December Holiday: ಮುಂದಿನ ವಾರ 5 ದಿನಗಳು ಬ್ಯಾಂಕ್ ಬಾಗಿಲು ಮುಚ್ಚಿರಲಿದೆ, ಬೇಗನೆ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳಿ.

ಕ್ರಿಸ್ಮಸ್ ಮತ್ತೆ ಸರ್ಕಾರೀ ರಜೆಗಳ ಕಾರಣ ಮುಂದಿನ ವಾರ ಸತತ ಐದು ದಿನ ಬ್ಯಾಂಕ್ ಮುಚ್ಚಿರಲಿದೆ.

Christmas Holiday 2023: ಇನ್ನೇನು ಕೆಲವೇ ದಿನಗಳಲ್ಲಿ 2024 ಗೆ ಕಾಲಿಡಲಿದ್ದೇವೆ. ಹೊಸ ವರ್ಷದ ಆಗಮನಕ್ಕಾಗಿ ಜನರು ಕಾಯುತ್ತಿದ್ದಾರೆ. ಆದರೆ ಹೊಸ ವರ್ಷಕ್ಕೂ ಮೊದಲು ಈ ವರ್ಷಾಂತ್ಯದಲ್ಲಿ ಜನಸಾಮಾನ್ಯರು ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕಿದೆ. ಸಾಕಷ್ಟು ಹಣಕಾಸಿನ ವಹಿವಾಟುಗಳನ್ನು ಈ ವರ್ಷಾಂತ್ಯದಲ್ಲಿ ಪೂರ್ಣಗೊಳಿಸಿಕೊಳ್ಳುವುದು ಅಗತ್ಯವಾಗಿದೆ.

December Holiday Updates
Image Credit: Original Source

ಆದಷ್ಟು ಬೇಗನೆ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳಿ
ಇನ್ನು ಹಣಕಾಸಿನ ವಹಿವಾಟನ್ನು ಪೂರ್ಣಗೊಳಿಸಿಕೊಳ್ಳಲು ಬ್ಯಾಂಕ್ ಗೆ ಭೇಟಿ ನೀಡಬೇಕಾಗುತ್ತದೆ. ಆದರೆ ಈ December ನಲ್ಲಿ ಬ್ಯಾಂಕ್ ಸಾಕಷ್ಟು ದಿನ ಬಂದ್ ಆಗಲಿದೆ. ಅದರಲ್ಲೂ ತಿಂಗಳ ಕೊನೆಯ ಐದು ದಿನದ ಮುಂಚೆ ಕ್ರಿಸ್ಮಸ್ ಬರುವುದರಿಂದ ಬ್ಯಾಂಕ್ ಗೆ ಹೆಚ್ಚಿನ ರಜೆ ಇರಲಿದೆ. ಹೀಗಾಗಿ ನೀವು ಡಿಸೆಂಬರ್ ಬ್ಯಾಂಕ್ ರಜೆಯ ವಿವರದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

ಕೆಲವು ಪ್ರದೇಶದಲ್ಲಿ ಕ್ರಿಸ್ಮಸ್ ಗಾಗಿ ವಿಶೇಷ ರಜಾ ದಿನಗಳನ್ನು ನೀಡಲಾಗುತ್ತದೆ. ಡಿ. 25 ರಿಂದ 27 ರ ರೆಗೆ ಹಲವು ರಾಜ್ಯದಲ್ಲಿ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ. ಇನ್ನು ಬ್ಯಾಂಕುಗಳು ಬಂದ್ ಆಗಿದ್ದರು ಕೂಡ ನೀವು ಯಾವುದೇ ಸಮಸ್ಯೆ ಇಲ್ಲದೆ ಆನ್ಲೈನ್ ಬ್ಯಾಂಕಿಂಗ್ ಸೇವೆಯನ್ನು ಪಡೆದುಕೊಳ್ಳಬಹುದು. ಇನ್ನು ಈ ವರ್ಷಾಂತ್ಯದಲ್ಲಿ ಕೆಲ ಬ್ಯಾಂಕ್ ವ್ಯವಹಾರವನ್ನು ಮುಗಿಸಿಕೊಳ್ಳುವುದು ಕಡ್ಡಾಯವಾಗಿರುವುದರಿಂದ ಬ್ಯಾಂಕ್ ರಜಾ ದಿನಗಳ ಮಾಹಿತಿ ತಿಳಿದುಕೊಳ್ಳಿ.

December 2023 Holiday
Image Credit: Informal News

ಮುಂದಿನ ವಾರ 5 ದಿನಗಳು ಬ್ಯಾಂಕ್ ಬಾಗಿಲು ಮುಚ್ಚಿರಲಿದೆ
•December 19: ಗೋವಾ ವಿಮೋಚನಾ ದಿನದಂದು ಗೋವಾದಲ್ಲಿ ಬ್ಯಾಂಕ್‌ ಗಳಿಗೆ ರಜೆ ಇರುತ್ತದೆ.

•December 23: : ನಾಲ್ಕನೇ ಶನಿವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ.

Join Nadunudi News WhatsApp Group

•December 24: ಭಾನುವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ.

•December 25: ಕ್ರಿಸ್‌ಮಸ್ ಕಾರಣ ದೇಶದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

•December 26: ಕ್ರಿಸ್ಮಸ್ ಆಚರಣೆಯ ಕಾರಣ ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

•December 27: ಕ್ರಿಸ್ಮಸ್ ಕಾರಣ ನಾಗಾಲ್ಯಾಂಡ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

•December 30: U Kiang Nangbah ಕಾರಣದಿಂದಾಗಿ ಮೇಘಾಲಯದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

•December 31: ಭಾನುವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ.

Join Nadunudi News WhatsApp Group