Currency Notes: ಅಗತ್ಯಕ್ಕಿಂತ ಹೆಚ್ಚು ನೋಟುಗಳನ್ನ ಸರ್ಕಾರ ಮುದ್ರಣ ಮಾಡಿದರೆ ಏನಾಗುತ್ತದೆ, ಆಗುವ ಸಮಸ್ಯೆಗಳು ಏನು.

ಅಗತ್ಯಕಿಂತ ಹೆಚ್ಚಿನ ನೋಟುಗಳನ್ನು ಮುದ್ರಣ ಮಾಡಿದರೆ ಆಗುವ ಸಮಸ್ಯೆಗಳು.

Currency Notes Print: ಹಣ ಯಾರಿಗೆ ಬೇಕಿಲ್ಲ, ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತದೆ, ಈ ಮಾತು ಎಲ್ಲರಿಗೂ ಗೊತ್ತು. ಈಗಿನ ಕಾಲದಲ್ಲಿ ದುಡ್ಡಿಲ್ಲದೆ ಏನು ಆಗಲ್ಲ. ನಮ್ಮ ಸರ್ಕಾರವು ಹಣವನ್ನು ಮುದ್ರಿಸುತ್ತದೆ. ಹೀಗಿದ್ದಾಗ ನಮ್ಮ ದೇಶಕ್ಕೆ ಎಷ್ಟು ಬೇಕೋ ಅಷ್ಟು ನೋಟುಗಳನ್ನು ಮುದ್ರಿಸಿ ಬಡತನ ದೂರ ಮಾಡಬಹುದು, ಆದರೆ ಈ ರೀತಿ ಮಾಡಲು ಆಗುವುದಿಲ್ಲ. ಇದು ಯಾಕೆ ಎಂಬುದನ್ನು ತಿಳಿದುಕೊಳ್ಳೋಣ.

currency notes latest news
Image Credit: fortuneindia

ಬೇಕಾದಷ್ಟು ನೋಟುಗಳನ್ನು ಮುದ್ರಿಸಿದರೆ ಆಗುವ ತೊಂದರೆಗಳು
ಸರ್ಕಾರವು ಅನಿಯಮಿತ ಕರೆನ್ಸಿಯನ್ನು ಮುದ್ರಿಸಲು ಪ್ರಾರಂಭಿಸಿದರೆ, ಅದು ಹಣದುಬ್ಬರವನ್ನು ಹೆಚ್ಚಿಸುತ್ತದೆ. ಆರ್ಥಿಕತೆಯು ತನ್ನನ್ನು ತಾನೇ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಪೂರೈಕೆ ಮತ್ತು ಬೇಡಿಕೆ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರವು ಬಹಳಷ್ಟು ಕರೆನ್ಸಿಯನ್ನು ಮುದ್ರಿಸುತ್ತದೆ. ಅದನ್ನು ಮಾರುಕಟ್ಟೆಗೆ ತರುತ್ತದೆ ಎಂದು ಭಾವಿಸೋಣ. ಈಗ ಜನರ ಬಳಿ ಹೆಚ್ಚು ಹಣ ಬರುತ್ತದೆ. ಹಣ ಹೆಚ್ಚಾದರೆ ಸರಕು ಮತ್ತು ಸೇವೆಗಳ ಬೇಡಿಕೆಯೂ ಹೆಚ್ಚುತ್ತದೆ.

ಹಣದ ಮೌಲ್ಯ ಸಹ ವೇಗವಾಗಿ ಕುಸಿಯುತ್ತದೆ. ಹಣದುಬ್ಬರವು ಗಗನಕ್ಕೇರುತ್ತದೆ ಮತ್ತು ಅದನ್ನು ನಿಯಂತ್ರಿಸಲು ಅಸಾಧ್ಯವಾಗುತ್ತದೆ. ಭಾರತೀಯ ಕರೆನ್ಸಿಯನ್ನು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಒಪ್ಪಿಕೊಂಡರೆ, ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತದೆ.

Learn about the problem of printing more notes than required.
Image Credit: google

ಅಮೇರಿಕಾದಲ್ಲಿ ಹಣದ ಮುದ್ರಣ ಹೆಚ್ಚಳ
ಇನ್ನು ಅಮೇರಿಕ ಕೋವಿಡ್ 19 ಸಮಯದಲ್ಲಿ ಹಣದ ಮುದ್ರಣವನ್ನು ಹೆಚ್ಚಿಸಿತು. ಸುಮಾರು 3 .5 ತಿಂಗಳುಗಳಲ್ಲಿ ಅದು ತನ್ನ ಆಯವ್ಯಯವನ್ನು $ 4.16 ಟ್ರಿಲಿಯನ್ ನಿಂದ $7.17 ಟ್ರಿಲಿಯನ್ ಗೆ ಹೆಚ್ಚಿಸಿತು. ಮುಂದಿನ ಕೆಲವು ತಿಂಗಳುಗಳಲ್ಲಿ ಅದು ಮತ್ತೆ 9 ಟ್ರಿಲಿಯನ್ ಡಾಲರ್ ಗೆ ಏರಿತು. ಈ ಬೆಳವಣಿಗೆಯು ಮಾರ್ಚ್ 2020 ರಿಂದ ಏಪ್ರಿಲ್ 2022 ರವರೆಗೆ ನಡೆಯಿತು.

Join Nadunudi News WhatsApp Group

Join Nadunudi News WhatsApp Group