Diwali Bonus: ರೇಷನ್ ಕಾರ್ಡ್ ಇದ್ದರೆ ಸಿಗಲಿದೆ ದೀಪಾವಳಿ ಬೋನಸ್, ಕಾರ್ಮಿಕರಿಗೆ ಬಂಪರ್ ಕೊಡುಗೆ.

Diwali Bonus: ರೇಷನ್ ಕಾರ್ಡ್ ಇದ್ದರೆ ಸಿಗಲಿದೆ ದೀಪಾವಳಿ ಬೋನಸ್ (Diwali Bonus), ಕಾರ್ಮಿಕರಿಗೆ ಬಂಪರ್ ಕೊಡುಗೆ. ಹೌದು ದೇಶದಲ್ಲಿ ಹಬ್ಬದ ಸಮಯದಲ್ಲಿ ಬೋನಸ್ ಹಣವನ್ನ ಹಲವು ಕಂಪನಿಗಳು ನೀಡುತ್ತದೆ. ಕೆಲವು ಸಂಸ್ಥೆಗಳು ಬೋನಸ್ ರೂಯಾಪದಲ್ಲಿ ಹಣವನ್ನ ನೀಡಿದರೆ ಇನ್ನೂ ಕೆಲವು ಸಂಸ್ಥೆಗಳು ಬೇರೆ ವಸ್ತುಗಳನ್ನ ಬೋನಸ್ ರೂಪದಲ್ಲಿ ನೀಡುತ್ತದೆ. ಖಾಸಗಿ ಕಂಪನಿಗಳು ಹೆಚ್ಚಾಗಿ ತಮ್ಮ ಕಾರ್ಮಿಕರಿಗೆ ಮತ್ತು ಸಂಸ್ಥೆಯಲ್ಲಿ ಕೆಲಸವನ್ನ ಮಾಡುವವರಿಗೆ ಬೋನಸ್ ಹಣವನ್ನ ನೀಡುತ್ತದೆ, ಆದರೆ ಈಗ ಸರ್ಕಾರ ಕೂಡ ಬೋನಸ್ ಅನ್ನು ತನ್ನ ಕಾರ್ಮಿಕರಿಗೆ ನೀಡಲು ಮುಂದಾಗಿದ್ದು ಇದು ಕಾರ್ಮಿಕರ ಸಂತಸಕ್ಕೆ ಕಾರಣವಾಗಿದೆ.

ರೇಷನ್ ಕಾರ್ಡ್ (Ration Card) ಹೊಂದಿರುವ ಕಾರ್ಮಿಕರಿಗೆ ಮತ್ತು ಕೆಲಸದವರಿಗೆ ಬೋನಸ್ ನೀಡಲು ಈಗ ಸರ್ಕಾರ ಮುಂದಾಗಿದ್ದು ಈ ಸುದ್ದಿ ದೇಶದಲ್ಲಿ ಸಕತ್ ಟ್ರೆಂಡಿಂಗ್ ಆಗಿದೆ. ಹಾಗಾದರೆ ಸರ್ಕಾರ ಯಾವ ರೀತಿಯಲ್ಲಿ ಬೋನಸ್ ನೀಡಲು ಮುಂದಾಗಿದೆ ಮತ್ತು ಯಾರು ಯಾರಿಗೆ ಈ ಬೋನಸ್ ಸಿಗಲಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ದೀಪಾವಳಿ ಹಬ್ಬಕ್ಕೆ (Diwali Festival) ಇನ್ನೇನು ಕೆಲವೇ ದಿನಗಳು ಮಾತ್ರ ಭಾಕಿ ಉಳಿದುಕೊಂಡಿದೆ ಮತ್ತು ದೀಪಾವಳಿ ಹಣ್ಣಕ್ಕೆ ವಿವಿಧ ಸರ್ಕಾರಗಳು ತಮ್ಮ ಕಾರ್ಮಿಕರಿಗೆ ಬೋನಸ್ ನೀಡುತ್ತದೆ.

Maharashtra government gave bonus to its employees for Diwali festival.
Image Credit: www.news18.com

ಸದ್ಯ ಅದೇ ರೀತಿಯಲ್ಲಿ ಈಗ ಮಹಾರಾಷ್ಟ್ರ ಸರ್ಕಾರ ಈಗ ಕಾರ್ಮಿಕರಿಗೆ ದೀಪಾವಳಿ ಬೋನಸ್ ನೀಡಲು ಮುಂಗಿದ್ದು, ರೇಷನ್ ಹೊಂದಿರುವ ಕಾರ್ಮಿಕರು ಈ ಬೋನಸ್ ಹಣವನ್ನ ಪಡೆದುಕೊಳ್ಳಬಹುದು. ಇದರ ಕುರಿತು ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವನ್ನ ಮಾಡಲಾಗಿದೆ ಮತ್ತು ರೇಷನ್ ಕಾರ್ಡ್ ಹೊಂದಿರುವ ನೌಕರರಿಗೆ 100 ರೂಪಾಯಿ ಹಣದಲ್ಲಿ ಹಲವು ದಿನಸಿ ಸಾಮಗ್ರಿಗಳನ್ನ ನೀಡಲು ಈಗ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ ಮತ್ತು ಇದನ್ನ ದೀಪಾವಳಿ ಬೋನಸ್ ಎಂದು ಹೇಳಿದೆ.

ಕೇವಲ 100 ರೂಪಾಯಿಯಲ್ಲಿ ಕಾರ್ಮಿಕರಿಗೆ ರವಾ, ಅಕ್ಕಿ, ಎಣ್ಣೆ, ಸಕ್ಕರೆ, ಉಪ್ಪು, ಶೇಂಗಾ ಬೀಜ ಸೇರಿದಂತೆ ಇನ್ನು ಹಲವು ಸಾಮಗ್ರಿಗಳನ್ನ ನೀಡಲು ಮಹಾರಾಷ್ಟ್ರ ಸರ್ಕಾರ ತೀರ್ಮಾನವನ್ನ ಮಾಡಿದೆ. ಮಹಾರಾಷ್ಟ್ರ ಸರ್ಕಾರ ತಮ್ಮ ಕಾರ್ಮಿಕರಿಗೆ ಪ್ರತಿ ವರ್ಷ ದೀಪಾವಳಿ ಉಡುಗೊರೆನೀಡುತ್ತದೆ ಮತ್ತು ಈ ವರ್ಷ ಕೂಡ ದೀಪಾವಳಿ ಉಡುಗೊರೆಯನ್ನ ನೀಡಿದ್ದು ಇದು ಕಾರ್ಮಿಕರ ಮತ್ತು ನೌಕರರ ಸಂತಸಕ್ಕೆ ಕಾರಣವಾಗಿದೆ.

ನೌಕರರು ಸರ್ಕಾರೀ ಪಡಿತರ ಅಂಗಡಿಗಳನ್ನ ಈ ಸಾಮಗ್ರಿಗಳನ್ನ ಪಡೆದುಕೊಳ್ಳಬೇಕು ಎಂದು ಸರ್ಕಾರ ಹೇಳಿದೆ. 100 ರೂಪಾಯಿ ಹಣವನ್ನ ನೀಡಿ ನೌಕರರು ಹಲವು ದಿನಸಿ ಸಾಮಗ್ರಿಗಳನ್ನ ಮನೆಗೆ ತಗೆದುಕೊಂಡು ಹೋಗಬಹುದು. ಸದ್ಯ ಈ ಉಡುಗೊರೆ ಮಹಾರಾಷ್ಟ್ರ ಸರ್ಕಾರ ತನ್ನ ನೌಕರರಿಗೆ ನೀಡಿದ್ದು ನಮ್ಮ ಕರ್ನಾಟಕ ಸರ್ಕಾರ ಯಾವ ರೀತಿಯಲ್ಲಿ ಉಡುಗೊರೆ ನೀಡುತ್ತದೆ ಎಂದು ಕಾದು ನೋಡಬೇಕಾಗಿದೆ.

Join Nadunudi News WhatsApp Group

Join Nadunudi News WhatsApp Group