Diwali Google Search: ದೀಪಾವಳಿ ಹಬ್ಬದ ದಿನ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದೇನು ಗೊತ್ತಾ…? ಇದು ಹಬ್ಬದ ಮಹತ್ವ.

ದೀಪಾವಳಿ ಹಬ್ಬದಂದು ಈ 5 ವಿಷಯಗಳನ್ನು ಗೂಗಲ್ ನಲ್ಲಿ ಹೆಚ್ಚಾಗಿ ಸರ್ಚ್ ಮಾಡಲಾಗಿದೆ.

CEO Sundar Pichai About Google Search In The Day Of Diwali Festival: ದೀಪಾವಳಿ (Diwali Festival) ಹಬ್ಬ ಹಿಂದೂ ಸಂಪ್ರದಾಯದ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಈಗಾಗಲೇ ದೇಶಾದ್ಯಂತ ದೀಪಾವಳಿ ಹಬ್ಬವನ್ನ ಅದ್ದೂರಿಯಾಗಿ ಆಚರಿಸಲಾಗಿದೆ.

ಭಾರತೀಯರು ಆಚರಣೆ ಮಾಡುವ ಪ್ರತಿ ಹಬ್ಬಕ್ಕೂ ಅದರದ್ದೇ ಆದ ಇತಿಹಾಸವಿರುತ್ತದೆ. ಈ ದೀಪಾವಳಿ ಹಬ್ಬದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುದಿಲ್ಲ ಹಾಗಾಗಿ ಅವರು ಗೂಗಲ್ ನಲ್ಲಿ (Google) ಈ ದೀಪಾವಳಿ ಹಬ್ಬದ ಮಹತ್ವವನ್ನು ತಿಳಿದುಕೊಳ್ಳಲು ಸರ್ಚ್ ಮಾಡುತ್ತಾರೆ.

CEO Sundar Pichai About Google Search
Image Credit: Content.techgig

ಸರ್ಚ್ ರಹಸ್ಯ ಬಿಚ್ಚಿಟ್ಟ ಸುಂದರ್ ಪಿಚೈ
ಅತಿದೊಡ್ಡ ಕಂಪನಿಗಳಾದ ಆಲ್ಫಾಬೆಟ್ ಮತ್ತು ಗೂಗಲ್‌ ನ CEO Sundar Pichai ಅವರು ದೀಪಾವಳಿಯಂದು ಪ್ರಪಂಚದಾದ್ಯಂತ ಸಾಕಷ್ಟು ಸರ್ಚ್ ನಡೆದಿವೆ ಎಂದು ಪೋಸ್ಟ್ ಮಾಡಿದ್ದಾರೆ. Google CEO ಒಂದು GIF ಅನ್ನು ಹಂಚಿಕೊಂಡಿದ್ದಾರೆ. ( https://twitter.com/sundarpichai/status/1723574090408321353 ) ಅದರಲ್ಲಿ 5 ಚುಕ್ಕೆಗಳಿವೆ, ಇವುಗಳ ಸಹಾಯದಿಂದ ಗೂಗಲ್ ನಲ್ಲಿ ಈ ಐದು ಪ್ರಶ್ನೆಗಳನ್ನು ಹೆಚ್ಚು ಹುಡುಕಲಾಗಿದೆ. ಇದಲ್ಲದೆ Sundar Pichai ಅವರು ಪ್ರತ್ಯೇಕ ಪೋಸ್ಟ್‌ನಲ್ಲಿ ದೀಪಾವಳಿ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.

ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಮಾಡಲಾದ 5 ಪ್ರಶ್ನೆಗಳು
*ಭಾರತೀಯರು ದೀಪಾವಳಿಯನ್ನು ಏಕೆ ಆಚರಿಸುತ್ತಾರೆ…? (Why Indians celebrate Diwali)

*ದೀಪಾವಳಿಯಂದು ನಾವು ರಂಗೋಲಿಯನ್ನು ಏಕೆ ಮಾಡುತ್ತೇವೆ…? (Why do we do rangoli on Diwali)

Join Nadunudi News WhatsApp Group

*ದೀಪಾವಳಿಯಂದು ದೀಪಗಳು ಮತ್ತು ದೀಪಗಳನ್ನು ಏಕೆ ಬೆಳಗಿಸಲಾಗುತ್ತದೆ…? (Why do we light lamps on         Diwali)

*ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ಏಕೆ ಮಾಡುತ್ತಾರೆ…? (Why is Lakshmi puja done on Diwali)

*ದೀಪಾವಳಿಯಂದು ಎಣ್ಣೆ ಸ್ನಾನ ಮಾಡುವುದೇಕೆ…? (Why oil bath on Diwali)

ವಿಶ್ವದ್ಯಾಂತ ಗೂಗಲ್ ಸರ್ಚ್‌ನಲ್ಲಿ ಹೆಚ್ಚು ಬಳಕೆಯಾಗುತ್ತಿದೆ
ಪ್ರಪಂಚದಾದ್ಯಂತ ಇಂಟರ್ನೆಟ್ ನಲ್ಲಿ ಈ ಸರ್ಚ್ ಬ್ರೌಸರ್‌ ಅನ್ನು ವಿಷಯಗಳನ್ನು ಹುಡುಕಲು ಬಳಸಲಾಗುತ್ತದೆ. Statcounter ಗ್ಲೋಬಲ್‌ನ ವರದಿಗಳ ಪ್ರಕಾರ ಅಕ್ಟೋಬರ್ 2023 ರಲ್ಲಿ ವಿಶ್ವದಾದ್ಯಂತ Google ಶೇಕಡಾ 91.55 % ಮಾರುಕಟ್ಟೆ ಸರ್ಚ್ ಪಾಲನ್ನು ಹೊಂದಿದೆ. Bing ಶೇಕಡಾ 3.11 % ಪಾಲು ಹೊಂದಿದೆ. YANDEX ಶೇಕಡಾ 1.83% ಸರ್ಚ್ ಪಾಲುದಾರಿಕೆಯನ್ನು ಹೊಂದಿವೆ. ಭಾರತದಲ್ಲಿನ ಸರ್ಚ್ ನೋಡುವುದಾದರೆ ಬರೋಬ್ಬರಿ 98.45 % ಶೇಕಡಾ ರಷ್ಟು ಸರ್ಚ್ ಪಾಲುದಾರಿಕೆಯನ್ನು ಹೊಂದಿವೆ.

Join Nadunudi News WhatsApp Group