Education Rules: ಮಕ್ಕಳನ್ನ ಶಾಲೆಗೆ ಸೇರಿಸುವ ಪೋಷಕರಿಗೆ ಬಿಗ್ ಶಾಕ್, ಹೊಸ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.

LKG ಸೇರುವ ಮಕ್ಕಳಇಗೆ ವಯಸ್ಸಿನ ಮಿತಿಯನ್ನ ಕಡ್ಡಾಯ ಮಾಡಿದ ಶಿಕ್ಷಣ ಇಲಾಖೆ.

LKG Admission: ಇದೀಗ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಹೊಸ ಸುದ್ದಿ ಒಂದು ಸರ್ಕಾರದಿಂದ ಹೊರ ಬಿದ್ದಿದೆ. ಒಂದನೇ ತರಗತಿ ಸೇರುವ ಮಗುವಿಗೆ ಜೂನ್ 1 ಕ್ಕೆ ಆರು ವರ್ಷ ತುಂಬಿರಲೇ ಬೇಕೆಂಬ ನಿಯಮ 2025-26 ನೇ ಸಾಲಿನಿಂದ ರಾಜ್ಯದಲ್ಲಿ ಜಾರಿಗೆ ಬರಲಿವೆ.

ಈ ಹಿನ್ನಲೆಯಲ್ಲಿ ಈ ವರ್ಷದಿಂದಲೇ ಎಲ್ ಕೆ ಜಿ ಸೇರಲು ನಾಲ್ಕು ವರ್ಷ ಆಗಿರಲೇಬೇಕು ಎಂಬ ನಿಯಮ ಅನ್ವಯಿಸಿರುವುದಕ್ಕೆ ಪಾಲಕ ಪೋಷಕರನ್ನು ಕಂಗೆಡಿಸಿದೆ.

New news for parents of school children
Image Credit: oneindia

ಶಾಲಾ ಮಕ್ಕಳ ಪೋಷಕರಿಗೆ ಹೊಸ ಸುದ್ದಿ
ಸಮಗ್ರ ಶಿಕ್ಷಣ ಕರ್ನಾಟಕದಿಂದ ಹೊರಡಿಸಿರುವ ಆದೇಶದ ಅನ್ವಯ 2023-24 ನೇ ಸಾಲಿಗೆ ಎಲ್ ಕೆ ಜಿ ದಾಖಲಾಗುವ ಮಗುವಿಗೆ ಜೂನ್ 1 ಕ್ಕೆ 4 ವರ್ಷ ತುಂಬಿರಬೇಕು. ಅದರಂತೆ ಆ ಮಗು ಎಲ್ ಕೆ ಜಿ, ಯುಕೆಜಿ ಮುಗಿಸಿ ಒಂದನೇ ತರಗತಿ ಸೇರುವಾಗ 6 ವರ್ಷ ತುಂಬಿರುತ್ತದೆ.ಈ ವರ್ಷ ಎಲ್ ಕೆ ಜಿ ಸೇರುವ ಮಗುವಿಗೆ ಜೂನ್ 1 ಕ್ಕೆ 3 ವರ್ಷ 11 ತಿಂಗಳಾದರೂ ದಾಖಲಿಸಿಕೊಳ್ಳುವುದಿಲ್ಲ.

New news for parents of school children
Image Credit: education

ಶಿಕ್ಷಣ ಇಲಾಖೆ ಹೊಸ ನಿಯಮ
ಶಿಕ್ಷಣ ಇಲಾಖೆಯ ಈ ನಿಯಮ ಪೋಷಕರ ಆಕ್ರೋಶಕ್ಕೆ ಒಳಗಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲಕ ಪೋಷಕರ ಪ್ರಶ್ನೆಗೆ ಉತ್ತರಿಸದೆ ಮೌನ ತಳೆದಿದ್ದಾರೆ. ಇದು ಹಿಂದಿನ ಬಿಜೆಪಿ ಸರ್ಕಾರ ರೂಪಿಸಿದ ನಿಯಮವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿನ್ನಲೆಯಲ್ಲಿ ಒಂದನೇ ತರಗತಿ ಸೇರ್ತುವ ಮಗುವಿಗೆ ಆರು ವರ್ಷ ತುಂಬಿರಬೇಕು ಎಂಬ ನಿಯಮ ಸಾಮಾನ್ಯ. ಆದರೆ 5 ವರ್ಷ 11 ತಿಂಗಳು, 5 ವರ್ಷ 10 ತಿಂಗಳು ತುಂಬಿದ ಮಕ್ಕಳು ಏನು ಮಾಡಬೇಕೆಂಬುದರ ಬಗ್ಗೆ ಇನ್ನು ಸರ್ಕಾರ ಸ್ಪಷ್ಟನೆ ನೀಡಿಲ್ಲ.

Join Nadunudi News WhatsApp Group

Join Nadunudi News WhatsApp Group