Corona Disease: ಪೋಷಕರಿಗೆ ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ, ಮಕ್ಕಳಿಗೆ ಸೋಂಕು ಬರಲಿದೆ.

ಈ ಬಾರಿ ಕರೋನ ಸೋಂಕು ಹೆಚ್ಚು ಮಕ್ಕಳಿಗೆ ಹರಡುವ ಸಾಧ್ಯತೆ ಇದ್ದು ಪೋಷಕರು ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Corona Virus In india: ದೇಶದಲ್ಲಿ ಮತ್ತೆ ಕರೋನ ಪ್ರಕರಣಗಳು (Corona Virus) ಬೆಳಕಿಗೆ ಬಂದಿವೆ. ಈ ಹಿಂದೆ ಕರೋನ ವೈರಸ್ ಎಲ್ಲೆಡೆ ಹರಡಿಕೊಂಡು ಇಡೀ ವಿಶ್ವವನ್ನೇ ಒಮ್ಮೆ ಅನಾರೋಗ್ಯದಿಂದ ಮುಳುಗಿಸಿತ್ತು. ಕಳೆದ ವರ್ಷದಿಂದ ಕರೋನ ವೈರಸ್ ನಿಂದ ಮುಕ್ತಿ ಸಿಕ್ಕಿತ್ತು. ಆದರೆ ಕರೋನ ವೈರಸ್ ನಂತರ ಅನೇಕ ವೈರಸ್ ಗಳು ಬಂದಿದ್ದವು.

ಸಾಕಷ್ಟು ಸಾಂಕ್ರಾಮಿಕ ವೈರಸ್ ಗಳಿಂದಾಗಿ ಜನತೆ ಮತ್ತಷ್ಟು ಕಂಗಾಲಾಗಿದ್ದರು. ಇದೀಗ ಮತ್ತೆ ಕರೋನ ಭೀತಿ ಹೆಚ್ಚಾಗುತ್ತಿದೆ. ಈ ಬಾರಿ ಮಕ್ಕಳಲ್ಲಿ ಕರೋನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಈ ಬಗ್ಗೆ ಪೋಷಕರಿಗೆ ಮಕ್ಕಳ ಬಗ್ಗೆ ನಿಗಾ ವಹಿಸಲು ಆರೋಗ್ಯ ಇಲಾಖೆ ಹೇಳಿದೆ.

Corona Virus In india
Image Source: India News

ದೇಶದಲ್ಲಿ ಮತ್ತೆ ಹೆಚ್ಚಾಗಿದೆ ಕರೋನ ಪ್ರಕರಣಗಳು
ದೇಶದಲ್ಲಿ ಮತ್ತೊಮ್ಮೆ ಕರೋನ ಭೀತಿ ಕಾಡುತ್ತಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಕರೋನ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಕರೋನದಿಂದ ಮೃತಪಟ್ಟವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 15 ಮಂದಿ ಕರೋನಗೆ ಬಲಿಯಾಗಿದ್ದಾರೆ. ಅದರಲ್ಲೂ ದೆಹಲಿ ಕರೋನ ಪ್ರಕಾರನು ಹೆಚ್ಚಾಗಿವೆ. ದೆಹಲಿಯಲ್ಲಿ 3 ಜನ ಕರೋನದಿಂದಾಗಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಕೊರೊನ ಸೋಂಕಿನ ಪ್ರಮಾಣ 26 ಪ್ರತಿಶತದಷ್ಟು ಏರಿಕೆಯಾಗಿದೆ.

Corona Virus In india
Image Source: The Week

ಮಹಾರಾಷ್ಟ್ರದಲ್ಲಿ ಕೂಡ ಹೆಚ್ಚಾಗಿದೆ ಕರೋನ ಪ್ರಕರಣಗಳು
ದೇಶದಾದ್ಯಂತ ಕರೋನ ಪ್ರಕರಣಗಳು 37 ಸಾವಿರ ದಾಟಿದೆ. ಅದರಲ್ಲೂ ಮಹಾರಾಷ್ಟ್ರದ ಬಿಜಾಪುರದಲ್ಲಿ ಕೂಡ ಕರೋನ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ. ಮಹಾರಾಷ್ಟ್ರದ ಬಿಜಾಪುರದಲ್ಲಿ 18 ಮಕ್ಕಳಿಗೆ ಕರೋನ ಸೋನು ಪತ್ತೆಯಾಗಿದೆ.

ಈ ಜಿಲ್ಲೆಯ ಮಕ್ಕಳಲ್ಲಿ ಕರೋನ ಪರೀಕ್ಷೆ ನಡೆಸಿದಾಗ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿದೆ. ಈ ಬಾರಿಯ ಕರೋನ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ಹೆಚ್ಚಿನ ಗಮನ ಇರಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Join Nadunudi News WhatsApp Group

Corona Virus In india
Image Source: Mint

Join Nadunudi News WhatsApp Group