Emergency Alert: 6 ತಿಂಗಳಲ್ಲಿ ನಿಷ್ಕ್ರಿಯವಾಗಲಿದೆ ಇಂತಹ ಮೊಬೈಲ್, ಮೋದಿ ಸರ್ಕಾರದ ಘೋಷಣೆ.

ಮೊಬೈಲ್ ಫೋನ್ ನಲ್ಲಿ ಎಮರ್ಜೆನ್ಸಿ ಅಲರ್ಟ್ ಫೀಚರ್ ಇಲ್ಲದೆ ಇದ್ದರೆ ಅಂತಹ ಮೊಬೈಲ್ ಗಳನ್ನ ಆರು ತಿಂಗಳಲ್ಲಿ ನಿಷ್ಕ್ರಿಯ ಮಾಡಲಾಗುತ್ತದೆ.

Emergency Alert Feature In Smartphone: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ (Smart Phone) ಗಳ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

ಇನ್ನು ಇದೀಗ ಮೊಬೈಲ್ ಮಾರಾಟ ಮಾಡುವವರಿಗೆ ನರೇಂದ್ರ ಮೋದಿ (Narendra Modi) ಸರ್ಕಾರ ಹೊಸ ನಿಯಮವನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರದ (Central Government) ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

The central government has issued an order that such mobile phones will be deactivated within six months.
Image Credit: theprint

ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ
ಮೊಬೈಲ್ ಫೋನ್ ಗೆ ಸಂಬಂಧಿಸಿದಂತೆ ಕೇಂದ್ರದ ಮೋದಿ ಸರ್ಕಾರ ಇದೀಗ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಈ ಹೊಸ ನಿಯಮದ ಅಡಿಯಲ್ಲಿ ನಿಮ್ಮ ಮೊಬೈಲ್ ಫೋನ್ 6 ತಿಂಗಳಲ್ಲಿ ನಿಷ್ಕ್ರಿಗೊಳ್ಳಬಹುದು. ಸ್ಮಾರ್ಟ್ ಫೋನ್ ತಯಾರಿಸುವಲ್ಲಿ ಹೊಸ ಫೀಚರ್ ಹಾಕುವುದು ಅಗತ್ಯವಾಗಿದೆ.

ಎಮರ್ಜೆನ್ಸಿ ಅಲರ್ಟ್ ಫೀಚರ್
ಮೊಬೈಲ್ ತಯಾರಿಸುವ ಕಂಪನಿಗಳು ಮೊಬೈಲ್ ತಯಾರಿಸುವಾಗ ತುರ್ತು ಎಚ್ಚರಿಕೆ ವೈಶಿಷ್ಟ್ಯವನ್ನು (ಎಮರ್ಜೆನ್ಸಿ ಅಲರ್ಟ್ ಫೀಚರ್) ಅಳವಡಿಸುವುದನ್ನು ಕಡ್ಡಾಯಗಳಿಸಿದೆ.

If a mobile phone does not have an emergency alert feature, such mobiles will be deactivated in six months.
Image Credit: istockphoto

ಸ್ಮಾರ್ಟ್ ಫೋನ್ ತಯಾರಿಸುವ ಕಂಪನಿಗಳಿಗೆ ಸರ್ಕಾರ ಈ ಹೊಸ ನಿಯಮ ಅನ್ವಯವಾಗಲಿದೆ. ಇದಕ್ಕಾಗಿ ಸರ್ಕಾರ ಮೊಬೈಲ್ ಕಂಪನಿಗಳಿಗೆ 6 ತಿಂಗಳ ಕಾಲ ಸಮಯಾವಕಾಶವನ್ನು ನೀಡಿದೆ. ಈ ನಿಯಮ ಉಲ್ಲಂಘನೆ ಮಾಡಿದರೆ ಮೊಬೈಲ್ ಫೋನ್ ಗಳು ನಿಷ್ಪ್ರಯೋಜಕವಾಗುತ್ತದೆ.

Join Nadunudi News WhatsApp Group

ಸರ್ಕಾರದ ಆದೇಶ
ಎಮರ್ಜೆನ್ಸಿ ಅಲರ್ಟ್ ಫೀಚರ್ ಅನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನೂ ಮಾತ್ರ ಮಾರಾಟ ಮಾಡುವಂತೆ ಎಲ್ಲ ಮೊಬೈಲ್ ತಯಾರಕ ಕಂಪನಿಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಎಮರ್ಜೆನ್ಸಿ ಅಲರ್ಟ್ ಫೀಚರ್ ಅನ್ನು ಮೊಬೈಲ್ ನಲ್ಲಿ ಅಳವಡಿಸುದರಿಂದ ಪಕೃತಿ ವಿಕೋಪಗಳ ಮುನ್ಸೂಚನೆಯನ್ನು ಪಡೆಯಬಹುದಾಗಿದೆ. ಭೂಕಂಪ, ಸುನಾಮಿ, ಚಂಡಮಾರುತ ಸೇರಿದಂತೆ ಇತರ ಪ್ರಕ್ರತಿ ವಿಕೋಪಗಳ ಬಗ್ಗೆ ಈ ಹೊಸ ಫೀಚರ್ ಎಚ್ಚರಿಕೆ ನೀಡುತ್ತದೆ.

Join Nadunudi News WhatsApp Group