CM Siddaramaiah: ಈ ದೇಶವನ್ನು ಎಂದೂ ಹಿಂದೂ ದೇಶವನ್ನಾಗಿ ಮಾಡಲು ಬಿಡಲ್ಲ, CM ಅಧಿಕೃತ ಘೋಷಣೆ.

ದೇಶವನ್ನು ಹಿಂದೂ ದೇಶವನ್ನಾಗಿ ಮಾಡುವ ಮೋದಿ ಮಾತಿಗೆ ಸಿದ್ದರಾಮಯ್ಯ ತಿರುಗೇಟು

CM Siddaramaiah New Update: ಸದ್ಯ ಲೋಕಸಭಾ ಚುನಾವಣೆ ನಡೆಯುತ್ತಿದೆ. ಚುನಾವಣೆಯು ಕೊನೆಯ ಹಂತದಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈ ಬಾರಿ ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರವನ್ನು ಪಡೆಯುತ್ತದೆ ಎನ್ನುವ ಪ್ರಶ್ನೆ ಉತ್ತರ ಶೀಘ್ರವೇ ಸಿಗಲಿದೆ.

ಇದೆಲ್ಲದರ ಮದ್ಯೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮಾತಿನ ಯುದ್ಧ ನಡೆಸುತ್ತಲೇ ಇದೆ. ಕಾಂಗ್ರೆಸ್ ಸರ್ಕಾರ ಮೋದಿ ಅವರನ್ನು, ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರವನ್ನು ತೆಗಳುತ್ತ ತಮ್ಮ ತಮ್ಮ ಪ್ರಚಾರವನ್ನು ನಡೆಸುತ್ತಿದೆ. ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ಅವರ ವಿರುದ್ಧ ಮಾತಿನ ವಾಗ್ದಾಳಿ ನಡೆಸಿದ್ದಾರೆ. ದೇಶವನ್ನು ಹಿಂದೂ ದೇಶವನ್ನಾಗಿ ಮಾಡುವ ಮೋದಿ ಮಾತಿಗೆ ಸಿದ್ದರಾಮಯ್ಯ (CM Siddaramaiah)  ತಿರುಗೇಟು ನೀಡಿದ್ದಾರೆ.

CM Siddaramaiah New Update
Image Credit: ap7am

ಈ ದೇಶವನ್ನು ಎಂದೂ ಹಿಂದೂ ದೇಶವನ್ನಾಗಿ ಮಾಡಲು ಬಿಡಲ್ಲ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಮೋದಿಯವರು ಹಿಂದೂ ರಾಷ್ಟ್ರ ಮಾಡ್ತಾರೆ ಅನ್ನೋದು ಕನಸಿನ ಮಾತು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ನೆಹರು ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮೋದಿ ಚುನಾವಣೆಯಲ್ಲಿ ಸೋಲುವುದು ಖಚಿತ. ಭಾರತವನ್ನು ಅಭಿವೃದ್ಧಿಪಡಿಸಲು ದೇವರು ಮೋದಿಯನ್ನು ಕಳುಹಿಸಿದ್ದಾನೆ ಅಂತಾರೆ. ಅದಕ್ಕಾಗಿಯೇ ಅವರು ಹಿಂದೂ ಮುಸ್ಲಿಮರನ್ನು ಒಡೆದು ಮಾತನಾಡುತ್ತಾರೆ. ಅವರು ತಮ್ಮ ಚುನಾವಣಾ ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ. ನರೇಂದ್ರ ಮೋದಿ ದೇವರ ಅವತಾರನ? ನರೇಂದ್ರ ಮೋದಿಯವರು ಸೋಲಿನ ಭಯದಿಂದ ಮಾತನಾಡುತ್ತಿದ್ದಾರೆ.

CM Siddaramaiah Latest News
Image Credit: Business-standard

CM ಸಿದ್ದರಾಮಯ್ಯ ಅಧಿಕೃತ ಘೋಷಣೆ
2047 ರ ವರೆಗೆ ಸೇವೆ ಸಲ್ಲಿಸಲು ಅವರನ್ನು ದೇವರು ಕಳುಹಿಸಿದ್ದಾನೆ ಎನ್ನಲಾಗಿದೆ. ಪ್ರಧಾನಿ ಮೋದಿಗೆ ಬಹುತ್ವದಲ್ಲಿ ನಂಬಿಕೆ ಇಲ್ಲ. ಭಾರತ ಅಭಿವೃದ್ಧಿಯಾಗಿದೆ ಎಂದು ಬಿಜೆಪಿ ಪದೇ ಪದೇ ಹೇಳಿಕೊಳ್ಳುತ್ತಿದೆ. ಆದರೆ ಅಭಿವೃದ್ಧಿ ಹೊಂದಿದ ಭಾರತ ಎಂಬುದು ಬಿಜೆಪಿಯ ನಿಜವಾದ ಕಲ್ಪನೆಯಲ್ಲ. ವಿಕಾಸಿತ ಭಾರತ ಆಗುವುದು ಬಿಜೆಪಿ ಅವರಿಗೆ ಬೇಕಾಗಿಲ್ಲ. ಬಿಜೆಪಿಯ ಹಿಡನ್ ಅಜೆಂಡಾ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದೇ ಹೊರತು ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಆಗಲ್ಲ. ಈ ದೇಶ ಬಹುತ್ವ ರಾಷ್ಟ್ರ ಎಲ್ಲ ವರ್ಗದ ಜನರು ಇಲ್ಲಿ ಇದ್ದರೆ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Join Nadunudi News WhatsApp Group

CM Siddaramaiah New Announcement
Image Credit: Live Mint

Join Nadunudi News WhatsApp Group