Sunroof In Car: ಕಾರ್ ಗಳಲ್ಲಿ Sunroof ಇರುವುದು ಎಷ್ಟು ಒಳ್ಳೆಯದು, ಸ್ಯಾನ್ ರೂಫ್ ಖರೀದಿಸುವ ಮುನ್ನ ಎಚ್ಚರ ದೆಯೇ..?

ಕಾರ್ ನಲ್ಲಿ ಈ Sunroof ಫೀಚರ್ ಇರುದರಿಂದ ಯಾವುದಾದರು ತೊಂದರೆ ಆಗುತ್ತದೆಯೇ...?

Car Sunroof Information: ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ವಿನ್ಯಾಸದ ಕಾರುಗಳು ಲಾಂಚ್ ಆಗುತ್ತಿದೆ. ಕಾರ್ ವಿನ್ಯಾಸ ಹೇಗಿದೆ ಎನ್ನುವದರ ಮೇಲು ಕಾರ್ ನ ಬೇಡಿಕೆ ಅವಲಂಬಿಸಿರುತ್ತದೆ. ಕಾರ್ ಆಕರ್ಷಕ ಲುಕ್ ನಲ್ಲಿದ್ದರೆ ಜನರು ಅಂತಹ ಕಾರ್ ಅನ್ನು ಖರೀದಿಸಲು ಇಚ್ಛಿಸುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ಐಷಾರಾಮಿ ಕಾರ್ ಗಳನ್ನೂ ಪರಿಚಯಿಸಿದೆ. ಐಷಾರಾಮಿ ಕಾರ್ ಗಳು ದುಬಾರಿ ಬೆಲೆಯಲ್ಲಿ ಪರಿಚಯವಾಗಿರುವುದರ ಜೊತೆಗೆ ಸಾಕಷ್ಟು ಅತ್ಯಾಧುನಿಕ ಫೀಚರ್ ಅನ್ನು ಕೂಡ ಹೊಂದಿರುತ್ತದೆ.

Car Sunroof Information
Image Credit: Cars 24

ಕಾರ್ ಗಳಲ್ಲಿ Sunroof ಇರುವುದು ಎಷ್ಟು ಒಳ್ಳೆಯದು…!
ಇನ್ನು ಕಾರ್ ನ ಐಷಾರಾಮಿ ನೋಟದಲ್ಲಿ Sunroof  ಕೂಡ ಒಂದಾಗಿದೆ. ಕಾರ್ ನಲ್ಲಿ ಸನ್ ರೂಫ್ ಇದ್ದರೆ ಆ ಕಾರಣ ಸಂಪೂರ್ಣ ಲುಕ್ ಬಾರಿ ಆಕರ್ಷಣೀಯವಾಗಿರುತ್ತದೆ. ಇನ್ನು ಕಾರ್ ನಲ್ಲಿ Sunroof ಇರುವುದು ಎಷ್ಟು ಒಳ್ಳೆಯದು..? ಕಾರ್ ನ ಸುರಕ್ಷತೆಗೆ ಈ Sunroof ಅಡ್ಡಿಯಾಗುತ್ತದೆಯೇ..? ಎನ್ನುವ ಬಗ್ಗೆ ಸಾಕಷ್ಟು ಗೊಂದಲಗಳು ಹುಟ್ಟಿಕೊಂಡಿರಬಹುದು.

ಕಾರ್ ನಲ್ಲಿಯೇ ಕುಳಿತು ಆಗಸವನ್ನ ವೀಕ್ಷಿಸುವಂತ ಅತ್ಯದ್ಭುತ ಅನುಭಾವವನ್ನು ನೀಡು ಈ Sunroof ಫೀಚರ್ ನಿಂದ ಯಾವುದಾದರು ತೊಂದರೆ ಆಗುತ್ತದೆಯೇ ಎನ್ನುವ ಬಗ್ಗೆ ತಜ್ಞರ ಅಭಿಪ್ರಾಯವನ್ನು ತಿಳಿಯೋಣ.

ಕಾರ್ ನ ಸುರಕ್ಷತೆಗೆ ಈ Sunroof ಅಡ್ಡಿಯಾಗುತ್ತದೆಯೇ..?
ಸನ್‌ ರೂಫ್ ಅನ್ನು ಸ್ಥಾಪಿಸಲು, ಕಾರಿನ ಮೇಲ್ಛಾವಣಿಯಿಂದ ಕೆಲವು ಲೋಹವನ್ನು ತೆಗೆದುಹಾಕಲಾಗುತ್ತದೆ, ಅಲ್ಲಿ ಗಾಜು ಇರಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಕಾರಿನ ರಚನೆಯ ಬಲವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕಾರು ಕಂಪನಿಗಳು ಇದರತ್ತ ಗಮನ ಹರಿಸುತ್ತವೆ.

ಸನ್‌ ರೂಫ್‌ ಗಳನ್ನು ಸ್ಥಾಪಿಸುವುದರಿಂದ ಕಾರಿನ ಒಟ್ಟಾರೆ ಸುರಕ್ಷತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಕಂಪನಿಯಿಂದಲೇ ಕಾರಿಗೆ ಸನ್‌ ರೂಫ್ ಅಳವಡಿಸಿದರೆ ಅದು ಸೂಕ್ತವಾಗಿರುತ್ತದೆ. ಇದರಿಂದ ಕಾರ್ ರಚನೆಯ ಬಲಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ಅಳವಡಿಸಿಕೊಂಡರೆ ಇದರಿಂದ ಕಾರಿನ ಸುರಕ್ಷತೆಗೆ ತೊಂದರೆಯಾಗಬಹುದು ಎಚ್ಚರ.

Join Nadunudi News WhatsApp Group

Join Nadunudi News WhatsApp Group