Gold Rate: ಸತತ ಎರಡನೆಯ ದಿನವೂ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಕೊಳ್ಳುವವರಿಗೆ ಗುಡ್ ನ್ಯೂಸ್.

ಮೇ ತಿಂಗಳಲ್ಲಿ ಸತತವಾಗಿ ಚಿನ್ನದ ಬೆಲೆ ಇಳಿಕೆ ಆಗುತ್ತಿದ್ದು ಇದು ಚಿನ್ನ ಖರೀದಿ ಮಾಡುವವರ ಸಂತಸಕ್ಕೆ ಕಾರಣವಾಗಿದೆ.

Gold Price Fall In May: ಚಿನ್ನದ ಬೆಲೆ (Gold Price) ಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ ಜನಸಾಮಾನ್ಯರಿಗೆ ಚಿನ್ನ ಖರೀದಿಸಲು ಕಷ್ಟ ಆಗುತ್ತಿದೆ. ಹೊಸ ಹಣಕಾಸು ವರ್ಷದ ಆರಂಭದಿಂದ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಂಡು ಬಂದಿದೆ.

ಆಭರಣ ಪ್ರಿಯರು ಚಿನ್ನದ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ನಿನ್ನೆಯೂ ಸಹ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಇಂದು ಸಹ ನಿನ್ನೆಗಿಂತ ಚಿನ್ನದ ಬೆಲೆ ಕುಸಿತವಾಗಿದೆ. ಚಿನ್ನ ಖರೀದಿ ಮಾಡುವವರಿಗೆ ಈ ದಿನ ಬಹಳ ಉತ್ತಮವಾಗಿದೆ.

Gold Price Fall In May
Image Credit: bayut

ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆ (Gold price down) 
ಇಂದು ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಸ್ವಲ್ಪ ಮಟ್ಟಿನ ಇಳಿಕೆಯಾಗಿದೆ. ಒಂದೇ ದಿನದಲ್ಲಿ ಹತ್ತು ಗ್ರಾಂ ಚಿನ್ನದಲ್ಲಿ 200 ರೂ ಇಳಿಕೆಯಾಗಿದೆ. ಇದು ಚಿನ್ನ ಖರೀದಿಗೆ ಉತ್ತಮ ಸಮಯವಾಗಿದೆ. ಇನ್ನು 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ತಿಳಿಯೋಣ.

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ಇಂದು 5 ,615 ರೂ. ಆಗಿದೆ. ನಿನ್ನೆಗಿಂತ ಇಂದು 20 ರೂ ಕಡಿಮೆಯಾಗಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 45,080 ರೂ. ಇದ್ದು ಇಂದು 44,920 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 160 ರೂ. ಇಳಿಕೆಯಾಗಿದೆ.

ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 56,350 ಇದ್ದು ಇಂದು 56,150 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 200 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,62,500 ಇದ್ದು ಇಂದು 5,61,500 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 2,000 ರೂ. ಇಳಿಕೆಯಾಗಿದೆ.

Join Nadunudi News WhatsApp Group

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ಇಂದು 6,125 ರೂ. ಆಗಿದೆ. ನಿನ್ನೆಗಿಂತ ಇಂದು 22 ರೂ ಕಡಿಮೆಯಾಗಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 49,176 ಇದ್ದು, ಇಂದು 49,000 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 176 ರೂ. ಇಳಿಕೆಯಾಗಿದೆ.

The price of gold is continuously decreasing in May, which is the reason for the happiness of gold buyers.
Image Credit: timesnownews

ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 61,470 ಇದ್ದು, ಇಂದು 61,2500 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 220 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 6,14,700 ಇದ್ದು, ಇಂದು 6,12,500 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 2,200 ರೂ. ಇಳಿಕೆಯಾಗಿದೆ.

Join Nadunudi News WhatsApp Group