Gold Price Hike: ಒಂದೇ ದಿನದಲ್ಲಿ 500 ರೂ ಏರಿಕೆಯಾದ ಚಿನ್ನದ ಬೆಲೆ, ಬೇಸರ ವ್ಯಕ್ತಪಡಿಸಿದ ಜನರು.

ಮೇ ತಿಂಗಳಲ್ಲಿ ಆರಂಭದಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಆಗಿದ್ದು ಚಿನ್ನ ಕೊಳ್ಳುವವರ ಬೇಸರಕ್ಕೆ ಕಾರಣವಾಗಿದೆ.

Today Gold Price Update In India: ಚಿನ್ನದ ಬೆಲೆ (Gold Price) ಯಲ್ಲಿ ದಿನೇ ದಿನೇ ಏರಿಕೆ ಆಗುತ್ತಿದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿರುವುದರಿಂದ ಜನ ಸಾಮಾನ್ಯರಿಗೆ ಚಿನ್ನ ಖರೀದಿಸಲು ದುಬಾರಿ ಎನಿಸುತ್ತಿದೆ.

ಮೇ ತಿಂಗಳ ಮೊದಲ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು ಮೇ ತಿಂಗಳ ಮೂರನೇ ಮತ್ತು ನಾಲ್ಕನೇ ದಿನಕ್ಕೆ ಚಿನ್ನದ ಬೆಲೆಯಲ್ಲಿ ಅಧಿಕ ಮಟ್ಟದ ದುಬಾರಿ ಕಂಡು ಬಂದಿದೆ.

Gold prices rose in early May.
Image Credit: bankrate

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Price)
ಇಂದು ಒಂದು ಗ್ರಾಂ ಚಿನ್ನದ ಬೆಲೆ ಇಂದು 5,705 ರೂ ಆಗಿದೆ. ನಿನ್ನೆ 5,655ರೂ. ಇದ್ದು ಇಂದು 50 ರೂ. ಏರಿಕೆಯಾಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಏರಿಕೆಯಾಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ45,240 ರೂಪಾಯಿ ಇದ್ದು, ಇಂದು 45,640 ರೂಪಾಯಿ ಆಗಿದೆ.

ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 56,550 ಇದ್ದು, ಇಂದು 57,050 ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 5000 ರೂ. ಏರಿಕೆಯಾಗಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,65,500 ಇದ್ದು, ಇಂದು 5,70,500 ಆಗಿದೆ.

Today, the price of 22 carat gold has increased by Rs 50 and the price of 24 carat gold has increased by Rs 54.
Image Credit: livemint

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Price)
ಇಂದು ಒಂದು ಗ್ರಾಂ ಚಿನ್ನದ ಬೆಲೆ 6,223ರೂ ಆಗಿದೆ. ನಿನ್ನೆ 6,169 ರೂ. ಇದ್ದು ಇಂದು 54 ರೂ. ಏರಿಕೆಯಾಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 432 ರೂ. ಏರಿಕೆಯಾಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 49,352 ಇದ್ದು, ಇಂದು 49,784 ರೂಪಾಯಿ ಆಗಿದೆ.ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 540 ರೂ. ಏರಿಕೆಯಾಗಿದೆ.

Join Nadunudi News WhatsApp Group

ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 61,690 ಇದ್ದು, ಇಂದು 62,230 ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 5400 ರೂ. ಏರಿಕೆಯಾಗಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 6,16900 ಇದ್ದು, ಇಂದು 6,22,300 ರೂ. ಆಗಿದೆ.

Join Nadunudi News WhatsApp Group