DA Hike 2024: ಸರ್ಕಾರೀ ನೌಕರರಿಗೆ ಹೊಸ ವರ್ಷದ ಗುಡ್ ನ್ಯೂಸ್, ಸಂಬಳದಲ್ಲಿ ಮತ್ತೆ ಏರಿಕೆ

ಸರ್ಕಾರೀ ನೌಕರರ DA ಹೆಚ್ಚಳ ಹಾಗೂ ಪೀಟ್ಮೆಂಟ್ ಅಂಶ ಹೆಚ್ಚಿಸುವ ಬಗ್ಗೆಕೇಂದ್ರದ ಚಿಂತನೆ

Central Govt Employees DA Hike 2024: ಪ್ರಸ್ತುತ 2024 ಆರಂಭವಾಗಿದೆ. ಹೊಸ ವರ್ಷಕ್ಕೆ ಹೊಸ ಹೊಸ ನಿಯಮಗಳು ಪರಿಚಯವಾಗುವುದರ ಜೊತೆಗೆ ಅನೇಕ ಬದಲಾವಣೆಗಳು ಕೂಡ ಆಗಲಿದೆ. ಇನ್ನು ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಹೌದು ಸರ್ಕಾರದಿಂದ ಹೊಸ ವರ್ಷದ ಉಡುಗೊರೆಗಾಗಿ ನೌಕರರು ಕಾಯುತ್ತಿರುತ್ತಾರೆ.

ಈಗಾಗಲೇ ಸರ್ಕಾರಿ ನೌಕರರಿಗೆ  ವೇತನ ಹೆಚ್ಚು ಮಾಡುವುದರ ಕುರಿತು ಕೇಂದ್ರ ಸರ್ಕಾರ ಸಾಕಷ್ಟು ಮಾಹಿತಿಗಳನ್ನು ಹೊರ ಹಾಕಿದೆ. ಪ್ರಸ್ತುತ ದೇಶದಲ್ಲಿGovt Employees DA Hike ಆಗುವ ಬಗ್ಗೆ ದಿನಕ್ಕೊಂದು ಅಪ್ಡೇಟ್ ಲಭಿಸುತ್ತಿದೆ. ಇದೀಗ ಕೇಂದ್ರ ಸರ್ಕಾರೀ ನೌಕರರ (Central Govt Employees) DA ಹೆಚ್ಚಳ ಹಾಗೂ ಪೀಟ್ಮೆಂಟ್ ಅಂಶ ಹೆಚ್ಚಿಸುವ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಹೌದು DA ಹೆಚ್ಚಳದ ವಿಷಯವಾಗಿ ಕೇಂದ್ರ ಮತ್ತೆ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.

Central Government Employees Latest News
Image Credit: Hindustantimes

ಸರ್ಕಾರೀ ನೌಕರರಿಗೆ ಹೊಸ ವರ್ಷದ ಗುಡ್ ನ್ಯೂಸ್
ಈ ಬಾರಿ ಮೋದಿ ಸರ್ಕಾರ ನೌಕರರು ಹಾಗೂ ಪಿಂಚಣಿದಾರರ DA ಅನ್ನು 4 % ಹೆಚ್ಚಿಸಿದರೆ ಈ ವರ್ಷ ಬೂಸ್ಟರ್ ಡೋಸ್ ಆಗಲಿದೆ. ಇದರಿಂದ ಕೋಟ್ಯಂತರ ಕುಟುಂಬಗಳು ಪ್ರಯೋಜನ ಪಡೆಯುತ್ತವೆ. ಆದರೆ ಇದರ ಬಗ್ಗೆ ಸರ್ಕಾರ ಇನ್ನು ಅಧಿಕೃತ ಘೋಷಣೆ ಹೊರಡಿಸಿಲ್ಲ. ಇದೀಗ ನಾವು ಡಿಎ ಹಾಗೂ ಪೀಟ್ಮೆಂಟ್ ಅಂಶಕ್ಕೆ ಸಂಬಂಧಿಸಿದಂತೆ ಕೆಲವು ವಿಷಯವನ್ನು ತಿಳಿದುಕೊಳ್ಳೋಣ.

ಶೇಕಡಾವಾರು ಪ್ರಮಾಣದಲ್ಲಿ DA ಅನ್ನು ಹೆಚ್ಚಿಸಲಾಗುತ್ತದೆ
ಕೇಂದ್ರದ ಮೋದಿ ಸರ್ಕಾರವು ಶೀಘ್ರದಲ್ಲೇ DA ಅನ್ನು 4 % ಹೆಚ್ಚಿಸುವ ಸಾಧ್ಯತೆಯಿದೆ. ಒಂದು ವೇಳೆ ಕೇಂದ್ರ ಸರ್ಕಾರ 4 % DA ಅನ್ನು ಹೆಚ್ಚಿಸಿದರೆ DA 50 % ಗೆ ಹೆಚ್ಚಾಗುತ್ತದೆ. ಪ್ರಸ್ತುತ ನೌಕರರು ಶೇ 46 ರಷ್ಟು DA ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಎರಡು ಬಾರಿ DA ಅನ್ನು ಹೆಚ್ಚಿಸುತ್ತದೆ. ದರಗಳನ್ನು ಜುಲೈ 1 ಮತ್ತು ಜನವರಿ 1 ರಿಂದ ಜಾರಿಗೆ ತರಲಾಗುತ್ತದೆ. ಈಗ DA ಹೆಚ್ಚಿಸಿದರೆ ಸುಮಾರು 1 ಕೋಟಿ ನೌಕರರು ಮತ್ತು ಪಿಂಚಣಿದಾರರು ಇದರ ಲಾಭವನ್ನು ಪಡೆದುಕೊಳ್ಳಲಿದ್ದಾರೆ.

Central Govt Employees DA Hike 2024
Image Credit: Informal News

ಪೀಟ್ಮೆಂಟ್ ಅಂಶ
ಉದ್ಯೋಗಿಯ ಪೀಟ್ಮೆಂಟ್ ಅಂಶವನ್ನು ಕೇಂದ್ರ ಸರ್ಕಾರ ಹೆಚ್ಚಿಸುತ್ತದೆ. ಪೀಟ್ಮೆಂಟ್ ಅಂಶ 3.0 ಪಟ್ಟು ಹೆಚ್ಚಾಗುತ್ತದೆ. ಪ್ರಸ್ತುತ ನೌಕರರು 2.60 ಪಟ್ಟು ಪೀಟ್ಮೆಂಟ್ ಅಂಶವನ್ನು ಪಡೆಯುತ್ತಿದ್ದಾರೆ. ಈಗ ಪೀಟ್ಮೆಂಟ್ ಅಂಶ ಹೆಚ್ಚಿಸಿದರೆ ಮೂಲ ವೇತನದಲ್ಲಿ ಭಾರಿ ಏರಿಕೆಯಾಗಲಿದೆ.

Join Nadunudi News WhatsApp Group

Join Nadunudi News WhatsApp Group