Flight Ticket Booking: ವಾಟ್ಸಾಪ್ ನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿ, ಹೊಸ ಸೇವೆ ಆರಂಭ.

ಈ ರೀತಿಯಾಗಿ ವಾಟ್ಸಾಪ್ ನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿ

Flight Ticket Booking By Using WhatsApp: WhatsApp ಬಗ್ಗೆ ಯಾರಿಗೆ ತಾನೇ ತಿಳಿದಿರುವುದಿಲ್ಲ. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ WhatsApp ಬಳಸೆ ಬಳಸುತ್ತಾರೆ. ವಿಶ್ವದಲ್ಲೇ ವಾಟ್ಸಾಪ್ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿ ಕಾರ್ಯನಿರ್ವಹಿಸುತ್ತದೆ. ವಾಟ್ಸಾಪ್ ಅನ್ನು ದಿನನಿತ್ಯ ಬಳಸಿದರು ಕೂಡ ವಾಟ್ಸಾಪ್ ಬಗ್ಗೆ ಸಾಕಷ್ಟು ಮಾಹತಿ ತಿಳಿದಿರುವುದಿಲ್ಲ.

ವಾಟ್ಸಾಪ್ ಅನ್ನು ಕೇವಲ ಚಾಟಿಂಗ್, ವಿಡಿಯೋ ಶೇರ್, ಕಾಲ್ ಗಾಗಿ ಮಾತ್ರ ಬಳಸುತ್ತಾರೆ. ಆದರೆ ನಿಮಗೆ ತಿಳಿದಿದೆಯೇ..? ವಾಟ್ಸಾಪ್ ನ ಮೂಲಕ ಚಾಟಿಂಗ್ ಜೊತೆಗೆ ಕೆಲವು ಕೆಲಸಗಳನ್ನು ಕೂಡ ಮಾಡಬಹುದು. ಹೌದು, ನೀವು ಸ್ವಲ್ಪವೂ ಕಷ್ಟಪಡದೆ ವಾಟ್ಸಾಪ್ ಮೂಲಕ ವಿಮಾನ ಪ್ರಯಾಣಕ್ಕೆ ಟಿಕೆಟ್ ಅನ್ನು ಬುಕ್ ಮಾಡಬಹುದು. ಅದು ಹೇಗೆ..? ಎಂದು ಯೋಚಿಸುತ್ತಿದ್ದೀರಾ. ಅದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Flight Ticket Booking By Using Smartphone
Image Credit: Informalnewz

ವಾಟ್ಸಾಪ್ ನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿ
ಭಾರತದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ಸುಲಭವಾದ ಮಾರ್ಗವನ್ನು ಪರಿಚಯಿಸಿದೆ. ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಹಂತಗಳನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ. ಈ ಸೇವೆಯು ತಮಿಳು, ಹಿಂದಿ ಮತ್ತು ಇಂಗ್ಲಿಷ್‌ ನಲ್ಲಿಯೂ ಲಭ್ಯವಿದೆ.

IndiGo ವಿಮಾನ ಪ್ರಯಾಣಕ್ಕೆ ಟಿಕೆಟ್ ಗಳನ್ನೂ WhatsApp ಮೂಲಕ ಬುಕ್ ಮಾಡಬಹುದು ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಈ ವೈಶಿಷ್ಟ್ಯವನ್ನು ಪೋರ್ಟಬಲ್ ಡಿಜಿಟಲ್ ಟ್ರಾವೆಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲು Google ReaFi ತಂತ್ರಜ್ಞಾನದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ವೈಶಿಷ್ಟ್ಯವು ವಿಮಾನ ಟಿಕೆಟ್‌ ಗಳನ್ನು ಕಾಯ್ದಿರಿಸುವುದು, ಚೆಕ್-ಇನ್‌ ಗೆ ಸಹಾಯ ಮಾಡುವುದು, ಬೋರ್ಡಿಂಗ್ ಪಾಸ್‌ ಗಳಲ್ಲಿನ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಪ್ರಯಾಣ ಅಥವಾ ವಿಮಾನಗಳ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದು ಸೇರಿದಂತೆ ಹಲವಾರು ಸೇವೆಗಳನ್ನು ನೀಡುತ್ತದೆ ಎಂದು IndiGo ಹೇಳಿಕೊಂಡಿದೆ.

Flight Ticket Booking By Using WhatsApp
Image Credit: Zee News

WhatsApp ಮೂಲಕ ವಿಮಾನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವುದು ಹೇಗೆ…?
•WhatsApp ಮೂಲಕ ವಿಮಾನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಲು ಮೊದಲು ಗ್ರಾಹಕರು 91 7065145858 ಗೆ “ಹಾಯ್” ಎಂಬ WhatsApp ಸಂದೇಶವನ್ನು ಕಳುಹಿಸಬೇಕು.

Join Nadunudi News WhatsApp Group

•ಇದಕ್ಕೆ ಪ್ರತಿಕ್ರಿಯೆಯಾಗಿ ನೀವು ಕೆಲವು ಆಯ್ಕೆಗಳನ್ನು ನೋಡುತ್ತೀರಿ.

•ವಿಮಾನ ಟಿಕೆಟ್ ಬುಕಿಂಗ್, ವೆಬ್ ಚೆಕ್-ಇನ್, ಬೋರ್ಡಿಂಗ್ ಪಾಸ್‌ಗಳು, ಫ್ಲೈಟ್ ಸ್ಥಿತಿ ಸೇರಿದಂತೆ ವಿವಿಧ ಆಯ್ಕೆಗಳನ್ನು ತೋರಿಸುತ್ತದೆ.

•ಈಗ ‘ಬುಕ್ ಫ್ಲೈಟ್ ಟಿಕೆಟ್’ ಆಯ್ಕೆಯನ್ನು ಆರಿಸಿ ಮತ್ತು ಉತ್ತರಿಸಿ.

•ನಿರ್ಗಮನ ಸ್ಥಳ, ಆಗಮನದ ಸ್ಥಳ, ದಿನಾಂಕ, ಸಮಯವನ್ನು ಆಯ್ಕೆಮಾಡಿ

•ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ, ವಿಮಾನಗಳು ಕಾಣಿಸಿಕೊಳ್ಳುತ್ತವೆ. .

•ನಿಮ್ಮ ಆದ್ಯತೆಯ ವಿಮಾನವನ್ನು ಆಯ್ಕೆಮಾಡಿ ಮತ್ತು ಮುಂದುವರಿಯಿರಿ.

•ಆನ್‌ಲೈನ್ ಪಾವತಿಯನ್ನು ಪೂರ್ಣಗೊಳಿಸಿದ ನಂತರ ಟಿಕೆಟ್ ಲಭ್ಯವಿರುತ್ತದೆ

Flight Ticket Booking
Image Credit: Raftaar

Join Nadunudi News WhatsApp Group