Fake Sim: ನಿಮಗೆ ತಿಳಿಯದೆ ನಿಮ್ಮ ID ಯಲ್ಲಿ ಬೇರೆಯವರು ಸಿಮ್ ಖರೀದಿಸಿರಬಹುದು….? ಈ ರೀತಿ ಚೆಕ್ ಮಾಡಿ ಸಿಮ್ ಬ್ಲಾಕ್ ಮಾಡಿ

ನಿಮ್ಮ ID ಯಲ್ಲಿ ಯಾರಾದರೂ ಸಿಮ್ ಖರೀದಿ ಮಾಡಿದ್ದರೆ ಚೆಕ್ ಮಾಡಿ ಬ್ಲಾಕ್ ಮಾಡಬಹುದಾಗಿದೆ

Block Fake Sim Cards: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ (Mobile Phone) ಗಳ ಬಳಕೆ ಹೆಚ್ಚಾಗಿವೆ. ಪ್ರತಿಯೊಬ್ಬರೂ ಕೂಡ ಒಂದಕ್ಕಿಂತ ಹೆಚ್ಚಿನ ಸ್ಮಾರ್ಟ್ ಫೋನ್ (Smart Phone) ಗಳನ್ನೂ ಬಳಸುತ್ತಾರೆ. ಇನ್ನು ಮೊಬೈಲ್ ಫೋನ್ ಗಳಿಗೆ ಒಂದಕ್ಕಿತ ಹೆಚ್ಚಿನ ಸಿಮ್ ಗಳನ್ನೂ ಕೂಡ ಹಾಕುತ್ತಾರೆ.

ಇದೀಗ ನೀವು ನಿಮಗೆ ತಿಳಿಯದೆ ನಿಮ್ಮ ID ಯಲ್ಲಿ ಯಾರಾದರೂ ಸಿಮ್ ಖರೀದಿ ಮಾಡಿದ್ದರೆ ಚೆಕ್ ಮಾಡಿ ಬ್ಲಾಕ್ ಮಾಡಬಹುದಾಗಿದೆ. ಹೌದು ನಿಮಗೆ ತಿಳಿಯದೆ ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಖರೀದಿಸುವ ಸಾಧ್ಯತೆ ಇದ್ದು ಅದನ್ನ ನೀವು ಸುಲಭವಾಗಿ ಬ್ಲಾಕ್ ಮಾಡಬಹುದು.

SIM Card Block
Image Credit: Informal News

ಸಿಮ್ ಕಾರ್ಡ್ ವಂಚನೆ
ನಕಲಿ Sim Card ಖರೀದಿಸುವುದು ಮತ್ತು ಮಾರಾಟ ಮಾಡುವುದು ಹಿಂದಿನಿಂದಲೂ ನಡೆಯುತ್ತಿದೆ. ನಿಮಗೆ ತಿಳಿದಿರದೆ ನಿಮ್ಮ ಹೆಸರಿನಲ್ಲಿ ಹಲವಾರು ಸಂಖ್ಯೆಗಳು ಸಕ್ರಿಯವಾಗಿರುತ್ತವೆ. ಇದೀಗ ದೂರಸಂಪರ್ಕ ಇಲಾಖೆ ಸಿಮ್ ಕಾರ್ಡ್ ದುರ್ಬಳಕೆ ತಡೆಯಲು ಹೊಸ ಪೋರ್ಟಲ್ ಅನ್ನು ಪರಿಚಯಿಸಿದೆ. ಈ ಪೋರ್ಟಲ್ ಮೂಲಕ ನೀವು ನಿಮ್ಮ ID ಯಲ್ಲಿ ಚಾಲನೆಯಲ್ಲಿರುವ ನಕಲಿ ಸಿಮ್ ಕಾರ್ಡ್‌ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ನಾವೀಗ ಆ ವೆಬ್ ಸೈಟ್ ಯಾವುದೆಂದು ಇದೀಗ ತಿಳಿದುಕೊಳ್ಳೋಣ.

ಸಿಮ್ ಕಾರ್ಡ್ ದುರ್ಬಳಕೆ ನಿಯಂತ್ರಣಕ್ಕೆ ಹೊಸ ಪೋರ್ಟಲ್
ದೂರಸಂಪರ್ಕ ಇಲಾಖೆ ಇದೀಗ ಸಿಮ್ ಕಾರ್ಡ್ ದುರ್ಬಳಕೆಯನ್ನು ತಡೆಯಲು ಹೊಸ ವೆಬ್ ಸೈಟ್ ಅನ್ನು ಪರಿಚಯಿಸಿದೆ. ಈ ಪೋರ್ಟಲ್ ನ ಹೆಸರು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP). ಒಂದೇ ವ್ಯಕ್ತಿಯ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ ಗಳು ನೋಂದಾಯಿಸಲ್ಪಟ್ಟಿವೆ ಎಂಬುದನ್ನು ತಿಳಿಯಲು ಈ ಪೋರ್ಟಲ್ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೆ ಈ ಪೋರ್ಟಲ್ ಮೂಲಕ ನಕಲಿ ಸಂಖ್ಯೆಯನ್ನು ನಿರ್ಬಂದಿಸಬಹುದಾಗಿದೆ.

Block Fake Sim Cards
Image Credit: AARP

ನಕಲಿ ಸಂಖ್ಯೆಯನ್ನು ನಿರ್ಬಂಧಿಸುವ ಪ್ರಕ್ರಿಯೆ

Join Nadunudi News WhatsApp Group

•TAFCOP ಪೋರ್ಟಲ್‌ಗೆ ಭೇಟಿ ನೀಡಬೇಕು ( https://tafcop.dgtelecom.gov.in/)

•ಸರಿಯಾದ ವಿಳಾಸವನ್ನು ನಮೂದಿಸಬೇಕು. ನಂತರ ನೀವು ಮುಖಪುಟದ ಮಧ್ಯದಲ್ಲಿ ಇನ್ಪುಟ್ ಕ್ಷೇತ್ರವನ್ನು ನೋಡುತ್ತಿರಿ ಹಾಗು OTP ಬರುತ್ತದೆ.

•OTP ಪರಿಶೀಲನೆಯ ನಂತರ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ನೀಡಲಾದ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಪಡೆಯುತ್ತೀರಿ.

•ಸಂಖ್ಯೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಬಳಕೆಯಲ್ಲಿಲ್ಲದ ಸಂಖ್ಯೆಯನ್ನು ಪೋರ್ಟಲ್‌ನಿಂದಲೇ ದೂರಸಂಪರ್ಕ ಇಲಾಖೆಗೆ ವರದಿ ಮಾಡಬೇಕು.

•ಸಂಖ್ಯೆಯನ್ನು ವರದಿ ಮಾಡಲು, ಸಂಖ್ಯೆಯ ಎಡಭಾಗದಲ್ಲಿರುವ ಚೆಕ್‌ಬಾಕ್ಸ್ ಅನ್ನು ಆಯ್ಕೆಮಾಡಿ. ಆ ಸಂಖ್ಯೆಯನ್ನು ನೀವು ಖರೀದಿಸಿದ ನೆನಪಿಲ್ಲದಿದ್ದರೆ “ಇದು ನನ್ನ ಸಂಖ್ಯೆ ಅಲ್ಲ” ಎಂದು ಕ್ಲಿಕ್ ಮಾಡಿ. ನಿಮಗೆ ಇನ್ನು ಮುಂದೆ ಅಗತ್ಯವಿಲ್ಲದ ಸಂಖ್ಯೆಗಳಿಗಾಗಿ “ಅಗತ್ಯವಿಲ್ಲ” ಆಯ್ಕೆಯನ್ನು ಕ್ಲಿಕ್ ಮಾಡಿ.

•ಅಂತಿಮವಾಗಿ ವರದಿ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Join Nadunudi News WhatsApp Group