BPL Card: ಹೊಸ BPL ರೇಷನ್ ನಿರೀಕ್ಷೆಯಲ್ಲಿ ಇದ್ದವರಿಗೆ ಗುಡ್ ನ್ಯೂಸ್, ಈ ರೀತಿಯಾಗಿ ಇಂದೇ ಅರ್ಜಿ ಸಲ್ಲಿಸಿ.

ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿ ಇದ್ದವರು ಈಗ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

New Ration Card Application: ಜನಸಾಮಾನ್ಯರ ನೆರವಿಗಾಗಿ ಸರ್ಕಾರ ಉಚಿತ ಪಡಿತರನ್ನು (Ration) ನೀಡುತ್ತದೆ. ದೇಶದ ಅದೆಷ್ಟೋ ಬಡ ನಾಗರಿಕರು ಈ ಉಚಿತ ಪಡಿತರ ವಿತರಣೆಯ ಲಾಭವನ್ನು ಪಡೆಯುತ್ತಾರೆ. ಇನ್ನು ಸರ್ಕಾರ ಪಡಿತ ವಿತರಣೆಯಲ್ಲಿ ಇತ್ತೀಚಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಹೊಸ ಸೌಲಭ್ಯದ ಜೊತೆಗೆ ವಿವಿಧ ನಿಯಮಗಳನ್ನು ಜಾರಿಗೊಳಿಸುತ್ತಿದೆ.

ಇನ್ನು ಪಡಿತರ ವಿತರಣೆಯಲ್ಲಿ ಬಿಪಿಎಲ್ ಕಾರ್ಡ್ (BPL) ಹೊಂದಿರುವವರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ದೇಶದ ಬಡ ಕುಟುಂಬಗಳಿಗೆ ಮಾತ್ರ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಅನ್ನು ವಿತರಿಸಲಾಗುತ್ತದೆ. ಅದೇ ರೀತಿಯಲ್ಲಿ ಆರ್ಥಿಕವಾಗಿ ಸಬಲರಾಗಿರುವ ಕುಟುಂಬಕ್ಕೆ APL ಕಾರ್ಡ್ ವಿತರಣೆ ಮಾಡಲಾಗುತ್ತದೆ.

Those who were expecting new ration card can now apply.
Image Credit: rightsofemployees

ಹೊಸ BPL ಕಾರ್ಡ್ ನಿರೀಕ್ಷೆಯಲ್ಲಿ ಇದ್ದವರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಇದೀಗ ಆಹಾರ ಇಲಾಖೆ ಹೊಸ BPL ಕಾರ್ಡ್ ನಿರೀಕ್ಷೆಯಲ್ಲಿ ಇದ್ದವರಿಗೆ ಗುಡ್ ನ್ಯೂಸ್ ನೀಡಿದೆ. ಇಂದಿನಿಂದ ಹೊಸತಾಗಿ ಬಿಪಿಎಲ್ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅವಕಾಶ ನಿಸಲಾಗಿದೆ.

ಈ ಹಿಂದೆ ಚುನಾವಣೆಯ ಹಿನ್ನಲೆ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯನ್ನು ನಿಲ್ಲಿಸಿತ್ತು. ಆದರೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತೆ ಆರಂಭಗೊಳ್ಳಲಿದೆ. ನೀವು ಬಿಪಿಎಲ್ ಕಾರ್ಡ್ ಪಡೆಯುವ ನಿರೀಕ್ಷೆಯಲ್ಲಿದ್ದರೆ ಇಂದೇ ಅರ್ಜಿ ಸಲ್ಲಿಸಬಹುದು.

Those who were expecting new ration card can now apply.
Image Credit: businessleague

ನಕಲಿ ರೇಷನ್ ಕಾರ್ಡ್ ಗಳನ್ನೂ ರದ್ದುಗೊಳಿಸಿದ ಸರ್ಕಾರ
ಇನ್ನು 33,002 ರೇಷನ್ ಕಾರ್ಡ್ ಗಳನ್ನೂ ರದ್ದು ಮಾಡಿರುವ ಬಗ್ಗೆ ಆಹಾರ ಇಲಾಖೆ ಮಾಹಿತಿ ನೀಡಿದೆ. 21,679 ಅಂತ್ಯೋದಯ ಕಾರ್ಡ್ ಗಳನ್ನೂ ರದ್ದು ಮಾಡಲಾಗಿದೆ. ಇನ್ನು 17,338 ಸರ್ಕಾರೀ ನೌಕರರ ಬಿಪಿಎಲ್ ಕಾರ್ಡ್ ಗಳನ್ನೂ ರದ್ದು ಮಾಡಲಾಗಿದೆ.

Join Nadunudi News WhatsApp Group

ನಕಲಿ ರೇಷನ್ ಕಾರ್ಡ್ ಗಳನ್ನೂ ಪಡೆದು ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಕಾರಣದಿಂದ ಆಹಾರ ಇಲಾಖೆ ಹೆಚ್ಚಿನ ಜನರ ರೇಷನ್ ಕಾರ್ಡ್ ಗಳನ್ನೂ ರದ್ದು ಮಾಡಿದೆ.

Join Nadunudi News WhatsApp Group