Circular Journey Ticket: ಈಗ ಒಂದೇ ರೈಲಿನಲ್ಲಿ 56 ದಿನಗಳ ಕಾಲ ಪ್ರಯಾಣ ಮಾಡಬಹುದು, ರೈಲು ಪ್ರಯಾಣಿಕರಿಗೆ ಐತಿಹಾಸಿಕ ಸೇವೆ.

ಈಗ ಒಂದೇ ರೈಲು ಟಿಕೆಟ್ ನಲ್ಲಿ 56 ದಿನ ಪ್ರಯಾಣ ಮಾಡಬಹುದು.

Railway Circular Journey Ticket For 56 Days Journey: ದೂರದ ಪ್ರಯಾಣ ಅಥವಾ ರಾತ್ರಿ ಪ್ರಯಾಣ ಮಾಡುವವರಿಗೆ ರೈಲು ಪ್ರಯಾಣ ಬೆಸ್ಟ್ ಎನ್ನಬಹುದು. ಏಕೆಂದರೆ ಕಡಿಮೆ ಸಮಯದಲ್ಲಿ ಆರಾಮದಾಯ ಪ್ರಯಾಣವನ್ನು ರೈಲಿನಲ್ಲಿ ಮಾಡಬಹುದು.

ದಿನ ನಿತ್ಯ ರೈಲುಗಳಲ್ಲಿ ಕೋಟ್ಯಾಂತರ ಪ್ರಯಾಣಿಕರು ಪ್ರಯಾಣವನ್ನು ಮಾಡುತ್ತಾರೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶವನ್ನು ತಲುಪುತ್ತಾರೆ. ಕೆಲವೊಮ್ಮೆ ಪ್ರಯಾಣಿಕರು ರೈಲಿನಲ್ಲಿ ಒಂದಕ್ಕಿಂತ ಹೆಚ್ಚು ದಿನಗಳ ಕಾಲ ರೈಲಿನಲ್ಲಿ ಪ್ರಯಾಣಿಸುವ ಸಂದರ್ಭ ಇರುತ್ತಾರೆ.

Circular Journey Ticket
Image Credit: Hit TV Telugu

ಒಂದು ಟಿಕೆಟ್ ನಲ್ಲಿ 56 ದಿನದ ಪ್ರಯಾಣವನ್ನು ಮಾಡಬಹುದೇ..?
ತೀರ್ಥಯಾತ್ರೆ ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವ ಪ್ರಯಾಣಿಕರು ಸಾಕಷ್ಟು ದಿನ ಪ್ರಯಾಣವನ್ನು ಮಾಡಬೇಕಾಗುತ್ತದೆ. ಹೆಚ್ಚು ಹೆಚ್ಚು ದಿನದ ಪ್ರಯಾಣಕ್ಕೆ ಟಿಕೆಟ್ ಅನ್ನು ಖರೀದಿಸುತ್ತ ಇರಬೇಕು ಎನ್ನುವ ಚಿಂತೆ ಇರುತ್ತದೆ. ಆದರೆ ಸಾಕಷ್ಟು ಜನರಿಗೆ ತಿಳಿದಿರದ ವಿಷಯವಿದೆ.

ಅದೇನೆಂದರೆ ನೀವು ಒಂದೇ ಒಂದು ಟಿಕೆಟ್ ಅನ್ನು ಬಳಸಿ 56 ದಿನ ಪ್ರಯಾಣವನ್ನು ಮಾಡಬಹುದು ಎನ್ನುವ ವಿಚಾರ ನಿಮಗೆ ತಿಳಿದಿದೆಯೇ..? ಒಂದೇ ಟಿಕೆಟ್ ನಲ್ಲಿ 56 ದಿಂದ ಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ವಿಶೇಷ ಟಿಕೆಟ್ ಅನ್ನು ನೀಡುತ್ತದೆ. ಸಾಕಷ್ಟು ಜನರಿಗೆ ಈ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾದರೆ ಆ ಟಿಕೆಟ್ ಯಾವುದು ಮತ್ತು ಅದನ್ನ ಪಡೆಯುವುದು ಹೇಗೆ ತಿಳಿಯೋಣ.

Railway Circular Journey Ticket
ರೈಲ್ವೆ ಪ್ರಯಾಣಿಕರಿಗಾಗಿ ವಿಶೇಷವಾಗಿ Circular Journey Ticket ಅನ್ನು ನೀಡುತ್ತಿದೆ. ನೀವು ಈ ಟಿಕೆಟ್ ನ ಮೂಲಕ ಪ್ರಯಾಣಿಕರು 8 ವಿವಿಧ ನಿಲ್ದಾಣಗಳಿಂದ 56 ದಿನಗಳ ವರೆಗೆ ಒಂದು ಟಿಕೆಟ್ ನಲ್ಲಿ ಪ್ರಯಾಣಿಸಬಹುದು. Circular Journey Ticket ನಲ್ಲಿ ಹಲವಾರು ಟ್ರೈನ್ ಅನ್ನು ಹತ್ತಬಹುದು. ನೀವು ವಿವಿಧ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಿದರೆ, ಅದು ದುಬಾರಿಯಾಗುತ್ತದೆ. ಆದರೆ Circular Journey Ticket ಗಳು ‘ಟೆಲಿಸ್ಕೋಪಿಕ್ ದರಗಳನ್ನು’ ನೀಡುತ್ತವೆ. ಇದು ಸಾಮಾನ್ಯ ಪಾಯಿಂಟ್ ಟು ಪಾಯಿಂಟ್ ದರಗಳಿಗಿಂತ ತುಂಬಾ ಕಡಿಮೆ. ಯಾವುದೇ ವರ್ಗದ ಪ್ರಯಾಣಕ್ಕಾಗಿ ವೃತ್ತಾಕಾರದ ಪ್ರಯಾಣದ ಟಿಕೆಟ್‌ (Circular Journey Ticket ) ಗಳನ್ನು ಖರೀದಿಸಬಹುದು.

Join Nadunudi News WhatsApp Group

Railway Circular Journey Ticket For 56 Days Journey
Image Credit: Yuvapatrkaar

Circular Journey Ticket ಪಡೆಯುವುದು ಹೇಗೆ..?
ಇನ್ನು Circular Journey Ticket ಗಳನ್ನು ನೇರವಾಗಿ ಟಿಕೆಟ್ ಕೌಂಟರ್‌ನಿಂದ ಖರೀದಿಸಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಮೊದಲು ಅರ್ಜಿ ಸಲ್ಲಿಸಬೇಕು. ಕೆಲವು ಪ್ರಮುಖ ನಿಲ್ದಾಣಗಳ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಅಥವಾ ನಿಲ್ದಾಣದ ವ್ಯವಸ್ಥಾಪಕರೊಂದಿಗೆ ನಿಮ್ಮ ಪ್ರಯಾಣದ ಮಾರ್ಗದ ಕುರಿತು ಮಾಹಿತಿಯನ್ನು ನೀವು ಹಂಚಿಕೊಳ್ಳಬೇಕು. ನಂತರ ನೀವು Circular Journey Ticket ಅನ್ನು ಪಡೆಯಲು ಸಾಧ್ಯವಾಗುತ್ತದೆ. Circular Journey Ticket 56 ದಿನಗಳವರೆ ಮಾನ್ಯತೆಯನ್ನು ಹೊಂದಿರುತ್ತದೆ.

Join Nadunudi News WhatsApp Group