Electric Vehicle: ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ನಾಳೆಯಿಂದ ಹೊಸ ನಿಯಮ, ಕೊಡಬೇಕು ಹೆಚ್ಚು ಹಣ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೊಸ ನಿಯಮವನ್ನ ಜಾರಿಗೆ ತಂದ ಕಾರಣ ಜೂನ್ ಮೊದಲ ವಾರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಅಧಿಕವಾಗಲಿದೆ.

Electric Vehicle Price Hike: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಕಚ್ಚಾ ತೈಲಗಳ ಬೆಲೆಯ ಏರಿಕೆಯ ಕಾರಣ ಜನರು ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿದ್ದಾರೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ದೇಶಿಯ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇನ್ನು ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿದ್ದಂತೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬರುತ್ತಿದೆ.

The price of electric vehicles will increase in the first week of June due to the implementation of new rules on electric vehicles in the country.
Image Credit: yourstory

ಜೂನ್ 1 ರಿಂದ ದುಬಾರಿ ಆಗಲಿದೆ ಎಲೆಕ್ಟ್ರಿಕ್ ಸ್ಕೂಟರ್
ಹೊಸ ಹಣಕಾಸು ವರ್ಷ ಆರಂಭದ ದಿನದಿಂದ ಸಾಕಷ್ಟು ನಿಯಮಗಳು ಬದಲಾಗುತ್ತಿದೆ. ಪ್ರತಿ ತಿಂಗಳು ಮುಗಿಯುತ್ತಿದ್ದಂತೆ ಹೊಸ ಹೊಸ ನಿಯಮಗಳು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಏಪ್ರಿಲ್ ಮತ್ತು ಮೇ ತಿಂಗಳ ಆರಂಭದಿಂದ ಸಾಕಷ್ಟು ನಿಯಮಗಳು ಬದಲಾಗಿವೆ. ಇದೀಗ ಮೇ ತಿಂಗಳು ಮುಗಿದು ಜೂನ್ ಆರಂಭಗೊಳ್ಳಲಿದೆ. ಜೂನ್ ತಿಂಗಳ ಆರಂಭದಲ್ಲಿ ಕೂಡ ಅನೇಕ ನಿಯಮಗಳು ಬದಲಾಗಲಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆ 20 ರಿಂದ 30 ಸಾವಿರ ಹೆಚ್ಚಳ
ಕೇಂದ್ರ ಕೈಗಾರಿಕಾ ಸಚಿವಾಲಯ ಮೇ 21 ರಂದು ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕಡಿತಗೊಳಿಸಲು ಸೂಚನೆ ನೀಡಿದೆ. ಈ ಕಾರಣದಿಂದಾ ಜೂನ್ 1 ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆ ದುಬಾರಿಯಾಗಲಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಸುಮಾರು 20 ರಿಂದ 30 ಸಾವಿರ ರೂ. ಹೆಚ್ಚಳವಾಗಲಿದೆ.

From June 1, the price of electric vehicles will increase in the country.
Image Credit: autocarpro

ಜೂನ್ 1 ರಿಂದ ಬರಲಿದೆ ಹೊಸ ನಿಯಮ
ಇನ್ನು ವಾರಸುದಾರರಿಲ್ಲದ ಠೇವಣಿ ಮೊತ್ತವನ್ನು ಸೂಕ್ತ ವಾರಸುದಾರರಿಗೆ ಪಾವತಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯ ಪ್ರತಿ ಬ್ಯಾಂಕ್ ನಲ್ಲಿ ವಿತ್ ಡ್ರಾ ಮಾಡದೆ ಉಳಿದಿರುವ ಠೇವಣಿಯ ಮೊತ್ತವನ್ನು ಸೂಕ್ತ ವಾರಸುದಾರರನ್ನು ಪತ್ತೆ ಹಚ್ಚಿ ಪಾವತಿಸಲಾಗುತ್ತದೆ.

Join Nadunudi News WhatsApp Group

ಇನ್ನು ಕೆಮ್ಮಿನ ಔಷದಿ ತಯಾರಿಸುವ ಕಂಪನಿಗಳು ಅವುಗಳನ್ನು ರಫ್ತು ಮಾಡುವ ಮುನ್ನ ಪರಿಶೀಲಿಸುವುದು ಕಡ್ಡಾಯ. ಪ್ರತಿ ತಿಂಗಳ ಆರಂಭದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಪರಿಷ್ಕರಣೆ ಆಗುವುದು ಕಡ್ಡಾಯ. ಈ ಎಲ್ಲಾ ನಿಯಮಗಳು ಜೂನ್ 1 ರಿಂದ ಬದಲಾಗಲಿವೆ.

Join Nadunudi News WhatsApp Group