ATM Money: ATM ನಲ್ಲಿ ನಕಲಿ ಅಥವಾ ಹರಿದ ನೋಟ್ ಬಂದರೆ ಚಿಂತಿಸುವ ಅಗತ್ಯ ಇಲ್ಲ, ಈ ರೀತಿ ಬದಲಾಯಿಸಿಕೊಳ್ಳಿ

ಏಟಿಎಂ ನಲ್ಲಿ ಹರಿದ ಅಥವಾ ನಕಲಿ ನೋಟ್ ಸಿಕ್ಕರೆ ಭಯಪಡುವ ಅಗತ್ಯ ಇಲ್ಲ, ಈ ರೀತಿ ಬದಲಾಯಿಸಿಕೊಳ್ಳಿ

Fake And Damage Notes In ATM: ದೇಶದಲ್ಲಿ ಇತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಆನ್ಲೈನ್ ವಹಿವಾಟುಗಳು ನಡೆಯುವುದನ್ನು ಕಾಣಬಹುದು, ನಗದು ಹಣ ಬಳಸುವುದು ಬಹಳ ಕಡಿಮೆ ಆಗಿ ಹೋಗಿದೆ. ಚಿಕ್ಕ ವ್ಯವಹಾರ ಆಗಲಿ, ದೊಡ್ಡ ವ್ಯವಹಾರ ಆಗಲಿ ಪ್ರತಿಯೊಬ್ಬರು UPI ಪೇಮೆಂಟ್ ಗೆ ಅವಲಂಬಿತರಾಗಿದ್ದಾರೆ.

ಹಾಗೆಯೆ ಕೆಲವು ಸಂದರ್ಭದಲ್ಲಿ ನಗದು ಹಣದ ಅವಶ್ಯಕತೆ ಇದ್ದಾಗ ನಾವು ಏಟಿಎಂ ಮೂಲಕ ಹಣ ಡ್ರಾ ಮಾಡಿಕೊಳ್ಳುತ್ತೇವೆ. ನಾವು ಏಟಿಎಂ ನಿಂದ ಹಣ ಡ್ರಾ ಮಾಡಿದಾಗ ನಕಲಿ ನೋಟು ಅಥವಾ ಹರಿದ ನೋಟು ಬಂದರೆ ಏನು ಮಾಡಬೇಕು ಎಂದು ತಿಳಿದುಕೊಳ್ಳಿ.

Fake And Damage Notes
Image Credit: Siasat

ಎಟಿಎಂನಲ್ಲಿ ನಕಲಿ ಅಥವಾ ಹರಿದ ನೋಟು ಬರುವ ಸಂಭವ ಇರುತ್ತದೆ

ಆನ್ಲೈನ್ ಪೇಮೆಂಟ್ ಚಾಲತಿಯಲ್ಲಿದ್ದರು ಕೂಡ ನಾವು ಒಮ್ಮೆಮ್ಮೆ ಏಟಿಎಂ ನಿಂದ ಹಣ ಪಡೆಯುತ್ತೇವೆ ಹಾಗೆಯೆ ದೇಶದಲ್ಲಿ 30 ಲಕ್ಷ ಕೋಟಿ ರೂ.ಗಳ ವಹಿವಾಟು ನಗದು ಅಥವಾ ಕರೆನ್ಸಿ ರೂಪದಲ್ಲಿ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಎಟಿಎಂ ನಿಂದ ನಕಲಿ ನೋಟುಗಳು ಬಂದಿರುವ ಹಲವು ನಿದರ್ಶನಗಳನ್ನು ನಾವು ಕೇಳಿದ್ದೇವೆ. ಇಂತಹ ಸಮಯದಲ್ಲಿ ಏನು ಮಾಡಬೇಕು ಅನ್ನುವುದು ತಿಳಿಯುವುದು ಬಹಳ ಮುಖ್ಯ ಆಗಿದೆ.

ನಕಲಿ ನೋಟನ್ನು ಬದಲಾಯಿಸಿಕೊಳ್ಳಿ

Join Nadunudi News WhatsApp Group

ನೀವು ಎಟಿಎಂ ನಿಂದ ಹಣವನ್ನು ಹಿಂಪಡೆಯುತ್ತಿದ್ದರೆ, ಈ ನೋಟು ನೈಜವಲ್ಲ ಎಂದು ನಿಮಗೆ ಸ್ವಲ್ಪವಾದರೂ ಅನಿಸಿದರೆ, ಮೊದಲು ಅದರ ಫೋಟೋ ತೆಗೆದುಕೊಳ್ಳಿ. ನಂತರ ಎಟಿಎಂ ನಲ್ಲಿ ಫಿಕ್ಸ್ ಮಾಡಲಾದ ಸಿಸಿಟಿವಿ ಕ್ಯಾಮೆರಾದ ಮುಂದೆ ನೋಟನ್ನು ತಲೆಕೆಳಗಾಗಿ ತೋರಿಸಬೇಕು. ನೋಟು ಎಟಿಎಂ ನಿಂದಲೇ ಹೊರಬಂದಿದೆ ಎಂದು ಕ್ಯಾಮೆರಾ ದಾಖಲಿಸುತ್ತದೆ. ನಂತರ ನಿಮ್ಮ ಎಟಿಎಂ ವಹಿವಾಟಿನ ರಸೀದಿಯನ್ನು ತೆಗೆದುಕೊಳ್ಳಿ. ಅದರ ಫೋಟೋ ತೆಗೆದುಕೊಂಡು ಅದನ್ನು ಸೇವ್ ಮಾಡಿಕೊಳ್ಳಿ.

Fake And Damage Notes In ATM
Image Credit: Thehansindia

ನಂತರ ಎಟಿಎಂ ನಿಂದ ನೋಟು ಮತ್ತು ರಸೀದಿಯೊಂದಿಗೆ ಬ್ಯಾಂಕಿಗೆ ಹೋಗಿ. ಈ ವಿಷಯದ ಬಗ್ಗೆ ಬ್ಯಾಂಕ್ ಉದ್ಯೋಗಿಗೆ ತಿಳಿಸಿ. ನಂತರ ನಿಮಗೆ ಒಂದು ಫಾರ್ಮ್ ಅನ್ನು ಒದಗಿಸಲಾಗುತ್ತದೆ. ಅದನ್ನು ಭರ್ತಿ ಮಾಡಿದ ನಂತರ, ನಕಲಿ ನೋಟಿನ ಜೊತೆಗೆ ರಸೀದಿಯನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ. ನಂತರ ಬ್ಯಾಂಕ್ ಈ ನಕಲಿ ನೋಟನ್ನು ಪರಿಶೀಲಿಸಿ ಮತ್ತು ನಂತರ ನಿಮಗೆ ಒರಿಜಿನಲ್ ನೋಟನ್ನು ನೀಡುತ್ತದೆ.

Join Nadunudi News WhatsApp Group