LPG Cylinder: ಕೇವಲ 500 ರೂ ಗೆ ಸಿಗಲಿದೆ 14 ಕೆಜಿ ಗ್ಯಾಸ್ ಸಿಲಿಂಡರ್, ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಗುಡ್ ನ್ಯೂಸ್.

ಕಡಿಮೆ ಬೆಲೆಗೆ ಸಿಗಲಿದೆ ಗ್ಯಾಸ್ ಸಿಲಿಂಡರ್, ರಾಜಸ್ಥಾನ ಸರ್ಕಾರದ ಹೊಸ ಯೋಜನೆ.

LPG Cylinder Subsidy:  ದಿನ ಬಳಕೆಯ ಗ್ಯಾಸ್ ಸಿಲಿಂಡರ್ (Gas Cylinder) ಸತತ ಏರಿಕೆ ಕಾಣುತ್ತಿದೆ. ಮಾರ್ಚ್ ತಿಂಗಳ ಪ್ರಾರಂಭದಲ್ಲಿಯೇ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಇನ್ನು 2023 ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಇನ್ನು ಈ ಹೊಸ ಹಣಕಾಸು ವರ್ಷದ ಸಲುವಾಗಿ ಅನೇಕ ಹಣಕಾಸಿನ ವ್ಯವಹಾರಗಳಲ್ಲಿ ಬದಲಾವಣೆ ಆಗಲಿದೆ.

ಈ ವರ್ಷದ ಹಣಕಾಸು ವರ್ಷ ಬಾರಿ ಪ್ರಮಾಣದಲ್ಲಿ ಬೆಲೆ ಏರಿಕೆ ತರಲಿದೆ. ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದೀಗ ಸರ್ಕಾರ ಗ್ಯಾಸ್ ಸಿಲಿಂಡರ್ ಗಳ ಬೆಲೆ ಏರಿಕೆಯ ಪರಿಣಾಮವನ್ನು ನಿಯಂತ್ರಿಸಲು ಇದೀಗ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

Gas cylinder will be available at low price in Rajasthan Govt
Image Credit: Economictimes

ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿನ ಏರಿಕೆ
ಇತ್ತೀಚಿನ ದಿನಗಳಲ್ಲಿ ದೇಶಿಯ LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಆಗಿಲ್ಲ. ಕಳೆದ ತಿಂಗಳಿನ ದರದಲ್ಲಿಯೇ ಗ್ಯಾಸ್ ಸಿಲಿಂಡರ್ ಗಳ ಬೆಲೆ ಇದೆ. ಕಳೆದ ತಿಂಗಳು ಗೃಹ ಬಳಕೆಯ ಅನಿಲಗಳ ಬೆಲೆಯನ್ನು 50 ರೂ ಹೆಚ್ಚಿಸಿತ್ತು.

ಇದೀಗ ರಾಜಸ್ಥಾನ ಸರ್ಕಾರವು (Rajasthan Government)  ಗ್ಯಾಸ್ ಸಿಲಿಂಡರ್ ಗಳ ಹಣದುಬ್ಬರದ ಪರಿಸ್ಥಿಯನ್ನು ನಿವಾರಿಸಲು ಕೇವಲ 500 ರೂಗಳಲ್ಲಿ ಗ್ಯಾಸ್ ಸಿಲಿಂಡರ್ ನೀಡಲು ಮುಂದಾಗಿದೆ. ಕೇವಲ 500 ರೂ ನಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ.

ರಾಜಸ್ಥಾನ ಸರ್ಕಾರದಲ್ಲಿ ಕಡಿಮೆ ಬೆಲೆಗೆ ಸಿಗಲಿದೆ ಗ್ಯಾಸ್ ಸಿಲಿಂಡರ್
ರಾಜಸ್ಥಾನ ಸರ್ಕಾರವು ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆಯಡಿಯಲ್ಲಿ ಗ್ಯಾಸ್ ಸಿಲಿಂಡರ್ ಗಳ ಹಣದುಬ್ಬರದ ಪರಿಸ್ಥಿತಿಯನ್ನು ನಿವಾರಿಸಲು ಮುಂದಾಗಿದೆ. ನೀವು ರಾಜಸ್ಥಾನದ ನಿವಾಸಿಗಳಾಗಿದ್ದರೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಗ್ಯಾಸ್ ಸಿಲಿಂಡರ್ ಯೋಜನೆಯಡಿಯಲ್ಲಿ ಬಡ ಕುಟುಂಬಗಳು ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ. 500 ಗೆ ಅಡುಗೆ ಅನಿಲವನ್ನು ನೀಡಲು ನಿರ್ಧರಿಸಿದೆ.

Join Nadunudi News WhatsApp Group

Gas cylinder will be available at low price in Rajasthan Govt
Image Credit: News18

500 ರೂ. LPG ಸಿಲಿಂಡರ್ ಪಡೆಯುವುದು ಹೇಗೆ
ನೀವು ರಾಜಸ್ಥಾನದ ನಿವಾಸಿಗಳಾಗಿದ್ದರೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ನೀವು ಬಿಪಿಎಲ್ ಮತ್ತು ಉಜ್ವಲಾ ಯೋಜನೆಯಡಿಯಲ್ಲಿ ಬಂದರೆ, ತಿಂಗಳಿಗೆ ರೂ. 500 ಕ್ಕೆ ಗ್ಯಾಸ್ ಸಿಲಿಂಡರ್ ಅನ್ನು ಕೂಡ ಪಡೆಯಬಹುದಾಗಿದೆ. ಸಬ್ಸಿಡಿ ಪಡೆಯಲು ತಮ್ಮ ಬ್ಯಾಂಕ್ ಖಾತೆಯನ್ನು ಜನ್ ಆಧಾರ್ ನೊಂದಿಗೆ ಲಿಂಕ್ ಮಾಡಬೇಕು. ಲಿಂಕ್ ಆಗದಿದ್ದರೆ ಈ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

Join Nadunudi News WhatsApp Group