Bonus For Employees: ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ಬೋನಸ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ, ಇಂತವರಿಗೆ ಮಾತ್ರ.

ನೌಕರರಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಿದ ಕೇಂದ್ರ ಸರ್ಕಾರ.

Diwali Bonus For Govt Employees: ಸದ್ಯ ದೇಶದಲ್ಲಿ ನೌಕರರ ವೇತನ ಹೆಚ್ಚಳದ ಸುದ್ದಿಗಳು ಹರಿದಾಡುತ್ತಿದೆ. October ನಲ್ಲಿ ಶೇ. 4 ರಷ್ಟು ತುಟ್ಟಿಭತ್ಯೆ ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಬಗ್ಗೆ ಸರ್ಕಾರ ಈಗಾಗಲೇ ಅಧಿಕೃತ ಘೋಷಣೆ ಹೊರಡಿಸಿದೆ.

ಈ ತುಟ್ಟಿಭತ್ಯೆ ಹೆಚ್ಚಳದ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ಕೇಂದ್ರ ನೌಕರರಿಗೆ ದೀಪಾವಳಿ ಬೋನಸ್ ನೀಡಲು ನಿರ್ಧರಿಸಿದೆ. ಕೇಂದ್ರ ನೌಕರರು ದೀಪಾವಳಿ ಬೋನಸ್ ಆಗಿ ಹೆಚ್ಚುವರಿ ವೇತನ ಪಡೆಯಲಿದ್ದಾರೆ. ಇನ್ನು ಸರ್ಕಾರ ಈ ದಿವಾಲಿ ಬೋನಸ್ ಪಡೆಯಲು ಕೆಲವರು ಮಾತ್ರ ಅರ್ಹರಾಗಿದ್ದಾರೆ. ಇದೀಗ ಕೇಂದ್ರ ದೀಪಾವಳಿ ಬೋನಸ್ ಪಡೆಯಲು ಯಾರು ಅರ್ಹರು ಎನ್ನುವ ಬಗ್ಗೆ ಇಲ್ಲಿದೆ ವಿವಿರ.

Govt Employees DA Hike
Image Source: News18

ಉದ್ಯೋಗಿಗಳಿ ದೀಪಾವಳಿ ಹಬ್ಬದ ಬೋನಸ್ ಘೋಷಣೆ
ಸದ್ಯ ಕೇಂದ್ರದ ಮೋದಿ ಸರ್ಕಾರ ಕೇಂದ್ರ ನೌಕರರಿಗೆ ಬಿಗ್ ಅಪ್ಡೇಟ್ ನೀಡಿದೆ. ಕೇಂದ್ರ ನೌಕರರಿಗೆ ದೀಪಾವಳಿ ಗಿಫ್ಟ್ ನೀಡಲು ಮೋದಿ ಸರ್ಕಾರ ಬೋನಸ್ ಘೋಷಿಸಿದೆ. Group B ಮತ್ತು Group C ವರ್ಗದ ನೌಕರರು 30 ದಿನಗಳ ವೇತನಕ್ಕೆ ಸಮಾನವಾದ ಹಣವನ್ನು ದೀಪಾವಳಿ ಉಡುಗೊರೆಗಿ ಪಡೆಯಲಿದ್ದಾರೆ. ಕೇಂದ್ರ ಸರ್ಕಾರೀ ನೌಕರರಿಗೆ Non-Productivity Linked Bonus (ತಾತ್ಕಾಲಿಕ ಬೋನಸ್) ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಇಂತವರು ಮಾತ್ರ ದೀಪಾವಳಿ ಹಬ್ಬದ ಬೋನಸ್ ಪಡೆಯಲಿದ್ದಾರೆ
ಈವರೆಗೆ on-Productivity Linked Bonus ಯೋಜನೆಯ ವ್ಯಾಪ್ತಿಗೆ ಒಳಪಡದ ಕೇಂದ್ರ ಸರ್ಕಾರದ Group B ಮತ್ತು Group C ವರ್ಗದ ಅಡಿಯಲ್ಲಿ ಗಜೆಟೆಡ್ ಅಲ್ಲದ ಉದ್ಯೋಗಿಗಳಿಗೆ ಈ ದೀಪಾವಳಿ ಬೋನಸ್ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಗಜೆಟೆಡ್ ಅಲ್ಲದ ಉದ್ಯೋಗಿಗಳಿಗೆ 2022 -23 ನೇ ಸಾಲಿಗೆ 7,000 ರೂ. ಗಳ ಬೋನಸ್ ಅನ್ನು ಕೇಂದ್ರ ಹಣಕಾಸು ಸಚಿವಾಲಯ ಘೋಷಿಸಿದೆ.

Govt Employees DA Hike
Image Source: Mint

ಇನ್ನು 2023 ರ ಮಾರ್ಚ್ 31 ರವರೆಗೆ ಸೇವೆಯಲ್ಲಿದ್ದ ಮತ್ತು 2022 -23 ನೇ ಸಾಲಿನಲ್ಲಿ ಕನಿಷ್ಠ 6 ತಿಂಗಳು ಕೆಲಸ ಮಾಡಿದ ಕೇಂದ್ರ ಸರ್ಕಾರೀ ನೌಕರರು ಈ ಬೋನಸ್ ಅನ್ನು ಪಡೆಯಲು ಅರ್ಹಾರಾಗಿರುತ್ತಾರೆ. ಸರಿಸುಮಾರು 38 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಈ ಬೋನಸ್ ಸಿಗಲಿದೆ.

Join Nadunudi News WhatsApp Group

Join Nadunudi News WhatsApp Group