Yuva Nidhi: ಯುವನಿಧಿ ಯೋಜನೆಯಲ್ಲಿ ಯಾರು ಯಾರಿಗೆ ಎಷ್ಟು ಹಣ ಸಿಗಲಿದೆ, ಷರತ್ತುಗಳು ಅನ್ವಯ.

ಯುವನಿಧಿ ಯೋಜನೆ ಅನುಷ್ಠಾನದ ಬಗ್ಗೆ ಸಿದ್ದರಾಮಯ್ಯ ಘೋಷಣೆ, ಯುವನಿಧಿ ಯೋಜನೆಗೆ ಯಾರು ಅರ್ಹರು ತಿಳಿದುಕೊಳ್ಳಿ.

Karnataka Yuva Nidhi Scheme 2023: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ (Congress) ಭರವಸೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಬಾರಿಯ ಆರ್ಥಿಕ ವರ್ಷದಲ್ಲಿಯೇ ಐದು ಯೋಜನೆಗಳನ್ನು ಈಡೇರುಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಭತ್ಯೆ ನೀಡುವ ಕುರಿತು ಸಿದ್ದರಾಮಯ್ಯ (Siddaramaiah) ಘೋಷಣೆ ಹೊರಡಿಸಿದ್ದಾರೆ.

Siddaramaiah's announcement about the implementation of Yuvanidi Yojana, Know who is eligible for Yuvanidi Yojana.
Image Credit: indiatoday

ಯುವನಿಧಿ ಯೋಜನೆ ಅನುಷ್ಠಾನದ ಬಗ್ಗೆ ಸಿದ್ದರಾಮಯ್ಯ ಘೋಷಣೆ
ಕರ್ನಾಟಕದ ಮುಖಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಐದು ಭಾರವಸೆಗಳ ಅನುಷ್ಠಾನದ ಬಗ್ಗೆ ಘೋಷಣೆ ಹೊರಡಿಸಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಸೇರಿದಂತೆ ಯುವನಿಧಿ ಯೋಜನೆಯ ಅನುಷ್ಠಾನದ ಬಗ್ಗೆ ಮಹತ್ವದ ಘೋಷಣೆ ಹೊರಡಿಸಲಾಗಿದೆ.

ಯುವನಿಧಿ (Yuva Nidhi) ಯೋಜನೆ ಯಾರಿಗೆ ಲಭ್ಯವಾಗಲಿದೆ ಎನ್ನುವ ಬಗ್ಗೆ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಯುವನಿಧಿ ಯೋಜನೆಯ ಲಭ್ಯತೆಯ ಬಗ್ಗೆ ವಿವರಗಳನ್ನು ತಿಳಿಯೋಣ.

Unemployed people can take advantage of Yuva Nidhi Scheme given by Congress.
Image Credit: indianexpress

ಯುವನಿಧಿ ಯೋಜನೆಗೆ ಯಾರು ಅರ್ಹರು
ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವ ಕುರಿತು ಕಾಂಗ್ರೆಸ್ ಸರ್ಕಾರ ಘೋಷಣೆ ಹೊರಡಿಸಿತ್ತು. ಇನ್ನು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯ ಜಾರಿ ಕುರಿತು ಚರ್ಚಿಸಲಾಗಿದೆ. 2022 -23 ರಲ್ಲಿ ವ್ಯಾಸಂಗ ಮಾಡಿದ ಪದವೀಧರ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಹರಾಗಿದ್ದಾರೆ. ಡಿಗ್ರಿ ಮತ್ತು ಡಿಪ್ಲೊಮೊದಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ ಮಾತ್ರ ಯುವನಿಧಿ ಲಭ್ಯವಾಗಲಿದೆ.

Join Nadunudi News WhatsApp Group

ಡಿಗ್ರಿ ಪದವೀಧರರಿಗೆ ಮಾಸಿಕವಾಗಿ 3000 ಹಾಗೂ ಡಿಪ್ಲೊಮೊ ಪದವೀಧರರಿಗೆ ಮಾಸಿಕ 1500 ನೀಡುವ ಬಗ್ಗೆ ಘೋಷಿಸಲಾಗಿದೆ. ಇನ್ನು ಈ ಯುವನಿಧಿ ಯೋಜನೆಯು ಅರ್ಹ ಫಲಾನುಭವಿಗಳಿಗೆ 24 ತಿಂಗಳ ವರೆಗೆ ಭತ್ಯೆ ನೀಡಲಾಗುತ್ತದೆ. ಎರಡು ವರ್ಷದಲ್ಲಿ ಫಲಾನುಭವಿಗಳು ಯಾವುದೇ ಸರ್ಕಾರೀ ಉದ್ಯೋಗ ಅಥವಾ ಖಾಸಗಿ ಉದ್ಯೋಗ ಪಡೆದರೆ ಭತ್ಯೆ ನೀಡಲಾಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಘೋಷಣೆ ಹೊರಡಿಸಿದ್ದಾರೆ.

Join Nadunudi News WhatsApp Group