Gas Cylinder Yojana: ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆಯಲ್ಲಿ 500 ರೂ ಗೆ ಸಿಗಲಿದೆ ಗ್ಯಾಸ್ ಸಿಲಿಂಡರ್, ರಾಜಸ್ಥಾನದ ಸರ್ಕಾರದ ಘೋಷಣೆ.

ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆಯ ಅಡಿಯಲ್ಲಿ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ.

Gas Cylinder Price: ಇತ್ತೀಚಿನ ದಿನಗಳಲ್ಲಿ ದಿನ ಬಳಕೆಯ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆಯಂತು ಏರುತ್ತಲೇ ಇದೆ. ಮಾರ್ಚ್ ತಿಂಗಳ ಪ್ರಾರಂಭದಲ್ಲಿಯೇ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು.ಇದೀಗ 2023 ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ.

ಇನ್ನು ಈ ಹೊಸ ಹಣಕಾಸು ವರ್ಷದ ಸಲುವಾಗಿ ಅನೇಕ ಹಣಕಾಸಿನ ವ್ಯವಹಾರಗಳಲ್ಲಿ ಬದಲಾವಣೆ ಆಗಲಿದೆ. ಈ ವರ್ಷದ ಹಣಕಾಸು ವರ್ಷ ಬಾರಿ ಪ್ರಮಾಣದಲ್ಲಿ ಬೆಲೆ ಏರಿಕೆ ತರಲಿದೆ.

Gas Cylinder Price
Image Source: India Today

ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿನ ಏರಿಕೆ
ಹೊಸ ಹಣಕಾಸು ವರ್ಷದ ಮೊದಲ ದಿನವೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ವಾಣಿಜ್ಯ ಬಳಕೆಯ LPG ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ 92 ರೂಗಳಷ್ಟು ಇಳಿಕೆಯಾಗಿದೆ. ಆದರೆ ದೇಶಿಯ LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಆಗಿಲ್ಲ.

ಕಳೆದ ತಿಂಗಳಿನ ದರದಲ್ಲಿಯೇ ಗ್ಯಾಸ್ ಸಿಲಿಂಡರ್ ಗಳ ಬೆಲೆ ಇದೆ. ಕಳೆದ ತಿಂಗಳು ಗೃಹ ಬಳಕೆಯ ಅನಿಲಗಳ ಬೆಲೆಯನ್ನು 50 ರೂ ಹೆಚ್ಚಿಸಿತ್ತು. ಇದೀಗ ರಾಜಸ್ಥಾನ ಸರ್ಕಾರವು (Rajasthan Government)  ಗ್ಯಾಸ್ ಸಿಲಿಂಡರ್ ಗಳ ಹಣದುಬ್ಬರದ ಪರಿಸ್ಥಿಯನ್ನು ನಿವಾರಿಸಲು ಕೇವಲ 500 ರೂಗಳಲ್ಲಿ ಗ್ಯಾಸ್ ಸಿಲಿಂಡರ್ ನೀಡಲು ಮುಂದಾಗಿದೆ.

Gas Cylinder Price
Image Source: India Today

ರಾಜಸ್ಥಾನ ಸರ್ಕಾರದಲ್ಲಿ ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆ
ರಾಜಸ್ಥಾನ ಸರ್ಕಾರವು ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆಯಡಿಯಲ್ಲಿ ಗ್ಯಾಸ್ ಸಿಲಿಂಡರ್ ಗಳ ಹಣದುಬ್ಬರದ ಪರಿಸ್ಥಿತಿಯನ್ನು ನಿವಾರಿಸಲು ಮುಂದಾಗಿದೆ. ನೀವು ರಾಜಸ್ಥಾನದ ನಿವಾಸಿಗಳಾಗಿದ್ದರೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಗ್ಯಾಸ್ ಸಿಲಿಂಡರ್ ಯೋಜನೆಯಡಿಯಲ್ಲಿ ಬಡ ಕುಟುಂಬಗಳು ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ. 500 ಗೆ ಅಡುಗೆ ಅನಿಲವನ್ನು ನೀಡಲು ನಿರ್ಧರಿಸಿದೆ.

Join Nadunudi News WhatsApp Group

Gas Cylinder Price
Image Source: Social News

500 ರೂ. LPG ಸಿಲಿಂಡರ್ ಪಡೆಯುವುದು ಹೇಗೆ
ನೀವು ರಾಜಸ್ಥಾನದ ನಿವಾಸಿಗಳಾಗಿದ್ದರೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ನೀವು ಬಿಪಿಎಲ್ ಮತ್ತು ಉಜ್ವಲಾ ಯೋಜನೆಯಡಿಯಲ್ಲಿ ಬಂದರೆ, ತಿಂಗಳಿಗೆ ರೂ. 500 ಕ್ಕೆ ಗ್ಯಾಸ್ ಸಿಲಿಂಡರ್ ಅನ್ನು ಕೂಡ ಪಡೆಯಬಹುದಾಗಿದೆ.

ಸಬ್ಸಿಡಿ ಪಡೆಯಲು ತಮ್ಮ ಬ್ಯಾಂಕ್ ಕತೆಯನ್ನು ಜನ್ ಆಧಾರ್ ನೊಂದಿಗೆ ಲಿಂಕ್ ಮಾಡಬೇಕು. ಲಿಂಕ್ ಆಗದಿದ್ದರೆ ಈ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಕರ್ನಾಟಕ ಜನತೆ ಕೂಡ ಗ್ಯಾಸ್ ಸಿಲಿಂಡರ್ ಗಳಲ್ಲಿನ ಬೆಲೆಯ ಹೆಚ್ಚಳದ ಪರಿಣಾಮವನ್ನು ಎದುರಿಸುತ್ತಿದ್ದಾರೆ. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡುಬರುತ್ತಿದೆ.

Gas Cylinder Price
Image Source: India Today

ಗ್ಯಾಸ್ ಬೆಲೆ ಕಡಿಮೆ ಮಾಡುವಂತೆ ಕರ್ನಾಟಕದ ಜನತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಕೂಡ 500 ರೂ. ಗೆ ಗ್ಯಾಸ್ ಸಿಗುವಂತೆ ಆಗಲಿ ಎಂದು ಅನೇಕರು ಆಶಿಸುತ್ತಿದ್ದಾರೆ. ಸರ್ಕಾರ ಕರ್ನಾಟಕದಲ್ಲಿಯೂ ಕೂಡ 500 ರೂ. ಗ್ಯಾಸ್ ಸಿಲಿಂಡರ್ ನೀಡುವ ಯೋಜನೆಯನ್ನು ತರುವವರೆಗೂ ಕಾದು ನೋಡಬೇಕಿದೆ.

Join Nadunudi News WhatsApp Group