BPL Ration Card News: ಬಿಪಿಎಲ್ ಪಡಿತರದಾರರಿಗೆ ಸರ್ಕಾರ ನೀಡಿದೆ ಸಿಹಿ ಸುದ್ದಿ,1 ಕೆಜಿ ಹೆಚ್ಚು ಅಕ್ಕಿ ವಿತರಣೆ.

BPL Ration Card News: ಇದೀಗ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ಹೊಸ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರದಿಂದ ಇದೀಗ ಹೊಸ ಆದೇಶವೊಂದು ಹೊರ ಬಿದ್ದಿದೆ.

ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಸಿಹಿ ಸುದ್ದಿ
ಬಿಪಿಎಲ್‌ (BPL) ಪಡಿತರದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಫಲಾನುಭವಿಗಳಿಗೆ ಈವರೆಗೆ ವಿತರಿಸುತ್ತಿದ್ದ 5 ಕೆಜಿ ಜೊತೆಗೆ 1 ಕೆಜಿ ಹೆಚ್ಚುವರಿಯಾಗಿ ಅಕ್ಕಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತಿತ್ತು. ಈಗ 1 ಕೆಜಿ ಹೆಚ್ಚುವರಿ ಸೇರಿದಂತೆ ಒಟ್ಟು 6 ಕೆಜಿ ಅಕ್ಕಿ ವಿತರಿಸಲಾಗುವುದು. ಜನವರಿ 1ರಿಂದಲೇ ಈ ಆದೇಶ ಜಾರಿಗೊಂಡಿದೆ ಎಂದು ಸರ್ಕಾರ ತಿಳಿಸಿದೆ.

Karnataka Ration Card 2023
Image Credit: Deccan Herald

ಸರ್ಕಾರದಿಂದ ಸಿಕ್ಕಿದೆ ಪಡಿತರ ಚೀಟಿ ಹೊಂದಿರುವವರಿಗೆ ಸಿಹಿ ಸುದ್ದಿ
ಇದೀಗ ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ಹೆಚ್ಚುವರಿಯಾಗಿ ಅಕ್ಕಿ ವಿತರಣೆ ಮಾಡುವ ಆದೇಶ ಕೈಗೊಂಡಿದೆ.

ಈಗಾಗಲೇ ಸರ್ಕಾರದಿಂದ ಆದೇಶ ಜಾರಿ ಆಗಿದ್ದು, ಇನ್ನೇನು ಸದ್ಯದಲ್ಲೇ ಈ ಯೋಜನೆಯ ಫಲ ಸಿಗಲಿದೆ. ಚುನಾವಣೆ ಸಮೀಪ ಇರುವ ಹೊತ್ತಿನಲ್ಲಿಯೇ ಸರ್ಕಾರ ಆದೇಶ ಹೊರಡಿಸಿದೆ.

Image Credit: Deccan Herald

ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramayya) ಅವರು ಸಮಾವೇಶವೊಂದರಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಡಿತರಾದಾರರಿಗೆ 10 ಕೆ ಜಿ ಅಕ್ಕಿ ವಿತರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲಿಯೇ ಸರ್ಕಾರ ಸದ್ಯ ನೀಡುತ್ತಿರುವ ಪಡಿತರ ಜೊತೆಗೆ 1 ಕೆಜಿ ಹೆಚ್ಚುವರಿ ಅಕ್ಕಿ ನೀಡುವುದಾಗಿ ತಿಳಿಸಿದೆ.

Join Nadunudi News WhatsApp Group

ಬಡವರಿಗೆ ಸರ್ಕಾರ ಸಹಾಯ ಆಗಲು ಇದೀಗ ಹೊಸ ರೀತಿಯ ಯೋಜನೆಯನ್ನು ಕೈಗೊಂಡಿದೆ. ರೇಷನ್ ಕಾರ್ಡ್ ಹೊಂದಿರುವವರಿಗೆ ತಲಾ 5 ಕೆಜಿ ಅಕ್ಕಿ ಜೊತೆಗೆ 1 ಕೆ ಜಿ ಅಕ್ಕಿ ಹೆಚ್ಚು ವಿತರಿಸಲಾಗುವುದು. ಸರ್ಕಾರದ ಈ ಯೋಜನೆಯಿಂದ ಸಾಮಾನ್ಯ ಜನರಿಗೆ ಇನ್ನಷ್ಟು ಅನುಕೂಲವಾಗುತ್ತದೆ.

Join Nadunudi News WhatsApp Group