Indian Gold: ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ.

ಸತತ ನಾಲ್ಕೈದು ದಿನದಿಂದ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ.

Gold Price Down Today: ಚಿನ್ನದ ಬೆಲೆಯಲ್ಲಿ ಇತ್ತೀಚಿಗೆ ಗಣನೀಯ ಏರಿಕೆಯಾಗುತ್ತಿದೆ. ಚಿನ್ನ ಖರೀದಿ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಚಿನ್ನ ಖರೀದಿಸಲು ಜನರು ಬಯಸಿದರು ಚಿನ್ನದ ಬೆಲೆ ಕೇಳಿ ಖರೀದಿಗೆ ಹಿಂದೇಟು ಹಾಕುತ್ತಾರೆ. ಇನ್ನು ಕಳೆದ ವರ್ಷದಲ್ಲಿ ಚಿನ್ನದ ಬೆಲೆ 4000 ಗಡಿಯಲ್ಲಿತ್ತು. ಕಳೆದ ಆಗಸ್ಟ್ ನಿಂದ ಚಿನ್ನದ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದೆ.

ಹೊಸ ಹಣಕಾಸು ವರ್ಷದ ಆರಂಭದ ವೇಳೆ ಚಿನ್ನದ ದರ 5,000 ಗಡಿ ತಲುಪಿತ್ತು. ನಂತರ ದಿನೇ ದಿನೇ ಚಿನ್ನದ ದರ ಏರಿಕೆ ಕಾಣುತ್ತ ಬಂದಿದೆ. ಚಿನ್ನದ ದರ ಏರಿಕೆಯಾದರೆ ಬರೋಬ್ಬರಿ 400 ರಿಂದ 600 ರೂ. ಏರಿಕೆಯಾಗುತ್ತದೆ. ಆದರೆ ಚಿನ್ನದ ಇಳಿಕೆಯ ಪ್ರಮಾಣ ಕಡಿಮೆಯಿರುತ್ತದೆ. 2023 ಆರಂಭದಿಂದ ಚಿನ್ನದ ಬೆಲೆ ಏರಿಕೆಯಾಗಿ 5,000 ಗಡಿಯಲ್ಲಿದ್ದ ದರ 6,000 ಗಡಿ ತಲುಪುವ ಹಂತಕ್ಕೆ ಬಂದಿತ್ತು. ಜುಲೈ ಅಂತ್ಯದವರೆಗಿ ಚಿನ್ನದ ಬೆಲೆಯ್ಲಲಿ ಹೆಚ್ಚಿನ ಏರಿಕೆಯಾಗಿದೆ.

gold price down in august 10
Image Credit: Economictimes

ಆಭರಣ ಪ್ರಿಯರಿಗೆ ಸಿಹಿ ಸುದ್ದಿ
ಇನ್ನು ಆಗಸ್ಟ್ ಆರಂಭ ಕೂಡ ಜನರಿಗೆ ಖುಷಿ ನೀಡಲಿಲ್ಲ. ಆದರೆ ಇದೀಗ ಆಗಸ್ಟ್ ನ ಎರಡನೇ ವಾರದಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಸತತ ನಾಲ್ಕೈದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇಂದು ಕೂಡ ಹತ್ತು ಗ್ರಾಂ ಚಿನ್ನದಲ್ಲಿ ಬರೋಬ್ಬರಿ 250 ರೂ. ಇಳಿಕೆಯಾಗಿದೆ. ಈ ಮೂಲಕ 6000 ಗಡಿದಾಟಿದ್ದ ಚಿನ್ನದ ಬೆಲೆ ಸ್ವಲ್ಪ ಮಟ್ಟಿನ ಇಳಿಕೆ ಕಂಡಿದೆ. ಆಭರ ಖರೀದಿಗೆ ಜನರು ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬಹುದು. ಇಂದಿನ ದರದ ಚಿನ್ನದ ಖರೀದಿ ಜನರಿಗೆ ಹೆಚ್ಚಿನ ಲಾಭ ನೀಡಲಿದೆ.

22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (22 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ನಿನ್ನೆ 5,495 ರೂ. ಆಗಿದೆ. ನಿನ್ನೆಗಿಂತ ಇಂದು 25 ರೂ ಕಡಿಮೆಯಾಗಿ ಇಂದು 5,470 ರೂ. ತಲುಪಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 43,960 ರೂ. ಇದ್ದು ಇಂದು 43,760 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 200 ರೂ. ಇಳಿಕೆಯಾಗಿದೆ.

24 carat gold price today
Image Credit: NEWS18

ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 54,950 ಇದ್ದು ಇಂದು 54,700 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 250 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,49,500 ಇದ್ದು ಇಂದು 5,47,000 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 2,500 ರೂ. ಇಳಿಕೆಯಾಗಿದೆ.

Join Nadunudi News WhatsApp Group

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ನಿನ್ನೆ 5,995 ರೂ. ಆಗಿದೆ. ನಿನ್ನೆಗಿಂತ ಇಂದು 28 ರೂ ಕಡಿಮೆಯಾಗಿ ಇಂದು 5,967 ರೂ. ತಲುಪಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 47,960 ಇದ್ದು, ಇಂದು 47,736 ರೂ. ಆಗಿದೆ.

gold price down in august 10
Image Credit: English.Mathrubhumi

ಎಂಟು ಗ್ರಾಂ ಚಿನ್ನದಲ್ಲಿ ಇಂದು 224 ರೂ. ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 59,950 ಇದ್ದು, ಇಂದು 59,670 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 280 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,99,500 ಇದ್ದು, ಇಂದು 5,96,700 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 2,800 ರೂ. ಇಳಿಕೆಯಾಗಿದೆ.

Join Nadunudi News WhatsApp Group