Cast Reservation: ಹಿಂದುಳಿದ ವರ್ಗದವರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ, 33% ಮೀಸಲಾತಿ ಘೋಷಣೆ.

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.

CM Siddaramaiah About Reservation: ಸದ್ಯ ರಾಜ್ಯದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದೆ. ರಾಜ್ಯದ ಜನತೆಗಾಗಿ ಕಾಂಗ್ರೆಸ್ ಸರ್ಕಾರ (Congress Govt) ವಿವಿದ ಯೋಜನೆಯನ್ನು ರೂಪಿಸುತ್ತಿದೆ.ಇನ್ನು ರಾಜ್ಯ ಸರ್ಕಾರ ವಿಧಾನಸಭಾ ಚುನಾವಣೆಯಲ್ಲಿ ಹೇಳಿರುವಂತೆ ಈಗಾಗಲೇ ನಾಲ್ಕು ಉಚಿತ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಇನ್ನು ಸದ್ಯದಲ್ಲೇ ಐದನೇ ಯೋಜನೆಯ ಲಾಭ ಕೂಡ ಅರ್ಹರಿಗೆ ತಲುಪಲಿದೆ. ಉಚಿತ ಗ್ಯಾಂರಂಟಿಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.

CM Siddaramaiah About Reservation
Image Credit: Siasat

ಹಿಂದುಳಿದ ವರ್ಗದವರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ
ರಾಜ್ಯದ ಮುಖ್ಯಮಂತ್ರಿ Siddaramaih ಅವರು ಈಗಾಗಲೇ ಹಿಂದುಳಿದ ವರ್ಗದವರ ಏಳಿಗೆಗಾಗಿ ಹೆಚ್ಚಿನ ಸೌಲಭ್ಯವನ್ನು ನೀಡಿದ್ದಾರೆ. ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸುವ ಮೂಲಕ ಹಿಂದುಳಿದ ವರ್ಗದವರೇ ರಾಜ್ಯವೂ ಸರ್ಕಾರ ಆರ್ಥಿಕವಾಗಿ ಬೆಂಬಲವನ್ನು ನೀಡುತ್ತಿದೆ.

ಸದ್ಯ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಹಿಂದುಳಿದ ವರ್ಗದವರಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಹಿಂದುಳಿದ ವರ್ಗದವರ ಮೀಸಲಾತಿ ಹೆಚ್ಚಿಸುವುದಾಗಿ ಘೋಷಣೆ ಹೊರಡಿಸಿದ್ದಾರೆ. ಈ ಮೂಲಕ ಹಿಂದುಳಿದ ವರ್ಗದವರಿಗೆ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ.

Backward Classes Reservation
Image Credit: Lawinsider

ಹಿಂದುಳಿದ ವರ್ಗದವರಿಗೆ ಶೇ. 33 ರಷ್ಟು ಮೀಸಲಾತಿ
ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳಿಗೆ ಸೂಕ್ತ ಮೀಸಲಾತಿ ನೀಡುವ ಕುರಿತು ಆಯೋಗ ಮಾಡಿದ್ದ 5 ಶಿಫಾರಸುಗಳ ಪೈಕಿ ಮೂರಕ್ಕೆ ಅನುಮೋದನೆ ನೀಡಲಾಗಿದೆ.

Join Nadunudi News WhatsApp Group

ರಾಜ್ಯದಲ್ಲಿ ಒಟ್ಟಾರೆ ಶೇ. 50 ರಷ್ಟು ಮೀರದಂತೆ ಶೇ. 33 ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ನೀಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group