Yuva Nidhi Conditions: ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಸರ್ಕಾರದಿಂದ ಷರತ್ತು, ಇಂತವರಿಗೆ ಹಣ ಬರಲ್ಲ

ಯುವ ನಿಧಿ ಯೋಜನೆಗೆ ಸರ್ಕಾರದ ಷರತ್ತುಗಳು, ಅರ್ಜಿ ಸಲ್ಲಿಸುವ ಮುನ್ನ ಎಚ್ಚರ

Yuva Nidhi Yojana Conditions: ಈವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ನ ನಾಲ್ಕು ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕಾಂಗ್ರೆಸ್ ಸರ್ಕಾರ ಸದ್ಯ ರಾಜ್ಯದ ಜನತೆಗೆ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ ತಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ನಾಲ್ಕು ಯೋಜನೆಗಳ ಲಾಭವನ್ನು ಅರ್ಹರು ಪಡೆಯುತ್ತಿದ್ದಾರೆ.

ಇನ್ನು ಪ್ರಣಾಳಿಕೆಯಲ್ಲಿ ಘೋಷಿಸಿದಂತಹ ಐದು ಯೋಜನೆಗಳ ಪೈಕಿ ನಾಲ್ಕು ಯೋಜನೆಗಳು ಮಾತ್ರ ಅನುಷ್ಠಾನಗೊಂಡಿದ್ದು, ಇನೂ ಒಂದು ಯೋಜನೆ ಅನುಷ್ಠಾನ ಕಾರ್ಯ ಭಾಕಿ ಇದೆ. ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಸದ್ಯ ಏಳು ತಿಂಗಳ ಬಳಿಕ ಇದೀಗ ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ.

Yuva Nidhi Conditions
Image Credit: News Next Live

ಯುವ ನಿಧಿ ನೋಂದಣಿಗೆ ಕೌಂಟ್ ಡೌನ್ ಶುರು
ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 3000 ಮಾಸಿಕ ಭತ್ಯೆ, ಡಿಪ್ಲೊಮೊ ವಿದ್ಯಾರ್ಥಿಗಳಾಗಿದ್ದರೆ 1500 ರೂ. ಗಳನ್ನೂ ನೊರುದ್ಯೋಗ ಭತ್ಯೆಯಾಗಿ ಪಡೆಯಬಹುದು. ಇನ್ನು ಡಿ. 26 ರಿಂದಲೇ ಯುವ ನಿಧಿ ಯೋಜನೆ ನೋಂದಣಿ ಕೂಡ ಪ್ರಾರಂಭವಾಗಲಿದೆ. ಜನವರಿ 12 ರಿಂದ ಅರ್ಹ ಖಾತೆಗೆ ನಿರುದ್ಯೋಗ ಭತ್ಯೆ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ. ಡಿ. 26 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ.

ಯುವ ನಿಧಿಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ
ರಾಜ್ಯ ಸರ್ಕಾರ ಯುವ ನಿಧಿ ಅರ್ಜಿ ಸಲ್ಲಿಕೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಅರ್ಹ ಯುವಕ ಯುವತಿಯರು ಸರ್ಕಾರದ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ, ಬ್ಯಾಂಕ್ ಖಾತೆಯ ವಿವರ ಇಮೈಲ್ ಐಡಿ, ಮೊಬೈಲ್ ಸಂಖ್ಯೆ, ಭಾವಚಿತ್ರ, ಪದವಿ ಹಾಗೂ ಡಿಪ್ಲೊಮೊ ಮುಗಿಸಿದ ಕೊನೆಯ ವರ್ಷದ ಅಂಕಪಟ್ಟಿ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು.

Yuva Nidhi Scheme 2023
Image Credit: Original Source

ಇಂತವರಿಗೆ ನಿರುದ್ಯೋಗ ಭತ್ಯೆ ಹಣ ಜಮಾ ಆಗುವುದಿಲ್ಲ
•ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕರು.

Join Nadunudi News WhatsApp Group

•ಅಪ್ರೆಂಟಿಸ್ ವೇತನದ ಫಲಾನುಭವಿ.

•ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಯುವಕರು.

•ಸ್ವಯಂ ಉದ್ಯೋಗದಲ್ಲಿರುವ ಯುವಕರು.

•ಸರ್ಕಾರದ ಇತರ ಆರ್ಥಿಕ ನೆರವು ಯೋಜನೆಯ ಫಲಾನುಭವಿ.

Karnataka Yuva Nidhi Scheme
Image Credit: Original Source

ಯುವ ನಿಧಿ ಯೋಜನೆಗೆ ಸರ್ಕಾರದ ಷರತ್ತುಗಳೇನು..?
~2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ.

~ಎರಡು ವರ್ಷಗಳು ಮಾತ್ರ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಸಿಗಲಿದೆ.

~ಎರಡು ವರ್ಷದೊಳಗೆ ಅಭ್ಯರ್ಥಿಗೆ ಉದ್ಯೋಗ ದೊರೆತರೆ ಮಾಸಿಕ ಹಣ ಸ್ಥಗಿತಗೊಳ್ಳ್ಳಲಿದೆ.

~ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಅಭ್ಯರ್ಥಿಯು ಮಧ್ಯದಲ್ಲಿ ಕೆಲಸವನ್ನು ಪಡೆದರೆ ಸರ್ಕಾರಕ್ಕೆ ಮಾಹಿತಿ ತಿಳಿಸಬೇಕು.

~ನಕಲಿ ಮಾಹಿತಿ ನೀಡಿ ಸರ್ಕಾರದಿಂದ ನಿರುದ್ಯೋಗ ಭತ್ಯೆ ಪಡೆದರೆ ಅಂತವರಿಗೆ ಸರ್ಕಾರ ಬಾರಿ ದನದ ವಿಧಿಸಲಿದೆ.

Join Nadunudi News WhatsApp Group