E -Shram Rule: ದೇಶದ ಎಲ್ಲಾ ಕಾರ್ಮಿಕರಿಗೆ ಕೇಂದ್ರದಿಂದ ಗುಡ್ ನ್ಯೂಸ್, ನಿಯಮದಲ್ಲಿ ದೊಡ್ಡ ಬದಲಾವಣೆ

E -Shram ಯೋಜನೆಯ ವಯೋಮಿತಿಯನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ

E -Shram Age Limit Increase: ದೇಶದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಾಲಕಾಲಕ್ಕೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು E -Shram Card ಅನ್ನು ಪರಿಚಯಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಸದ್ಯ ಕೇಂದ್ರ ಸರ್ಕಾರ E -Shram ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿದೆ.

E -Shram Rules
Image Credit: Housing

ಅಸಂಘಟಿತ ಕಾರ್ಮಿಕೆರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರ E -Shram Card ಯೋಜನೆಯನ್ನು ಪರಿಚಯಿಸಿದೆ. ಇದಕ್ಕಾಗಿಯೇ ಸರ್ಕಾರ ಈ ಶ್ರಮ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಪೋರ್ಟಲ್ ನ ಮೂಲಕ ಕಾರ್ಮಿಕರು ಸರ್ಕಾರ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದು. ಸದ್ಯ ಕೇಂದ್ರ ಸರ್ಕಾರ ಇ- ಶ್ರಮ್ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಅಸಂಘಟಿತ ಕಾರ್ಮಿಕ ವಯೋಮಿತಿಯನ್ನು ಹೆಚ್ಚಿಸಿದೆ.

ಇ- ಶ್ರಮ್ ವಯೋಮಿತಿ 70 ವರ್ಷಕ್ಕೆ ಏರಿಕೆ
E -Shram Card ನ ಮೂಲಕ 60 ವರ್ಷದ ನಂತರ 3,000 ಪಿಂಚಣಿ, ವಿಮೆ ಮತ್ತು ಅಂಗವೈಫಲ್ಯ ಸಮಯದಲ್ಲಿ ಕಾರ್ಮಿಕರು ಭಾಗಶಃ ಅಂಗವಿಕಲರಾದರೆ 1 ಲಕ್ಷ ರೂ. ಗಳ ಆರ್ಥಿಕ ನೆರವು ಹಾಗೂ ಸಾವಿನ ಸಂದರ್ಭದಲ್ಲಿ 2,00,000 ರೂ. ಗಳ ಹಣಕಾಸಿನ ಸಹಾಯವನ್ನು ಪಡೆಯಬಹುದು. ಯೋಜನೆಯ ಲಾಭವನ್ನು ಪಡೆಯಲು ಕಾರ್ಮಿಕರು E -Shram Card ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇನ್ನು ಕಾರ್ಮಿಕರು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಈ ಯೋಜನೆಯಡಿ ಲಾಭವನ್ನು ಪಡೆಯಬಹುದು.

E -Shram Age Limit Increase
Image Credit: Newsncr

ಈವರೆಗೆ ಇ- ಶ್ರಮ್ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು 59 ವರ್ಷ ಗರಿಷ್ಟ ವಯೋಮಿಯಿಯನ್ನು ನಿಗದಿಪಡಿಸಲಾಗಿತ್ತು. ಸದ್ಯ ಕೇಂದ್ರ ಸರ್ಕಾರ ಈ ವಯೋಮಿತಿಯನ್ನು ವಿಸ್ತರಿಸಿದೆ. ಹೌದು, ಅಸಂಘಟಿತ ಕಾರ್ಮಿಕ ವಯೋಮಿತಿಯನ್ನು ಕೇಂದ್ರ ಸರ್ಕಾರ 59 ವರ್ಶದಿಂದ 70 ವರ್ಷಕ್ಕೆ ವಿಸ್ತರಿಸಿದೆ. ಈ ಮೂಲಕ ಅಸಂಘಟಿತ ಕಾರ್ಮಿಕೆರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇನ್ನು ನೀವು E -Shram Card ಗೆ ಅರ್ಜಿ ಸಲ್ಲಿಸಲು CSC- Common Service Centre ಅಥವಾ ಇ- ಶ್ರಮ್ ಪೋರ್ಟಲ್ ನ ಮೂಲಕ ಅಗತ್ಯ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group