ ಕಾರ್ಯಪೂರ್ಣಗೊಂಡ ಮೇಲೆ ಮತಗಟ್ಟೆ ಅಧಿಕಾರಿಗಳಿಗೆ ಶಾಯಿಯನ್ನು ನೀಡಲಾಗುತ್ತದೆ. 1937 ರಲ್ಲಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಚುನಾವಣಾ ಆಯೋಗದ ಬೇಡಿಕೆಯ ಮೇರೆಗೆ ಈ ಬಾರಿಯೂ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ.

Join Nadunudi News WhatsApp Group

Join Nadunudi News WhatsApp Group