Amazon Offer: ಕೇವಲ 75 ಸಾವಿರಕ್ಕೆ ಖರೀದಿಸಿ ಈ ಎಲೆಕ್ಟ್ರಿಕ್ ಸ್ಕೂಟರ್, ಒಮ್ಮೆ ಚಾರ್ಜ್ ಮಾಡಿದ್ರೆ 100 Km ಮೈಲೇಜ್.

ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಇದಾಗಿದ್ದು ಮಧ್ಯಮ ವರ್ಗದವರು ಈ ಬೈಕ್ ಬಜೆಟ್ ಬೆಲೆಯಲ್ಲಿ ಖರೀದಿಸಬಹುದು.

EOX Electric Scooter Amazon Offer: ಮಾರುಕಟ್ಟೆಯಲ್ಲಿ ಹೆಚ್ಚಿನ ಕಂಪನಿಗಳು ಇತ್ತೀಚಿಗೆ ಎಲೆಕ್ಟ್ರಿಕ್ ಮಾದರಿಯನ್ನು ಪರಿಚ್ಯಿಸುತ್ತಿವೆ. ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ದೇಶದ ಜನಪ್ರಿಯ ಕಂಪನಿಗಳ ಜೊತೆ ಕೆಲ ಸ್ಟಾರ್ಟ್ ಅಪ್ ಕಂಪನಿಗಳು ಸಹ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಅನ್ನು ಪರಿಚಯಿಸುತ್ತವೆ.

ಇನ್ನು ಎಲೆಕ್ಟ್ರಿಕ್ ಮಾದರಿಗಳಿಗೆ ಬೇಡಿಕೆ ಹೆಚ್ಚುವ ಹಿನ್ನಲೆ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಸ್ವಲ್ಪ ಮಟ್ಟಿಗೆ ಹೆಚ್ಚಿನ ಬೆಲೆಯನ್ನು ಹೊಂದಿದೆ. ದುಬಾರಿ ಬೆಲೆಯ ಎಲೆಕ್ಟ್ರಿಕ್ ವಾಹನಗಳ ಖರೀದಿ ಮಧ್ಯಮ ವರ್ಗದ ಜನರಿಗೆ ಕಷ್ಟವಾಗುತ್ತದೆ.

ಈ ಕಾರಣಕ್ಕಾಗಿ ಜನರ ಅನುಕೂಲಕ್ಕಾಗಿ ವಿವಿಧ ಕಂಪನಿಗಳು ಹಣಕಾಸು ಯೋಜನೆಯನ್ನು ಸಹ ನೀಡುತ್ತದೆ. ಇನ್ನು ಆನ್ಲೈನ್ ವೆಬ್ ಸೈಟ್ ಗಳು ಕೂಡ ಹಳೆಯ ಮಾದರಿಯ ಸ್ಕೂಟರ್ ಗಳನ್ನೂ ಗ್ರಾಹಕರ ಬಜೆಟ್ ಬೆಲೆಯಲ್ಲಿ ಪರಿಚಯಿಸುತ್ತದೆ.

EOX Electric Scooter Specialization
Image Credit: Autocarindia

Amazon ಎಲೆಕ್ಟ್ರಿಕ್ ಸ್ಕೂಟರ್ ಆಫರ್
ಇದೀಗ ದೇಶದ ಜನಪ್ರಿಯ ಇ – ಕಾಮರ್ಸ್ ವೆಬ್ ಸೈಟ್ ಆಗಿರುವ Amazon ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. EOX ಎಲೆಕ್ಟ್ರಿಕ್ ಸ್ಕೂಟರ್ (EOX Electric Scooter) ಮೇಲೆ ಅಮೆಜಾನ್ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ EOX ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮಾರುಕಟ್ಟೆಯಲ್ಲಿ 1,30,000 ರೂ. ಆಗಿದೆ. ಆದರೆ ಅಮೆಜಾನ್ ನ ಕೊಡುಗೆಯ ಮೂಲಕ ಅದನ್ನು ಕೇವಲ 79,999 ರೂ. ಗೆ ಖರೀದಿಸಬಹುದಾಗಿದೆ. EOX ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ ಗ್ರಾಹಕರಿಗೆ ಶೇ. 38 ರಷ್ಟು ರಿಯಾಯಿತಿ ಲಭ್ಯವಿದೆ.

ಕೇವಲ 3841 ರೂ. ಮನೆಗೆ ತನ್ನಿ ಈ ಸ್ಕೂಟರ್
ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ ಬ್ಯಾಂಕ್ ಆಫರ್ ಕೂಡ ಲಭ್ಯವಿದು ಕ್ರೆಡಿಟ್ ಕಾರ್ಡ್ ಬಳಕೆದಾರರು ಆಫರ್ ಅನ್ನು ಬಳಸಿಕೊಳ್ಳಬಹುದು. HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 4500 ರೂ. ಗಳ ರಿಯಯಾಯಿತಿಯನ್ನು ಪಡೆಯಬಹುದು. ಈ ಮೂಲಕ 79,999 ರೂ ಬೆಲೆಯ ಸ್ಕೂಟರ್ ಅನ್ನು ಜೆಕೆವಲ 75,499 ರೂ. ಗೆ ಖರೀದಿಸಬಹುದು. ಇನ್ನು EOX ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ EMI ಆಯ್ಕೆ ಕೂಡ ಲಭ್ಯವಿದೆ. EMI ಆಯ್ಕೆಯ ಮೂಲಕ ನೀವು ಮಾಸಿಕ 3,841 ರೂ. ಪಾವತಿಸುವ ಮೂಲಕ 24 ತಿಂಗಳಲ್ಲಿ EMI ಪೂರ್ಣಗೊಳಿಸಬಹುದು.

Join Nadunudi News WhatsApp Group

Amazon Electric Scooter Offer
Image Credit: Zigwheels

EOX ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ
EOX ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೂತನ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.ಈ ಎಲೆಕ್ಟ್ರಿಕ್ ಸ್ಕೂಟರ್ 250 ವ್ಯಾಟ್ BLDC ಹಬ್ ಮೋಟಾರ್ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 80 ರಿಂದ 100 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಇದಾಗಿದ್ದು ಮಧ್ಯಮ ವರ್ಗದವರು ಈ ಬೈಕ್ ಬಜೆಟ್ ಬೆಲೆಯಲ್ಲಿ ಖರೀದಿಸಬಹುದು. ಇನ್ನು ಈ ಸ್ಕೂಟರ್ ನ ಗರಿಷ್ಟ ವೇಗ 25 ಕಿಲೋಮೀಟರ್ ಆಗಿದೆ.

Join Nadunudi News WhatsApp Group