Ration Grain: ರೇಷನ್ ಕಾರ್ಡ್ ಹೊಂದಿರುವ ಜನರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಜೂನ್ ನಿಂದ ಹೊಸ ರೂಲ್ಸ್.

ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ, ಸಿಗಲಿದೆ ಇನ್ನಷ್ಟು ದಾನ್ಯ.

Central Government Ration Rice: ಜನಸಾಮಾನ್ಯರ ನೆರವಿಗಾಗಿ ಸರ್ಕಾರ ಉಚಿತ ಪಡಿತರನ್ನು (Ration) ನೀಡುತ್ತದೆ. ದೇಶದ ಅದೆಷ್ಟೋ ಬಡ ನಾಗರಿಕರು ಈ ಉಚಿತ ಪಡಿತರ ವಿತರಣೆಯ ಲಾಭವನ್ನು ಪಡೆಯುತ್ತಾರೆ. ಇನ್ನು ಸರ್ಕಾರ ಪಡಿತ ವಿತರಣೆಯಲ್ಲಿ ಇತ್ತೀಚಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಹೊಸ ಸೌಲಭ್ಯದ ಜೊತೆಗೆ ವಿವಿಧ ನಿಯಮಗಳನ್ನು ಜಾರಿಗೊಳಿಸುತ್ತಿದೆ.

ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು ಪಡಿತರ ವಿತರಣೆಯಲ್ಲಿ ಬಿಪಿಎಲ್ ಕಾರ್ಡ್ (BPL) ಹೊಂದಿರುವವರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ದೇಶದ ಬಡ ಕುಟುಂಬಗಳಿಗೆ ಮಾತ್ರ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಅನ್ನು ವಿತರಿಸಲಾಗುತ್ತದೆ.

ಇನ್ನು ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲು ಘೋಷಣೆ ಹೊರಡಿಸಿದೆ. ಇದೀಗ ಸರ್ಕಾರ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ ನೀಡಿದೆ.

Good news from center for ration card holders
Image Credit: dnaindia

ರೇಷನ್ ಕಾರ್ಡ್ ಹೊಂದಿರುವ ಜನರಿಗೆ ಕೇಂದ್ರದಿಂದ ಗುಡ್ ನ್ಯೂಸ್
ರೇಷನ್ ಕಾರ್ಡ್ ಹೊಂದಿರುವವರಿಗೆ ಜೂನ್ ನಿಂದ 2023 ನೇ ವರ್ಷದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ನಭಾಗ್ಯ ಯೋಜನೆಯಡಿ ಆಹಾರಧಾನ್ಯ ವಿತರಣೆಯನ್ನು ಮಾಡಲಾಗುತ್ತಿದೆ. ಏನ್ ಎಫ್ ಎಸ್ ಎ ಅಡಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಸದಸ್ಯರಿಗೆ 6 ಕೆಜಿ ಅಕ್ಕಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.

ಸರ್ಕಾರದ ಆದೇಶದಂತೆ ಜುಲೈ 2023 ನೇ ವರ್ಷದಲ್ಲಿ ಆಹಾರಧಾನ್ಯ ವಿತರಣೆ ಪ್ರಮಾಣವನ್ನು ಹೆಚ್ಚಿಗೆ ಮಾಡುತ್ತಿರುವುದರಿಂದ ಇಲಾಖೆಯ ಸಾಫ್ಟ್ ವೇರ್ ನಲ್ಲಿ ಸೂಕ್ತ ಬದಲಾವಣೆಯನ್ನು ಜೂನ್ 28, 2023 ರಿಂದ ಜಾರಿಗೊಳಿಸಲಾಗುವುದು. ಪಡಿತರ ಚೀಟಿದಾರರಿಗೆ ನೀಡಲಾಗಿರುವ ಆಹಾರ ಧಾನ್ಯವನ್ನು ಜೂನ್ 27 ರೊಳಗೆ ನ್ಯಾಯಬೆಲೆ ಅಂಗಡಿಯಿಂದ ಪಡೆದುಕೊಳ್ಳಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

Join Nadunudi News WhatsApp Group

Good news from center for ration card holders
Image Credit: odishabytes

ಆನ್ಲೈನ್ ನಲ್ಲಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯ ವಿಧಾನ
*ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮೊದಲಿಗೆ https://ahara.kar.nic.in/ ವೆಬ್ ಸೈಟ್ ಗೆ ಭೇಟಿ ನೀಡಿ E -Service ಆಯ್ಕೆ ಮಾಡಬೇಕು.

*ನಂತರ ಆಧಾರ್ ಕಾರ್ಡ್ ವಿವರವನ್ನು ನೀಡಬೇಕು. ಇದಾದ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

*ಒನ್​ಟೈಮ್​ ಪಾಸ್​ವರ್ಡ್​ ಟು ಮೊಬೈಲ್​ ನಂಬರ್ ರಿಜಿಸ್ಟರ್​ಡ್ ವಿಥ್ ದ ಆಧಾರ್​ ಕಾರ್ಡ್ ಆಯ್ಕೆಯನ್ನು ಆರಿಸಿ ನಿಮ್ಮ ಫಿಂಗರ್ ಪ್ರಿಂಟ್ ಆಯ್ಕೆಯನ್ನು ನೀಡಿ ಇದಾದ ಬಳಿಕ ನಿಮ್ಮ ಕುಟುಂಬದ ಸದಸ್ಯರ ವಿವರವನ್ನು ನೀಡಬೇಕು.

*ಈ ಪ್ರಕ್ರಿಯೆ ಮುಗಿದ ಬಳಿಕ ರೇಷನ್ ಕಾರ್ಡ್ ಸಂಬಂಧಿತ ಮಾಹಿತಿ ಕೇಳುತ್ತದೆ. ಎಲ್ಲ ಮಾಹಿತಿಯನ್ನು ನಮೂದಿಸಿದ ನಂತರ ಜನರೇಟ್ RC ಆಯ್ಕೆ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಮುಗಿಯುತ್ತದೆ.

Join Nadunudi News WhatsApp Group