PM Modi: ಈಗ ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ಪತ್ರದ ಮೂಲಕ ದೂರು ನೀಡಿ, ಹೊಸ ಸೇವೆ ಆರಂಭ

ಇನ್ನುಮುಂದೆ ನೇರವಾಗಿ ನೀವು ಸರಳ ವಿಧಾನದ ಮೂಲಕ ಪ್ರಧಾನಿ ಮೋದಿ ಅವರಿಗೆ ದೂರನ್ನು ನೀಡಬಹುದು

Complaint To Prime Minister Modi: ಸಾಮಾನ್ಯವಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಿರುತ್ತವೆ. ತಮ್ಮ ಸಮಸ್ಯೆಗೆ ಪರಿಹಾರ ನೀಡಲು ಜನಸಾಮಾನ್ಯರು ಸರ್ಕಾರದ ಮೊರೆ ಹೋಗುತ್ತಾರೆ. ಕೆಲವೊಂದು ಬಾರಿ ಎಷ್ಟೇ ದೂರನ್ನು ನೀಡಿದರು ಕೂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಳುತ್ತದೆ.

ಜನಸಾಮಾನ್ಯರು ದೂರು ನೀಡಿದರು ಕೂಡ ಅದರಿಂದ ಯಾವುದೇ ಪ್ರಯೋಜನ ಸಿಗುವುದಿಲ್ಲ ಎಂದು ಚಿಂತಿಸುತ್ತಾರೆ. ಆದರೆ ಇನ್ನುಮುಂದೆ ನೀವು ನಿಮ್ಮ ಸಮಸ್ಯೆಗೆ ದೂರು ನೀಡಲು ಹೆಚ್ಚು ಕಷ್ಟಪಡಬೇಕಿಲ್ಲ. ಕಾರಣ ನೇರವಾಗಿ ನೀವು ಸರಳ ವಿಧಾನದ ಮೂಲಕ ಪ್ರಧಾನಿ ಮೋದಿ ಅವರಿಗೆ ದೂರನ್ನು ನೀಡಬಹುದು.

Complaint To Prime Minister Modi
Image Credit: India Today

ಇನ್ನುಮುಂದೆ ಪ್ರಧಾನಿ ಮೋದಿ ಅವರಿಗೆ ನೇರವಾಗಿ ದೂರನ್ನು ನೀಡಬಹುದು
ಸಾರ್ವಜನಿಕರ ಹಿತದೃಷ್ಟಿಯಿಂದ ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆನ್ಲೈನ್ ನ ಮೂಲಕ ಮನೆಯಲ್ಲಿ ಕುಳಿತು ನೀವು ದೂರನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸುವ ಅವಕಾಶ ಇನ್ನುಮುಂದೆ ನಿಮಗೆ ಸಿಗಲಿದೆ. ಪ್ರಧಾನಿ ಕಚೇರಿಗೆ ದೂರು ಸಲ್ಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಪ್ರಧಾನ ಮಂತ್ರಿಗಳ ಕಚೇರಿಗೆ ದೂರು ಸಲ್ಲಿಸಲು ನಿಮಗಾಗಿ Website ಕೂಡ ಪರಿಚಯಿಸಲಾಗಿದೆ.

ನೀವು ಭಾರತೀಯ ಅಂಚೆ ಇಲಾಖೆಯ ಮೂಲಕ ನಿಮ್ಮ ದೂರನ್ನು ಕಳುಹಿಸಬಹುದು. ಇದಕ್ಕಾಗಿ ನೀವು ಪ್ರಧಾನ ಮಂತ್ರಿಗಳ ಕಛೇರಿ, ಸೌತ್ ಬ್ಲಾಕ್, ನವದೆಹಲಿ, ಪಿನ್ 110011 ಗೆ ದೂರು ಪತ್ರವನ್ನು ಬರೆಯಬೇಕು. ಇದಲ್ಲದೆ, ನೀವು ನಿಮ್ಮ ದೂರನ್ನು ಫ್ಯಾಕ್ಸ್ ಮೂಲಕ FAX ಸಂಖ್ಯೆಗೆ ಸಲ್ಲಿಸಬಹುದು. ನೀವು ಅದನ್ನು ಪ್ರಧಾನ ಮಂತ್ರಿಗಳ ಕಚೇರಿಗೆ 011-23016857 ಸಂಖ್ಯೆಗೆ ಕಳುಹಿಸಬಹುದು.

Narendra Modi Latest News
Image Credit: Google

ಈ ರೀತಿಯಾಗಿ ನಿಮ್ಮ ದೂರನ್ನು ಪ್ರಧಾನಿಗೆ ತಲುಪಿಸಬಹುದು
https://www.pmindia.gov.in/hi. ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡುವ ಮೂಲಕ ನಿಮ್ಮ ದೂರನ್ನು ನೀವು ನೋಂದಾಯಿಸಿಕೊಳ್ಳಬಹುದು.

Join Nadunudi News WhatsApp Group

•ನೀವು ಪ್ರಧಾನ ಮಂತ್ರಿಯೊಂದಿಗೆ ಸಂವಹನ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

•ನಂತರ ನೀವು ಪ್ರಧಾನಿಗೆ ಪತ್ರ ಬರೆಯುವ ಆಯ್ಕೆಯನ್ನು ಪಡೆಯುತ್ತೀರಿ.

•ನಂತರ, CPGRAMS ಪುಟವು ತೆರೆಯುತ್ತದೆ. ಅಲ್ಲಿ ದೂರು ದಾಖಲಾಗುತ್ತದೆ ಮತ್ತು ದೂರು ಸಲ್ಲಿಸಿದ ನಂತರ, ನೋಂದಣಿ ಸಂಖ್ಯೆಯನ್ನು ರಚಿಸಲಾಗುತ್ತದೆ.

•ದೂರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್‌ ಲೋಡ್ ಮಾಡಲು ಅನುಮತಿಸಲಾಗಿದೆ.

•ಇದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ನಿಮ್ಮ ದೂರಿನ ಬಗ್ಗೆ ಎಲ್ಲಾ ವಿವರಗಳನ್ನು ನೀವು ಭರ್ತಿ ಮಾಡಬೇಕು.

Join Nadunudi News WhatsApp Group