IPOS Machine: ರೇಷನ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಹೊಸ ತಂತ್ರಜ್ಞಾನ ಅಳವಡಿಕೆ.

ಡಿಸೆಂಬರ್ ಅಂತ್ಯದ ತನಕ BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇರುವವರಿಗೆ ಉಚಿತ ರೇಷನ್ ವಿತರಣೆ ಮಾಡಲು ನಿರ್ಧಾರವನ್ನ ಮಾಡಲಾಗಿದೆ.

IPOS Machine In Ration Shop: ದೇಶದಲ್ಲಿ ಕೋಟ್ಯಾಂತರ ಜನರು ಪಡಿತರ ಚೀಟಿಯನ್ನ (Ration Card) ಹೊಂದಿದ್ದಾರೆ. ಹೌದು ದೇಶದಲ್ಲಿ ಕೋಟ್ಯಾಂತರ ಜನರು BPL ಪಡಿತರ ಚೀಟಿಯನ್ನ ಹೊಂದಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಉಚಿತ ಧಾನ್ಯಗಳನ್ನ ಪಡೆದುಕೊಳ್ಳುತ್ತಿದ್ದಾರೆ.

ಸದ್ಯ ಈಗ ಚುನಾವಣೆ ಹತ್ತಿರ ಬರುತ್ತಿದ್ದು ದೇಶದಲ್ಲಿ ಹಲವು ಚುನಾವಣಾ ಪಕ್ಷಗಳು ಜನರಿಗೆ ದೊಡ್ಡ ದೊಡ್ಡ ಆಫರ್ ಗಳನ್ನ ಘೋಷಣೆ ಮಾಡುತ್ತಿದೆ.

ಇದರ ನಡುವೆ ಕೇಂದ್ರ ಸರ್ಕಾರ ಈಗ ರೇಷನ್ ಕಾರ್ಡ್ ಹೊಂದಿರುವ ಜನರಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಪಡಿತರ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು ಜನರು ಇನ್ನುಮುಂದೆ ಹಲವು ಉಚಿತ ಪ್ರಯೋಜನಗಳನ್ನ ಪಡೆದುಕೊಳ್ಳಲಿದ್ದಾರೆ.

Central government has decided to distribute free ration grains till December
Image Credit: abplive

ಒನ್ ನೇಶನ್ ಒನ್ ರೇಷನ್ ಕಾರ್ಡ್
ಈಗಾಗಲೇ ಕೇಂದ್ರ ಸರ್ಕಾರ ಒನ್ ನೇಶನ್ ಒನ್ ರೇಷನ್ ಕಾರ್ಡ್ ನಿಯಮವನ್ನ ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ದೇಶದಲ್ಲಿ ಪಡಿತರ ಚೀಟಿ ಹೊಂದಿರುವ ಜನರು ಹಲವು ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ ದೇಶದ ಯಾವುದೇ ರೇಷನ್ ಅಂಗಡಿಯಲ್ಲಿ ಪಡಿತರ ಧಾನ್ಯಗಳನ್ನ ಪಡೆದುಕೊಳ್ಳಬಹುದಾಗಿದೆ.

ಡಿಸೆಂಬರ್ ತನಕ ಉಚಿತ ಪಡಿತರ ಧನ್ಯ
ಸದ್ಯ ಕೇಂದ್ರ ಸರ್ಕಾರ ಕೆಲವು ಪಡಿತರ ಧಾನ್ಯಗಳನ್ನ 2023 ರ ಡಿಸೆಂಬರ್ ತನಕ ವಿತರಣೆ ಮಾಡಲು ತೀರ್ಮಾನವನ್ನ ಮಾಡಿದೆ. BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಜನರು ಡಿಸೆಂಬರ್ ತನಕ ಹಲವು ಪಡಿತರ ಧಾನ್ಯಗಳನ್ನ ಉಚಿತವಾಗಿ ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರ ಸ್ಪಷ್ಟನೆಯನ್ನ ನೀಡಿದೆ.

Join Nadunudi News WhatsApp Group

The central government has decided to install IPOS machines in all ration shops.
Image Credit: newindianexpress

ಅಕ್ರಮ ತಡೆಗಟ್ಟಲು ಹೊಸ ನಿಯಮ
ಪಡಿತರ ಅಂಗಡಿಯಲ್ಲಿ ನಡೆಯುತ್ತಿರುವ ಅಕ್ರಮ ತೂಕವನ್ನ ತಡೆಗಟ್ಟಲು ಕೇಂದ್ರ ಸರ್ಕಾರ ಈಗ IPOS ಯಂತ್ರವನ್ನ ಜಾರಿಗೆ ತಂದಿದೆ. ಇದೊಂದು ಆನ್ಲೈನ್ ಇಲೆಕ್ಟ್ರಾನಿಕ್ ಯಂತ್ರ ಆಗಿದ್ದು ಈ ಯಂತ್ರದ ಮೂಲಕ ಯಾರು ಯಾವುದೇ ಮೋಸವನ್ನ ಮಾಡಲು ಸಾಧ್ಯವಿಲ್ಲವಾಗಿದೆ.

Central government has decided to implement IPOS machine to prevent illegal activities in ration shops.
Image Credit: mathrubhumi

ಸರ್ಕಾರ ಈ ಯಂತ್ರದ ಮೂಲಕ ಒಂದು ರೇಷನ್ ಶಾಪ್ ನಲ್ಲಿ ಒಬ್ಬ ಫಲಾನುಭವಿ ಎಷ್ಟು ಪಡಿತರ ಪಡೆದುಕೊಳ್ಳುತ್ತಿದ್ದಾನೆ ಅನ್ನುವುದನ್ನ ತಿಳಿದುಕೊಳ್ಳಬಹುದು. ಇನ್ನು ಈ ಯಂತ್ರ ಆನ್ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ. ಡಿಸೆಂಬರ್ ತನಕ ಉಚಿತ ಪಡಿತರ ಧಾನ್ಯಗಳ ಜೊತೆಗೆ ಪಡಿತರ ಯಂತ್ರದಲ್ಲಿ ಈಗ ಕೇಂದ್ರ ಸರ್ಕಾರ ಬದಲಾವಣೆಯನ್ನ ಜಾರಿಗೆ ತಂದಿದೆ.

Join Nadunudi News WhatsApp Group