Compensation Amount: ಮನೆಯಲ್ಲಿ ಹಸು ಮತ್ತು ಮೇಕೆ ಸಾಕುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್, ಹೊಸ ನಿಯಮ ಜಾರಿಗೆ.

ಜಾನುವಾರುಗಳನ್ನು ಸಾಕುವವರಿಗಾಗಿ ಸರ್ಕಾರ ಹೊಸ ಯೋಜನೆ.

Compensation Amount For Accidental Death Of Domestic Animals: ಹೆಚ್ಚಿನ ಜನರು ಪ್ರಾಣಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿ ವಿವಿಧ ಸಾಕು ಪ್ರಾಣಿಗಳನ್ನು ಸಾಕುತ್ತಾರೆ.

ಮನೆಯ ಒಳಗೆ ಇರುವ ಪ್ರಾಣಿಗಳಾದ ನಾಯಿ, ಬೆಕ್ಕು ಇವುಗಳ ಜೊತೆ ಹಸು, ಎತ್ತು, ಎಮ್ಮೆ, ಹೀಗೆ ಅನೇಕ ಜಾನುವಾರನ್ನು ಸಾಕಲು ಇಷ್ಟಪಡುತ್ತಾರೆ. ಸದ್ಯ ಮನೆಯಲ್ಲಿ ಹಸು ಮತ್ತು ಮೇಕೆ ಸಾಕುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ. ಜಾನುವಾರುಗಳನ್ನು ಸಾಕುವವರಿಗಾಗಿ ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಿದೆ.

Compensation Amount For Accidental Death Of Domestic Animals
Image Credit: Krishijagran

ರಾಜ್ಯ ಸರ್ಕಾರದ ಅನುಗೃಹ ಯೋಜನೆ
ಸಧ್ಯ ರಾಜ್ಯ ಸರ್ಕಾರ ಮನೆಯಲ್ಲಿ ಹಸು ಮತ್ತು ಮೇಕೆ ಸಾಕುವವರಿಗೆ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಸದ್ಯ 2023 -24 ನೇ ಸಾಲಿನಲ್ಲಿ ಸರ್ಕಾರ ಅನುಗೃಹ ಯೋಜನೆನ್ನು ಪರಿಚಯಿಸಿದೆ. ಈ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ ಆಡು ಮತ್ತು ಕುರಿಗಳಿಗೆ ಪರಿಹಾರ ಮೊತ್ತವನ್ನು ನೀಡಲು ಸರಕಾರ ನಿರ್ಧರಿಸಿದೆ. ಆಡು ಮತ್ತು ಕುರಿಗಳಿಗೆ ಪ್ರತಿಯೊಂದಕ್ಕೆ ಗರಿಷ್ಟ ರೂ. 5,000 ಹಾಗೂ ಹಸು ಮತ್ತು ಎಮ್ಮೆಗಳಿಗೆ ಗರಿಷ್ಟ ರೂ. 10,000 ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿದೆ.

ಯೋಜನೆಯ ಪರಿಹಾರ ಮೊತ್ತವನ್ನು ಪಡೆಯುವುದು ಹೇಗೆ..?
*ಜಾನುವಾರು ಮಾಲೀಕರು ಸದರಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮೃತಪಟ್ಟ ಜಾನುವಾರುವಿನ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳೀಯ ಪಶುವೈದ್ಯರಿಂದ ದೃಢೀಕರಿಸಿದ ನಂತರವೇ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯ.

Domestic Animal Latest Update
Image Credit: Krishijagran

*ಮೃತ ಕುರಿ ಅಥವಾ ಮೇಕೆಗಳ ಮರಣೋತ್ತರ ಪರೀಕ್ಷೆ ಮತ್ತು ಮರಣೋತ್ತರ ಛಾಯಾಚಿತ್ರಗಳನ್ನು ಫಲಾನುಭವಿ ಮತ್ತು ಮರಣೋತ್ತರ ಪಶುವೈದ್ಯರ GPRS ಛಾಯಾಚಿತ್ರಗಳೊಂದಿಗೆ ಮರಣೋತ್ತರ ಪಶುವೈದ್ಯರು ತೆಗೆದುಕೊಳ್ಳಬೇಕು ಮತ್ತು ಪರಿಶೀಲಿಸಬೇಕು.

Join Nadunudi News WhatsApp Group

*ಮರಣಿಸಿದ ಕುರಿ ಅಥವಾ ಮೇಕೆಗಳ ಭಾವಚಿತ್ರಗಳಿಗೆ ಸಂಬಂಧಿಸಿದಂತೆ ಶವ ಪರೀಕ್ಷೆ ನಡೆಸಿದ ಪಶುವೈದ್ಯರೇ ವೈಯಕ್ತಿಕ ಜವಾಬ್ದಾರರಾಗಿರುತ್ತಾರೆ.

*ಮರಣೋತ್ತರ ವರದಿಯಲ್ಲಿ ಫಲಾನುಭವಿಯ ಪೂರ್ಣ ವಿಳಾಸ, ಕುರಿ/ಮೇಕೆಗಳು ಮರಣಿಸಿದ ದಿನಾಂಕ, ಶವ ಪರೀಕ್ಷೆ ದಿನಾಂಕ, ಕುರಿ/ಮೇಕೆ ವಯಸ್ಸು, ಪರಿಹಾರ ವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ ಮರಣಿಸಿದ್ದಕ್ಕೆ ಸೂಕ್ತ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.

Compensation Amount For Accidental Death Of Domestic Animals
Image Credit: Newsducamer

*ಮರಣೋತ್ತರ ಪರೀಕ್ಷೆಯ ವರದಿ, ಭಾವಚಿತ್ರಗಳು, ಫಲಾನುಭವಿಗಳ ಅರ್ಜಿ, ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ಮತ್ತು ಫಲಾನುಭವಿಗಳ ಸಹಿ, ಪೂರ್ಣ ವಿಳಾಸ ಮತ್ತು ಚೀಟಿಗಳೊಂದಿಗೆ ಮುಂಗಡ ಪಾವತಿ ರಸೀದಿಯನ್ನು ಸರಿಯಾಗಿ ದೃಢೀಕರಿಸಿ ನಿಗಮದ ಜಿಲ್ಲಾ ಅನುಷ್ಠಾನ ಅಧಿಕಾರಿಗೆ ಸಲ್ಲಿಸಬೇಕು.

*ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ನಿಗಮದ ಜಿಲ್ಲಾ ಅನುಷ್ಠಾನಾಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ, ಪರಿಹಾರಕ್ಕೆ ಅರ್ಹ ಪ್ರಕರಣಗಳಿಗೆ ಮಾತ್ರ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ.

Join Nadunudi News WhatsApp Group