Limits Of Cash: ಮನೆಯಲ್ಲಿ ಹಣ ಇಟ್ಟುಕೊಳ್ಳುವ ನಿಯಮದಲ್ಲಿ ಬದಲಾವಣೆ, ಇದಕ್ಕಿಂತ ಹೆಚ್ಚು ಹಣ ಇಟ್ಟರೆ ಕಟ್ಟಬೇಕು ತೆರಿಗೆ

ಮಿತಿಗಿಂತ ಹೆಚ್ಚು ಹಣವನ್ನ ಮನೆಯಲ್ಲಿ ಇಟ್ಟರೆ ಎಷ್ಟು ತೆರಿಗೆ ಕಟ್ಟಬೇಕು...?

Cash Limit At Home 2024: ಸದ್ಯ ಎಲ್ಲೆಡೆ ಡಿಜಿಟಲ್ ಪಾವತಿ ಹೆಚ್ಚುತ್ತಿದೆ. ಜನರು ನಗದು ವಹಿವಾಟನ್ನು ಮಾಡುವ ಬದಲು ಹೆಚ್ಚಾಗಿ ಆನ್ಲೈನ್ ಪಾವತಿಯನ್ನೇ ಮಾಡುತ್ತಾರೆ. ಹೀಗಾಗಿ ಜನರು ತಮ್ಮ ಕೈಯಲ್ಲಿ ಹಣವನ್ನು ಇಟ್ಟುಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ.

ಇನ್ನು ಕೆಲವೊಮ್ಮೆ ಅನಿವಾರ್ಯ ಕಾರಣಗಳಿಗಾಗಿ ಹಣದ ಅವಶ್ಯಕೆತೆ ಇರುತ್ತದೆ ಎಂದು ಜನರು ಮನೆಯಲ್ಲಿ ಸ್ವಲ್ಪ ಹಣವನ್ನು ಸಂಗ್ರಹಿಸಿಡುತ್ತಾರೆ. ಆದರೆ ಸರ್ಕಾರದ ನಿಯಮವನ್ನು ನೋಡುವುದಾದರೆ, ಮನೆಯಲ್ಲಿ ಇಡಬಹುದಾದ ಹಣಕ್ಕೂ ಮಿತಿಯನ್ನು ಅಳವಡಿಸಲಾಗಿದೆ. ಮಿತಿಗಿಂತ ಹೆಚ್ಚಿನ ಹಣವನ್ನು ಮನೆಯಲ್ಲಿ ಇಟ್ಟುಕೊಂಡರೆ ತೆರಿಗೆ ಪಾವತಿಸಬೇಕಾಗುತ್ತದೆ.

Cash Limit Rules
Image Credit: Original Source

ಮನೆಯಲ್ಲಿ ನಗದು ಇಡಬಹುದಾದ ಮಿತಿಯ ಬಗ್ಗೆ ಸರ್ಕಾರದ ನಿಯಮವೇನೂ..?
ಆದಾಯ ತೆರಿಗೆಯ ನಿಯಮಗಳ ಪ್ರಕಾರ, ನಿಮ್ಮ ಮನೆಯಲ್ಲಿ ನೀವು ಹೆಚ್ಚಿನ ಹಣವನ್ನು ಇಟ್ಟುಕೊಳ್ಳಬಹುದು. ಮನೆಯಲ್ಲಿ ಇರಿಸಿಕೊಳ್ಳುವ ಹಣಕ್ಕೆ ಯಾವುದೇ ಮಿತಿಯಿಲ್ಲ. ಆದರೆ ತೆರಿಗೆ ಇಲಾಖೆಯವರು ಸಂಬಂಧಪಟ್ಟ ಹಣದ ದಾಖಲೆಯನ್ನು ಕೇಳಿದಾಗ ಸೂಕ್ತ ಮಾಹಿತಿ ನೀಡಬೇಕಾಗುತ್ತದೆ. ಕಾನೂನುಬದ್ಧವಾಗಿ ಆ ಹಣವನ್ನು ಗಳಿಸಿದ್ದರೆ ಸಂಪೂರ್ಣ ದಾಖಲೆಯನ್ನು ನೀಡಬೇಕು. ಹೆಚ್ಚಿನ ಹಣಗಳಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ ಚಿಂತಿಸುವ ಅಗತ್ಯವಿಲ್ಲ.

ಮಿತಿಗಿಂತ ಹೆಚ್ಚು ಹಣವನ್ನ ಮನೆಯಲ್ಲಿ ಇಟ್ಟರೆ ಎಷ್ಟು ತೆರಿಗೆ ಕಟ್ಟಬೇಕು…?
•ದಾಖಲೆಗಳಿಲ್ಲದ ಹಣಗಳಿಗೆ ಹೆಚ್ಚಿನ ದಂಡವನ್ನು ಕಟ್ಟಬೇಕಾಗುತ್ತದೆ. ನಿಮ್ಮಿಂದ ಮರುಪಡೆಯಲಾದ ನಗದು ಮೊತ್ತಕ್ಕೆ ಆ ಮೊತ್ತದ 137 % ವರೆಗೆ ತೆರಿಗೆ ವಿಧಿಸಬಹುದು.

•ನಿಮ್ಮ ಬಳಿ ಇರುವ ನಗದು ಮೊತ್ತದ 37 % ಪಾವತಿಸಬೇಕಾಗುತ್ತದೆ. ಇನ್ನು ನೀವು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ, ಅಥವಾ ಒಮ್ಮೆಲೇ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ ಬ್ಯಾಂಕ್ ನಲ್ಲಿ ಹಣವನ್ನು ಹಿಂಪಡೆಯುವಾಗ ಪಾನ್ ಹಾಗೂ ಆಧಾರ್ ದಾಖಲೆಗಳನ್ನು ನೀಡಬೇಕಾಗುತ್ತದೆ.

Join Nadunudi News WhatsApp Group

Cash Limit At Home
Image Credit: Navbharat Times

•ಇನ್ನು ಬ್ಯಾಂಕಿನಲ್ಲಿ 2 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಹಿಂಪಡೆದರೆ TDS ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.

•ಅದೇ ರೀತಿಯಲ್ಲಿ ಮನೆಯಲ್ಲಿ 20 ಲಕ್ಷ ರೂಪಾಯಿಯಿಂದ ಹೆಚ್ಚಿನ ನಗದು ಇಟ್ಟುಕೊಳ್ಳುವುದು ಕಾನೂನು ಬಾಹಿರ ಕೂಡ ಆಗಿದೆ. 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನ ಮನೆಯಲ್ಲಿ ಇಟ್ಟುಕೊಂಡರೆ ತೆರಿಗೆ ಇಲಾಖೆ ದಾಳಿ ಮಾಡಿದ ಸಮಯದಲ್ಲಿ ಅಗತ್ಯ ದಾಖಲೆ ಸಲ್ಲಿಸಬೇಕು.

•30 ಲಕ್ಷಕ್ಕಿಂತ ಹೆಚ್ಚಿನ ನಗದು ಆಸ್ತಿಯನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಯಾವುದೇ ವ್ಯಕ್ತಿ ತನಿಖಾ ಸಂಸ್ಥೆಯ ರೆಡಾರ್ ಅಡಿಯಲ್ಲಿ ಬರಬಹುದು.

•ಒಂದು ದಿನದಲ್ಲಿ ಸಂಬಂಧಿಕರಿಂದ 2 ಲಕ್ಷ ರೂ.ಗಿಂತ ಹೆಚ್ಚು ನಗದು ತೆಗೆದುಕೊಳ್ಳುವಂತಿಲ್ಲ.

Join Nadunudi News WhatsApp Group