BPL Card : BPL ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ, ಈ ನಿಯಮ ಪಾಲಿಸದಿದ್ದರೆ ಕಾರ್ಡ್ ರದ್ದು.

ನಿಮ್ಮ ರೇಷನ್ ಕಾರ್ಡ್ ಉಳಿಸಿಕೊಳ್ಳಲು ನೀವು ಪಾಲಿಸಬೇಕಾದ ನಿಯಮಗಳು.

BPL Ration Card  Latest Update: ದೇಶದಲ್ಲಿ BPL Ration Card ಗೆ ಹೆಚ್ಚಿನ ಮಹತ್ವವಿದೆ. ಬಡತನ ರೇಖೆಗಿಂತ ಕೆಳಗಿರುವವರು ಯಾವುದೇ ರೀತಿಯ ಕೊರತೆಯನ್ನು ಅನುಭವಿಸಬಾರದು ಎನ್ನುವ ದೃಷ್ಟಿಯಿಂದ ಸರ್ಕಾರ ಉಚಿತ ಪಡಿತರನ್ನು ನೀಡಲು BPL Ration Card ಅನ್ನು ನೀಡಿದೆ.

ಈ BPL Ration card ನ ಮೂಲಕ ಸರ್ಕಾರ ವಿವಿಧ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ. ಕಾಂಗ್ರೆಸ್ ಸರ್ಕಾರದ ಐದು ಉಚಿತ ಗ್ಯಾರಂಟಿಗಳಿಗೂ BPL Ration Card ಮುಖ್ಯವಾಗಿದೆ. ಸದ್ಯ ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ.

BPL Ration Card
Image Credit: Original Source

BPL Ration Card
BPL Ration Card ಅನ್ನು ಪಡೆಯಲು ಯಾರು ಅರ್ಹರು ಎನ್ನುವ ಬಗ್ಗೆ ಕೂಡ ಸರ್ಕಾರ ಸ್ಪಷ್ಟಪಡಿಸಿದೆ. ಇನ್ನು ಅನರ್ಹರು BPL Ration Card ಅನ್ನು ಹೊಂದಿದ್ದಾರೆ ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಕೂಡ ಸರ್ಕಾರ ಮುಂದಾಗಿದೆ. ಇನ್ನು ನೀವು ನಿಮ್ಮ ಬಳಿ ಇರುವ Ration Card ಅನ್ನು ರದ್ದುಪಡಿಸಿಕೊಳ್ಳದೆ ಸರ್ಕಾರದ ಎಲ್ಲ ಪ್ರಯೋಜನವನ್ನು ಪಡೆಯಲು ಎಲ್ಲ ನಿಯಮವನ್ನು ಪಾಲಿಸಬೇಕಾಗುತ್ತದೆ.  BPL Ration Card ಅನ್ನು ಪಡೆಯಲು ಯಾವೆಲ್ಲ ನಿಯಮವನ್ನು ಪಾಲಿಸಬೇಕು ಎನ್ನುವುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ನಿಮ್ಮ ರೇಷನ್ ಕಾರ್ಡ್ ಉಳಿಸಿಕೊಳ್ಳಲು ನೀವು ಪಾಲಿಸಬೇಕಾದ ನಿಯಮಗಳು
*ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಆರ್ಥಿಕವಾಗಿ ಸಬಲರಾಗಿರುವವರು  BPL Ration Card ಅನ್ನು ಪಡೆಯಲು ಅನರ್ಹರಾಗಿರುತ್ತಾರೆ.

*ವಾರ್ಷಿಕ ಆದಾಯ 1 .2 ಲಕ್ಷ ಮೀರಬಾರದು ಹಾಗೆಯೆ 3 ಹೆಕ್ಟೇರ್ ಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿರಬಾರದು.

Join Nadunudi News WhatsApp Group

BPL Ration Card  Latest Update
Image Credit: Kannada News Today

*ನಗರ ಪ್ರದೇಶದಲ್ಲಿ 1000 ಸ್ವೇರ್ ಪೀಟ್ ಒಳಗೆ ಮನೆ ನಿರ್ಮಾಣವಾಗಿರಬೇಕು.

*ಸರ್ಕಾರೀ ನೌಕರರು BPL ಕಾರ್ಡ್ ಹೊಂದುವಂತಿಲ್ಲ ಹಾಗೆಯೆ ಆದಾಯ ತೆರಿಗೆ ಪಾವತಿಸುವವರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರಾಗಿರುತ್ತಾರೆ.

*ಕಳೆದ 6 ತಿಂಗಳಿನಿಂದ ಯಾರು ಪಡಿತರನ್ನು ಪಡೆಯುವುದಿಲ್ಲವೋ ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ.

Join Nadunudi News WhatsApp Group