DA Hike: ಸರ್ಕಾರೀ ನೌಕರರಿಗೆ ಇನ್ನೊಮ್ಮೆ ಗುಡ್ ನ್ಯೂಸ್, ಮತ್ತೆ ಸಂಬಳದಲ್ಲಿ ಇಷ್ಟು ಹೆಚ್ಚಳ

ಈ ಬಾರಿ ಕೇಂದ್ರ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ...? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

DA Hike Latest Update: ಸದ್ಯ ಕೇಂದ್ರ ನೌಕರರ ಬಹುದಿನದ ಬೇಡಿಕೆಯಾಗಿರುವ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಸಾಕಷ್ಟು Update ಹೊರಬೀಳುತ್ತದೆ. ಸದ್ಯ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಬಿಗ್ Update ಹೊರಬಿದ್ದಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರವು ತನ್ನ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈನಲ್ಲಿ ಹೆಚ್ಚಿಸುತ್ತದೆ. ಇದು ಜನವರಿ ತಿಂಗಳಿಂದಲೇ ಅನ್ವಯವಾಗುವಂತೆ ಮೂಲ ವೇತನದ ಜೊತೆಗೆ ನೌಕರರಿಗೆ ಲಭ್ಯವಾಗಲಿದೆ. ಹಾಗಾದರೆ ಕೇಂದ್ರವು ಎಷ್ಟು ಶೇಕಡಾವಾರು ವೇತನವನ್ನು ಹೆಚ್ಚಳ ಮಾಡಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

DA Hike Latest Update
Image Credit: Informalnewz

ಕೇಂದ್ರ ನೌಕರರಿಗೆ ಗುಡ್ ನ್ಯೂಸ್
ಕೇಂದ್ರ ಸರ್ಕಾರವು CPI -IW ಆಧಾರದ ಮೇಲೆ ನೌಕರರಿಗೆ ತುಟ್ಟಿಭತ್ಯೆ ನೀಡಲಿದೆ ಎಂದು ತಿಳಿಸಲಾಗಿದೆ. ಕಾರ್ಮಿಕ ಸಚಿವಾಲಯದ ಪ್ರತಿ ಶಾಖೆಯ labor bureau CPI-IW ಪ್ರಕಟಣೆಯನ್ನು ನೀಡುತ್ತದೆ. 7 ನೇ ವೇತನ ಆಯೋಗದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, Gratuity ಸೂತ್ರವು ಸಂಬಳ ಪಡೆಯುವ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನ್ವಯಿಸುತ್ತದೆ.

ಕೇಂದ್ರ ಸರ್ಕಾರವು ಈ ಬಾರಿ ತುಟ್ಟಿಭತ್ಯೆಯನ್ನು (DA) ಶೇಕಡ 4ರಷ್ಟು ಹೆಚ್ಚಿಸಬಹುದು. ಇದರಿಂದ ನೌಕರರ ವೇತನ ಹೆಚ್ಚಳವಾಗಲಿದೆ. ಈ Gratuity ಯು ಎಲ್ಲಾ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳದ ಭಾಗವಾಗಲಿದೆ. ಇದನ್ನು ಕಾಲಕಾಲಕ್ಕೆ ನೀಡುವುದರಿಂದ ಹಣದುಬ್ಬರದ ಸಮಸ್ಯೆ ಉಲ್ಬಣಗೊಳ್ಳದಂತೆ ತಡೆಯಲಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಕಾಲಕಾಲಕ್ಕೆ ಪರಿಷ್ಕರಣೆ ಮಾಡಲಿದೆ.

Central Employees DA Hike
Image Credit: Khetkhajana

ಈ ಬಾರಿ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ…?
ಕೇಂದ್ರ ಸರ್ಕಾರಿ ನೌಕರನಿಗೆ ತಿಂಗಳಿಗೆ 53,500 ರೂ ಮೂಲ ವೇತನ ಸಿಗುತ್ತದೆ. ಅವರ ತುಟ್ಟಿಭತ್ಯೆ 46% ರಷ್ಟು ಹೆಚ್ಚಾದರೆ, ರೂ. 24,610 DA ಆಗಿರುತ್ತದೆ. ಆದರೆ ಈಗ ಶೇ.50ಕ್ಕೆ ಏರಿಕೆಯಾಗಲಿದೆ ಎನ್ನಲಾಗಿದೆ. ಅಂದರೆ ಅವರ ಕನಿಷ್ಠ ಭತ್ಯೆ ಈಗ 26,750 ರೂ. ಇದೆ. ಅಂದರೆ ಅವರ ತಿಂಗಳ ಸಂಬಳ 26750 -24610 = 2140 ರೂಪಾಯಿಗಳು. ಶೇ. 4 ರಷ್ಟು ತುಟ್ಟಿಭತ್ಯೆಯೆಯನ್ನು ಹೆಚ್ಚಾಗಿ ಲೆಕ್ಕ ಹಾಕಲಾಗಿದೆ. ಈ ಲೆಕ್ಕಾಚಾರವನ್ನು ವಾರ್ಷಿಕವಾಗಿ ಮಾಡಿದರೆ, ಒಬ್ಬ ಉದ್ಯೋಗಿಗೆ ವಾರ್ಷಿಕ ವೇತನದಲ್ಲಿ 25,680 ರೂ.ಗಳಷ್ಟು ಹೆಚ್ಚಳವಾಗುತ್ತದೆ ಎಂದು ಹೇಳಬಹುದು.

Join Nadunudi News WhatsApp Group

Join Nadunudi News WhatsApp Group