Flipkart Sale Back Program: ಫ್ಲಿಪ್ಕಾರ್ಟ್ ನಲ್ಲಿ ಹಳೆಯ ಮೊಬೈಲ್ ಮಾರಾಟ ಮಾಡಬಹುದು, ಫ್ಲಿಪ್ಕಾರ್ಟ್ ಜಾರಿಗೆ ತಂದಿದೆ ಹೊಸ ಯೋಜನೆ.

Flipkart Sale Back Program: ಜನರು ಆನ್ಲೈನ್ (Online) ಹೆಚ್ಚಿನ ವ್ಯವಹಾರಗಳನ್ನ ಮಾಡುತ್ತಾರೆ. ಹೌದು ಆನ್ಲೈನ್ ನಲ್ಲಿ ಕೆಲವು ವಸ್ತುಗಳು ಬಹಳ ಕಡಿಮೆ ಬೆಲೆಗೆ ಸಿಗುವ ಕಾರಣ ಹೆಚ್ಚಿನ ಜನರು ಆನ್ಲೈನ್ ನಲ್ಲಿ ಹಲವು ವಸ್ತುಗಳನ್ನ ಖರೀದಿ ಮಾಡುತ್ತಾರೆ. ಅವಶ್ಯಕ ವಸ್ತುಗಳನ್ನ ಖರೀದಿ ಮಾಡಲು ಜನರು ಹೆಚ್ಚಾಗಿ ಬಳಸುವ ಅಪ್ಲಿಕೇಶನ್ ಗಳಲ್ಲಿ ಫ್ಲಿಪ್ಕಾರ್ಟ್ (Flipkart) ಕೂಡ ಒಂದಾಗಿದೆ.

ಹೌದು ಅಗತ್ಯ ವಸ್ತುಗಳು ಫ್ಲಿಪ್ಕಾರ್ಟ್ ನಲ್ಲಿ ಕಡಿಮೆ ಬೆಲೆಗೆ ಸಿಗುವ ಕಾರಣ ಹೆಚ್ಚಿನ ಫ್ಲಿಪ್ಕಾರ್ಟ್ ಮೂಲಕ ಹಲವು ವಸ್ತುಗಳನ್ನ ಖರೀದಿ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೇಗೆ ಫ್ಲಿಪ್ಕಾರ್ಟ್ ನಲ್ಲಿ ವಸ್ತುಗಳನ್ನ ಖರೀದಿ ಮಾಡಬಹುದೋ ಅದೇ ರೀತಿಯಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಸೆಕೆಂಡ್ ಹ್ಯಾಂಡ್ (Second Hand) ನಮ್ಮ ಕೆಲವು ವಸ್ತುಗಳನ್ನ ಮಾರಾಟ ಮಾಡಬಹುದಾಗಿದೆ.

Mobile can be sold on Flipkart
Image Credit: economictimes.indiatimes

ಫ್ಲಿಪ್ಕಾರ್ಟ್ ದೇಶದ ಅತೀ ದೊಡ್ಡ ಮಾರಾಟ ಮಳಿಗೆ
ಹೌದು ಫ್ಲಿಪ್ಕಾರ್ಟ್ ಅನ್ನುವುದು ದೇಶದಲ್ಲಿ ಅತೀ ದೊಡ್ಡ ಮಾರಾಟ ಮಳಿಗೆಗಳಲ್ಲಿ ಒಂದು ಉತ್ತಮವಾದ ಸ್ಥಾನವನ್ನ ಗಿಟ್ಟಿಸಿಕೊಂಡಿದೆ. ಜನರ ಹಲವು ಅಗತ್ಯ ವಸ್ತುಗಳು ಫ್ಲಿಪ್ಕಾರ್ಟ್ ನಲ್ಲಿ ದೊರಕುತ್ತದೆ ಮತ್ತು ಗ್ರಾಹಕರಿಗೆ ಬಹಳ ಒಳ್ಳೆಯ ಸೇವೆಯನ್ನ ಒದಗಿಸುವ ಕಾರಣ ಫ್ಲಿಪ್ಕಾರ್ಟ್ ದೇಶದಲ್ಲಿ ಕೋಟ್ಯಾಂತರ ಸಂಖ್ಯೆ ಗ್ರಾಹಕರನ್ನ ಪಡೆದುಕೊಂಡಿದೆ.

ಫ್ಲಿಪ್ಕಾರ್ಟ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಹಲವು ವಸ್ತುಗಳು
ಮಾರಾಟ ಮಳಿಗೆಗಳಿಗೆ ಹೋಲಿಕೆ ಮಾಡಿದರೆ ಫ್ಲಿಪ್ಕಾರ್ಟ್ ನಲ್ಲಿ ಕೆಲವು ಇಲೆಕ್ಟ್ರಾನಿಕ್ ವಸ್ತುಗಳು ಮತ್ತು ಹಲವು ಮನೆ ಬಳಕೆಯ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತದೆ ಮತ್ತು ಹಬ್ಬದ ಸಮಯದಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಹಲವು ಆಫರ್ ಘೋಷಣೆ ಕೂಡ ಮಾಡಲಾಗುತ್ತದೆ. ಸದ್ಯ ಫ್ಲಿಪ್ಕಾರ್ಟ್ ನಲ್ಲಿ ದೀಪಾವಳಿ ಆಫರ್ ಘೋಷಣೆ ಆಗಿದ್ದು ಜನರು ಕೆಲವು ವಸ್ತುಗಳ ಭರ್ಜರಿ ಆಫರ್ ಮೂಲಕ ಖರೀದಿ ಮಾಡಬಹುದಾಗಿದೆ.

Smartphone can be sold on Flipkart through sell back
Image Credit: businessinsider

ಫ್ಲಿಪ್ಕಾರ್ಟ್ ನಲ್ಲಿ ಸೇಲ್ ಮಾಡಬಹುದು ನಮ್ಮ ಸ್ಮಾರ್ಟ್ ಫೋನ್
ಹೌದು ಹೇಗೆ ಫ್ಲಿಪ್ಕಾರ್ಟ್ ನಲ್ಲಿ ನಾವು ಹೊಸ ಸ್ಮಾರ್ಟ್ ಫೋನ್ (Smartphone) ಖರೀದಿ ಮಾಡುತ್ತೇವೋ ಅದೇ ರೀತಿಯಲ್ಲಿ ಫ್ಲಿಪ್ಕಾರ್ಟ್ ನಲ್ಲಿ ನಮ್ಮ ಸ್ಮಾರ್ಟ್ ಫೋನ್ ಗಳನ್ನ ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಸೇಲ್ ಮಾಡಬಹುದಾಗಿದೆ.

Join Nadunudi News WhatsApp Group

ಫ್ಲಿಪ್ಕಾರ್ಟ್ ನಲ್ಲಿ ಇದೆ ಸೇಲ್ ಬ್ಯಾಕ್ ಪ್ರೋಗ್ರಾಮ್
ಇತ್ತೀಚಿಗೆ ಫ್ಲಿಪ್ಕಾರ್ಟ್ ಸೇಲ್ ಬ್ಯಾಕ್ ಪ್ರೋಗ್ರಾಮ್ ಸ್ಟಾರ್ಟ್ ಮಾಡಿದ್ದು ಇದರ ಅಡಿಯಲ್ಲಿ ಜನರು ತಮ್ಮ ಸ್ಮಾರ್ಟ್ ಫೋನ್ ಅನ್ನು ಮಾರಾಟ ಮಾಡದಬಹುದು ಮತ್ತು ಇದರ ಅಡಿಯಲ್ಲಿ ಫ್ಲಿಪ್ಕಾರ್ಟ್ ಗ್ರಾಹಕರ ಸೆಕೆಂಡ್ ಫೋನ್ ಅನ್ನು ಉತ್ತಮ ಬೆಲೆಗೆ ಖರೀದಿ ಮಾಡುತ್ತದೆ ಮತ್ತು ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ.

Second hand mobiles can be sold at a good price on Flipkart
Image Credit: businessinsider

ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಸೇಲ್ ಮಾಡುವುದು ಹೇಗೆ
ಫ್ಲಿಪ್ಕಾರ್ಟ್ ಅಪ್ಲಿಕೇಶನ್ ನ ಕೆಟಗೆರಿ ಸೆಕ್ಷನ್ ನಲ್ಲಿ ಸೇಲ್ ಬ್ಯಾಕ್ ಒಪ್ಶನ್ ಇದ್ದು ಅಲ್ಲಿ ನೀವು ಸೇಲ್ ಮಾಡುವ ಮೊಬೈಲ್ ಬ್ರಾಂಡ್, ಮಾಡೆಲ್ ಮತ್ತು EMI ಸಂಖ್ಯೆಯನ್ನ ನಮೂದಿಸಬೇಕು. ಇದನ್ನ ನಮೂದಿಸಿದ ನಂತರ ಫ್ಲಿಪ್ಕಾರ್ಟ್ ನಿಮ್ಮ ಮೊಬೈಲ್ ಗೆ ಒಂದು ಬೆಲೆಯನ್ನ ನಿಗದಿ ಮಾಡುತ್ತದೆ ಮತ್ತು ಫ್ಲಿಪ್ಕಾರ್ಟ್ ನಿಗದಿ ಮಾಡಿದ ಬೆಲೆ ನಿಮಗೆ ಇಷ್ಟವಾದರೆ ನೀವು ಮೊಬೈಲ್ ಮಾರಾಟ ಮಾಡಬಹುದು.

ಮನೆಗೆ ಬಂದು ಮೊಬೈಲ್ ಪಿಕ್ ಅಪ್ ಮಾಡಲಾಗುತ್ತದೆ
ನೀವು ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಅನ್ನು ಮಾರಾಟ ಮಾಡಿದರೆ ಫ್ಲಿಪ್ಕಾರ್ಟ್ ಸಿಬ್ಬಂಧಿ ನಿಮ್ಮ ಮನೆಗೆ ಬಂದು ನೀವು ಮಾರಾಟ ಮಾಡುತ್ತಿರುವ ಮೊಬೈಲ್ ಪಡೆದುಕೊಂಡು ಅದನ್ನ ಪರಿಶೀಲನೆ ಮಾಡಿಕೊಂಡು ಹೋಗುತ್ತದೆ ಮತ್ತು ಅವರು ಮೊಬೈಲ್ ಪಿಕ್ ಅಪ್ ಮಾಡಿದ ನಂತರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಸೇಲ್ ಮಾಡುವ ಈ ಕೆಲಸ ಮಾಡುವುದು ಮರೆಯದಿರಿ
ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಸೇಲ್ ಮಾಡುವ ನಿಮ್ಮ ಆ ಮೊಬೈಲ್ ನಲ್ಲಿ ಇರುವ ಎಲ್ಲಾ ಡೇಟಾ ಕ್ಲಿಯರ್ ಮಾಡುವುದು ಉತ್ತಮ. ನಿಮ್ಮ ಖಾತೆಯ ಪಾಸ್ ವರ್ಡ್ ಮತ್ತು ಮಾಹಿತಿ, ಫೇಸ್ಬುಕ್ ಲಾಗ್ಔಟ್ ಮತ್ತು ಇತರೆ ಯಾವ ಯಾವ ಅಪ್ಲಿಕೇಶನ್ ಬಳಸುತ್ತಿದ್ದೀರೋ ಅವೆಲ್ಲವನ್ನ ಲಾಗ್ಔಟ್ ಮಾಡಿ ನಂತರ ಆ ಅಪ್ಲಿಕೇಶನ್ ಗಳನ್ನ ಡಿಲೀಟ್ ಮಾಡಿ ಮಾರಾಟ ಮಾಡಿ.

Join Nadunudi News WhatsApp Group