Smart Meter: ಮನೆಯ ಎಲೆಕ್ಟ್ರಿಕ್ ಮೀಟರ್ ನಲ್ಲಿ ಬರುವ ಈ ಕೆಂಪು ಲೈಟ್ ಗೆ ಪ್ರತಿ ತಿಂಗಳು ಎಷ್ಟು ಚಾರ್ಜ್ ಬರುತ್ತದೆ, ಅನಗತ್ಯ ಬಿಲ್.

ಎಲೆಕ್ಟ್ರಿಕ್ ಮೀಟರ್ ನಿಂದ ಬರುವ ಕೆಂಪು ಲೈಟ್ ನಿಂದ ತಿಂಗಳಿನ ವಿದ್ಯುತ್ ಬಿಲ್ ಎಷ್ಟು ಹೆಚ್ಚಾಗುತ್ತದೆ.

Red Light In Electric Smart Meter: ಸಾಮಾನ್ಯವಾಗಿ ಎಲ್ಲರು ಕೂಡ ತಮ್ಮ ತಮ್ಮ ಮನೆಗಳಲ್ಲಿ ವಿದ್ಯುತ್ ಸಂಪರ್ಕವನ್ನು ಹೊಂದಿರುತ್ತಾರೆ. ವಿದ್ಯುತ್ ಸಂಪರ್ಕವನ್ನು ನೀಡುವಾಗ ಮನೆಗಳಲ್ಲಿ ವಿದ್ಯುತ್ ಮೀಟರ್ (Electric Meter) ಅನ್ನು ಅಳವಡಿಸಲಾಗುತ್ತದೆ.

ನಗರ ಪ್ರದೇಶಗಳಲ್ಲಿ ವಿದ್ಯುತ್ ಇಲಾಖೆಯಿಂದ ಸ್ಮಾರ್ಟ್ ಮೀಟರ್‌ಗಳು ಮತ್ತು ಪ್ರಿಪೇಯ್ಡ್ ಮೀಟರ್‌ ಗಳನ್ನೂ ಅಳವಡಿಸಲಾಗಿದೆ. ಇತ್ತೀಚಿಗೆ ವಿದ್ಯುತ್ ಕಳ್ಳತನವನ್ನು ತಡೆಯಲು ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

If the red light is on for 24 hours in the smart meter, the price of electricity will increase.
Image Credit: Bansalnews

ವಿದ್ಯುತ್ ಮೀಟರ್ ನಲ್ಲಿ ಕೆಂಪು ಲೈಟ್
ಮನೆಗಳಲ್ಲಿ ಹೊರಗಡೆ ಮೀಟರ್ ಗಳನ್ನೂ ಅಳವಡಿಸಲಾಗುತ್ತದೆ. ಆ ಮೀಟರ್ ಗಳಲ್ಲಿ ಕೆಂಪು ಬಣ್ಣದ ಲೈಟ್ ಗೋಚರಿಸುತ್ತದೆ. ಹೆಚ್ಚುತ್ತಿರುವ ವಿದ್ಯುತ್ ಕಳ್ಳತನವನ್ನು ತಡೆಯುವ ಉದ್ದೇಶದಿಂದ ವಿದ್ಯುತ್ ಮೀಟರ್ ನಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮೀಟರ್‌ನಲ್ಲಿನ ಕೆಂಪು ದೀಪವು ಆನ್-ಆಫ್ ಆಗಿದ್ದರೆ ಅದು ಬೆಳಕು ಬರುತ್ತಿದೆ, ಅಂದರೆ ನಿಮ್ಮ ಮೀಟರ್ ಆನ್ ಆಗಿದೆ ಎಂಬುದಕ್ಕೆ ಸಾಕ್ಷಿಯಾಗಿರುತ್ತದೆ.

ವಿದ್ಯುತ್ ಮೀಟರ್ ನಲ್ಲಿ ಲೋಡ್ ಹೆಚ್ಚಾಗುತ್ತಿದ್ದಂತೆ ಕೆಂಪು ಲೈಟ್ ಆನ್ ಮತ್ತು ಆಫ್ ಆಗುತ್ತದೆ. ನೀವು ಕಡಿಮೆ ವಿದ್ಯುತ್ ಅನ್ನು ಬಳಸಿದ್ದರೆ ಸ್ವಲ್ಪ ಸಮಯದ ನಂತರ ಈ ಕೆಂಪು ದೀಪವು ಆಫ್ ಆಗುತ್ತದೆ, ಆದರೆ ನೀವು ಮೋಟರ್ ಅಥವಾ ಎಸಿ ಆನ್ ಮಾಡಿದರೆ, ಆಗ ಕೆಂಪು ಲೈಟ್ ನ ಆವರ್ತನವು ಹೆಚ್ಚಾಗುತ್ತದೆ. ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆಯಿಂದಾಗಿ ಈ ಕೆಂಪು ಹೆಚ್ಚು ಸಮಯ ಆನ್ ಆಗಿಯೇ ಇರುತ್ತದೆ. ಸಾಮಾನ್ಯವಾಗಿ ಮೋಟಾರ್ ಬಳಕೆಯ ಸಮಯದಲ್ಲಿ ಹೆಚ್ಚು ವಿದ್ಯುತ್ ಬಳಕೆ ಅಗತ್ಯವಾಗುತ್ತದೆ.

If the red light is on for 24 hours in the smart meter, the price of electricity will increase.
Image Credit: Hplindia

ಮನೆಯ ಎಲೆಕ್ಟ್ರಿಕ್ ಮೀಟರ್ ನಲ್ಲಿ ಬರುವ ಈ ಕೆಂಪು ಲೈಟ್ ಗೆ ಪ್ರತಿ ತಿಂಗಳು ಎಷ್ಟು ಚಾರ್ಜ್ ಬರುತ್ತದೆ
ಮನೆಗಳಲ್ಲಿ ಹೆಚ್ಚಾಗಿ ಮೋಟಾರ್ ಬಳಸುತ್ತಿದ್ದರೆ ಹೆಚ್ಚಿನ ವಿದ್ಯುತ್ ಬಳಕೆಗೆ ಇದು ಕಾರಣವಾಗುತ್ತದೆ. ಇನ್ನು ಸ್ಮಾರ್ಟ್ ಮೀಟರ್ ನಲ್ಲಿ 24 ಗಂಟೆಗಳ ಕಾಲ ಕೆಂಪು ಲೈಟ್ ಆನ್ ಆಗಿದ್ದರೆ ವಿದ್ಯುತ್ ಬೆಲೆ ಅಧಿಕವಾಗುತ್ತದೆ. ಒಂದು ತಿಂಗಳಿನಲ್ಲಿ ಒಂದರಿಂದ ಎರಡು ಯುನಿಟ್ ಗಳಷ್ಟು ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಒಂದರಿಂದ ಎರಡು ಯುನಿಟ್ ಎಂದರೆ ತಿಂಗಳಿಗೆ 10 ರಿಂದ 20 ರೂ. ಹೆಚ್ಚಾಗುತ್ತದೆ. ಪ್ರತಿ ತಿಂಗಳು ಕೂಡ ಬೆಲೆ ಹೆಚ್ಚಾಗುತ್ತಲೇ ಇರುತ್ತದೆ.

Join Nadunudi News WhatsApp Group

Join Nadunudi News WhatsApp Group