Free Internet: BSNL ಸಿಮ್ ಇದ್ದವರಿಗೆ ಗುಡ್ ನ್ಯೂಸ್, ಪ್ರತಿದಿನ 5 ಘಂಟೆ ಇಂಟರ್ನೆಟ್ ಉಚಿತ.

BSNL ತನ್ನ ಗ್ರಾಹಕರಿಗೆ ಉಚಿತ ಇಂಟರ್ನೆಟ್ ನೀಡುವ ಹೊಸ ಯೋಜನೆಯನ್ನು ಪರಿಚಯಿಸಿದೆ.

BSNL Free Internet Plan: ಸರ್ಕಾರದಿಂದ ಮಾನ್ಯತೆ ಪಡೆದಿರುವ ಟೆಲಿಕಾಂ ಕಂಪನಿಯಾಗಿರುವ BSNL ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ ಎಂದರೆ ತಪ್ಪಾಗಲ್ಲ. ದೇಶದಲ್ಲಿ ಕೋಟ್ಯಾಂತರ ಜನರು ಮತ್ತು ಸಾಕಷ್ಟು ಕಂಪನಿಗಳು BSNL ನೆಟ್ವರ್ಕ್ ಮೇಲೆ ಅವಲಂಬಿತರಾಗಿದ್ದಾರೆ. BSNL ನೆಟ್ವರ್ಕ್ ಕಡಿಮೆ ವೇಗವನ್ನು ಹೊಂದಿದೆ. ಈ ಕಾರಣಕ್ಕಾಗಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳಿದ್ದರು ಹೆಚ್ಚಿನ ಜನರು ಖರೀದಿಸುದಿಲ್ಲ.

ತನ್ನ ಬಳಕೆದಾರರಿಗೆ ಹೆಚ್ಚಿನ ವೇಗದ ನೆಟ್ವರ್ಕ್ ನೀಡಲು BSNL 4G ಸೇವೆ ನೀಡಲು ಮುಂದಾಗಿದೆ. BSNL 2024 ರ ವೇಳೆಗೆ ದೇಶದ ಎಲ್ಲಾ ಭಾಗಗಳಲ್ಲಿ 4G ಸೇವೆಗಳನ್ನು ಪರಿಚಯಿಸುವ ಗುರಿಯನ್ನು ಇಟ್ಟುಕೊಂಡಿದೆ. ಇದೀಗ BSNL ತನ್ನ ಗ್ರಾಹಕರಿಗೆ ಉಚಿತ ಇಂಟರ್ನೆಟ್ ನೀಡುವ ಹೊಸ ಯೋಜನೆಯನ್ನು ಪರಿಚಯಿಸಿದೆ.

BSNL Free Internet Plan
Image Credit: India TV News

BSNL ಗ್ರಾಹಕರಿಗೆ 4G ಸೇವೆ
BSNL ತನ್ನ ಸೇವೆಯನ್ನು ವೇಗವಾಗಿಸಲು 4G ನೆಟ್ವರ್ಕ್ ಬಿಡುಗಡೆಗೊಳಿಸುವ ಸಿದ್ಧತೆಯಲ್ಲಿದೆ. BSNL ಅಂತಿಮವಾಗಿ ದೇಶದಲ್ಲಿ 4G ಸೇವೆಯನ್ನು ಪರಿಚಯಿಸಲಿದ್ದು ಈ ಬಗ್ಗೆ ವರದಿ ನೀಡಿದೆ. BSNL 2024 ರ ವೇಳೆಗೆ ದೇಶದ ಎಲ್ಲಾ ಭಾಗಗಳಲ್ಲಿ 4G ಸೇವೆಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ.

ಇದಕ್ಕಾಗಿ BSNL ಇತ್ತೀಚೆಗೆ ತನ್ನ 4G ನೆಟ್‌ವರ್ಕ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದರ ಬೆನ್ನಲ್ಲೇ BSNL ತನ್ನ ಗ್ರಾಹಕರಿಗೆ ಉಚಿತ ಇಂಟರ್ನೆಟ್ ನೀಡುವ ಯೋಜನೆಯನ್ನು ಸಹ ಪರಿಚಯಿಸಲು ಹೊರಟಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

BSNL New Recharge Plan
Image Credit: Telecomtalk

ಉಚಿತ ಇಂಟರ್ನೆಟ್ ಯೋಜನೆ ಪರಿಚಯಿಸಿದ BSNL
ಸದ್ಯ BSNL ಕಂಪನಿ ಪರಿಚಯಿಸಿರುವ ರಿಚಾರ್ಜ್ ಪ್ಲಾನ್ ವಿವಿಧ ಟೆಲಿಕಾಂ ಕಂಪನಿಗಳಿಗೆ ಹೆಚ್ಚಿನ ಶಾಕ್ ನೀಡಲಿದೆ. BSNL ನ ಹೊಸ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 5 ಗಂಟೆಗಳ ಉಚಿತ ಇಂಟರ್ನೆಟ್ (Free Internet ) ಸೇವೆಯನ್ನು ಪಡೆಯಬಹುದಾಗಿದೆ. BSNL ಪರಿಚಯಿಸಿರುವ ಹೊಸ ರಿಚಾರ್ಜ್ ಪ್ಲಾನ್ ನ ಬೆಲೆ 599 ರೂಪಾಯಿ ಆಗಿದೆ. ಇನ್ನು BSNL ನ ಹೊಸ 599 ರೂಪಾಯಿ ಯೋಜನೆಯು ಬಳಕೆದಾರರಿಗೆ 84 ದಿನಗಳ ಮಾನ್ಯತೆಯನ್ನು ನೀಡುತ್ತದೆ.

Join Nadunudi News WhatsApp Group

ಉಚಿತ ಕರೆಯ ಜೊತೆಗೆ ಪ್ರತಿನಿತ್ಯ 100 SMS ಗಳ ಸೌಲಭ್ಯವನ್ನು ನೀಡುತ್ತದೆ. ಈ ಯೋಜನೆಯಲ್ಲಿ ನೀವು ಉಚಿತ BSNL Tune ಅನ್ನು ಸಹ ಪಡೆದುಕೊಳ್ಳಬಹುದು. BSNL ನ 599 ರೂಪಾಯಿ ಯೋಜನೆಯನ್ನು ಸಕ್ರಿಯಗೊಳಿಸಿಕೊಳ್ಳುವುದರಿಂದ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 5 ರ ವರೆಗೆ ಉಚಿತ ಅನಿಯಮಿತ ಡೇಟಾವನ್ನು ಪಡೆದುಕೊಳಬಹುದು. ಈ ಸಮಯದಲ್ಲಿ ನೀವು ದೈನಂದಿನ ವೆಚ್ಚದ ಡೇಟಾವನ್ನು ಕಳೆದುಕೊಳ್ಳುವುದಿಲ್ಲ.

Join Nadunudi News WhatsApp Group