Car Subsidy: ಎಲೆಕ್ಟ್ರಿಕ್ ಕಾರ್ ಖರೀದಿಸಲು ಇದು ಉತ್ತಮ ಸಮಯ, ಕಾರುಗಳ ಮೇಲೆ 2.5 ಲಕ್ಷ ರಿಯಾಯಿತಿ.

ಎಲೆಕ್ಟ್ರಿಕ್ ಕಾರುಗಳ ಖರೀದಿಯ ಮೇಲೆ ಎರಡೂವರೆ ಲಕ್ಷ ರೂ. ರಿಯಾಯಿತಿ ಲಭ್ಯವಾಗಲಿದೆ.

Electric Car Subsidy: ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರ್ ಗಳ (Electric car) ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೊಸ ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ.

ಸಾಮಾನ್ಯವಾಗಿ ಕಾರ್ ಖರೀದಿಸಲು ಎಲ್ಲರೂ ಬಯಸುತ್ತಾರೆ. ಆದರೆ ಹಣಕಾಸಿನ ಕೊರತೆಯಿಂದಾಗಿ ಕಾರ್ ಖರೀದಿಸುವ ಆಸೆಯನ್ನು ಕೈಬಿಡಬೇಕಾಗುತ್ತದೆ. ಇತ್ತೀಚಿಗೆ ಕಾರ್ ತಯಾರಕ ಕಂಪನಿಗಳು ಗ್ರಾಹಕರಿಗೆ ಅನುಕೂಲವಾಗಲು ಕೆಲವು ರೀತಿಯ ರಿಯಾಯಿತಿಗಳನ್ನು ಬಿಡುಗಡೆ ಮಾಡುತ್ತಿವೆ.

ಇದೀಗ ಈ ಎಲೆಕ್ಟ್ರಿಕ್ ಕಾರುಗಳ ಖರೀದಿಯ ಮೇಲೆ ಎರಡೂವರೆ ಲಕ್ಷ ರೂ. ರಿಯಾಯಿತಿ ಲಭ್ಯವಾಗಲಿದೆ. ಎಲೆಕ್ಟ್ರಿಕ್ ವಾಹನಗಳ ರಿಯಾಯಿತಿಯ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

2.5 lakh discount on electric cars
Image Credit: topgear

ಎಲೆಕ್ಟ್ರಿಕ್ ಕಾರುಗಳ ಮೇಲೆ 2 .5 ಲಕ್ಷ ರಿಯಾಯಿತಿ
ಇದೀಗ ಎಲೆಕ್ಟ್ರಿಕ್ ಕಾರುಗಳ ಖರೀದಿಯಲ್ಲಿ ಸಬ್ಸಿಡಿ  (Car Subsidy) ನೀಡಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಸಬ್ಸಿಡಿ ಯೋಜನೆಗಳು ಲಭ್ಯವಾಗಲಿದೆ. ಇವಿ ಸಬ್ಸಿಡಿ ವಿವರಗಳನ್ನು ತಿಳಿಯೋಣ. ಮಹಾರಾಷ್ಟ್ರದಲ್ಲಿ ಗರಿಷ್ಟ 2 .5 ಲಕ್ಷ ಸಬ್ಸಿಡಿ ಲಭಿಸುತ್ತದೆ. ಸಬ್ಸಿಡಿ ಜೊತೆ 100 ರಷ್ಟು ರಸ್ತೆ ತೆರಿಗೆ ಕಡಿತ ಲಭ್ಯವಿದೆ. ಗುಜರಾತ್ ನಲ್ಲಿ ಗರಿಷ್ಟ 1.5 ಲಕ್ಷ ಸಬ್ಸಿಡಿ ಲಭಿಸುತ್ತದೆ. ಸಬ್ಸಿಡಿ ಜೊತೆ 50 ರಷ್ಟು ರಸ್ತೆ ತೆರಿಗೆ ಕಡಿತ ಲಭ್ಯವಿದೆ.

2.5 lakh discount on electric cars
Image Credit: wikipedia

ಮೇಘಾಲಯದಲ್ಲಿ ಗರಿಷ್ಟ 60 ಸಾವಿರ ಸಬ್ಸಿಡಿ ಲಭಿಸುತ್ತದೆ. ಸಬ್ಸಿಡಿ ಜೊತೆ 100 ರಷ್ಟು ರಸ್ತೆ ತೆರಿಗೆ ಕಡಿತ ಲಭ್ಯವಿದೆ. ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳದಲ್ಲಿ1.5 ಲಕ್ಷ ಸಬ್ಸಿಡಿ ಲಭಿಸುತ್ತದೆ.

Join Nadunudi News WhatsApp Group

ಸಬ್ಸಿಡಿ ಜೊತೆ 100 ರಷ್ಟು ರಸ್ತೆ ತೆರಿಗೆ ಕಡಿತ ಲಭ್ಯವಿದೆ. ಇನ್ನು ಕಾರ್ ಸಬ್ಸಿಡಿ ಕುರಿತಾಗಿ ಕರ್ನಾಟಕ ರಾಜ್ಯದಲ್ಲಿ ಯಾವುದೇ ಸಬ್ಸಿಡಿ ಲಭ್ಯವಿಲ್ಲ. ಕರ್ನಾಟಕ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರ್ ಗಳ ಖರೀದಿಯಲ್ಲಿ ಸಬ್ಸಿಡಿ ಸಿಗುವ ಬಗ್ಗೆ ಮಾಹಿತಿ ಲಭಿಸಿದೆ.

Join Nadunudi News WhatsApp Group