Gold Rate: ಆಭರಣ ಪ್ರಿಯರಿಗೆ ಬಿಗ್ ಶಾಕ್, 70 ಸಾವಿರದ ಗಡಿದಾಟಿ ಐತಿಹಾಸಿಕ ಏರಿಕೆ ಕಂಡ ಚಿನ್ನದ ಬೆಲೆ.

70 ಸಾವಿರದ ಗಡಿದಾಟಿ ಐತಿಹಾಸಿಕ ಏರಿಕೆ ಕಂಡ ಚಿನ್ನದ ಬೆಲೆ

Gold Rate Hike In India: ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಚಿನ್ನದ ಖರೀದಿ ಮಾಡಿದರೆ ಹೆಚ್ಚು ಹಣ ಉಳಿತಾಯ ಮಾಡಿದಂತೆ ಆಗುತ್ತದೆ. ಹೀಗಾಗಿ ಜನರು ಹೆಚ್ಚಾಗಿ ತಮ್ಮ ಉಳಿತಾಯದ ಹಣವನ್ನು ಚಿನ್ನ ಖರೀದಿಯಲ್ಲಿ ವ್ಯಯಿಸಲು ಬಯಸುತ್ತಾರೆ.

ಆದರೆ ಪ್ರಸ್ತುತ ಚಿನ್ನದ ಬೆಲೆಯ ಏರಿಕೆಯ ಕಾರಣ ಚಿನ್ನದ ಖರೀದಿ ಅಸಾಧ್ಯವಾಗಿದೆ ಎನ್ನಬಹುದು. ಕಳೆದ ಒಂದೆರಡು ತಿಂಗಳಿಂದ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಚಿನ್ನದ ಬೆಲೆಯ ಏರಿಕೆಯು ಜನಸಾಮಾನ್ಯರನ್ನು ಹೆಚ್ಚಿನ ಚಿಂತೆಗೆ ನೂಕಿದೆ ಎನ್ನಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 70 ಸಾವಿರ ಗಡಿ ತಲುಪಿದೆ ಎನ್ನಬಹುದು.

Gold Rate Hike In India
Image Credit: Livemint

ಆಭರಣ ಪ್ರಿಯರಿಗೆ ಬಿಗ್ ಶಾಕ್
ಚಿನ್ನದ ಬೆಲೆ 2023 ರಲ್ಲಿ ಕೂಡ ಹೆಚ್ಚಿನ ಏರಿಕೆ ಕಂಡಿದೆ. ವರ್ಷದ ಅನೇಕ ತಿಂಗಳಲ್ಲಿ ಚಿನ್ನದ ಬೆಲೆ ಏರಿಕೆ ಕಾಣುತ್ತ ಬಂದಿದೆ. ಆಭರಣ ಖರೀದಿ ಜನರಿಗೆ ಕಷ್ಟವಾಗುತ್ತಿದೆ ಎನ್ನಬಹುದು. ಇನ್ನು ಚಿನ್ನದ ಬೆಲೆಯ ಏರಿಕೆಯು ಚಿನ್ನದ ಮಾರಾಟದ ಮೇಲೆ ಪರಿಣಾಮ ಬಿರುವುದರಿಂದ ಆಗಾಗ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಾಣುತ್ತದೆ. ಆದರೆ ಒಂದು ದಿನ ಚಿನ್ನದ ಬೆಲೆ ಇಳಿಕೆ ಆದರೆ ಅದರ ಮರು ದಿನ ಚಿನ್ನದ ಬೆಲೆ ದುಪ್ಪಟ್ಟು ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆಯು ಇಳಿಕೆಗೂ ಬಾರಿ ವ್ಯತ್ಯಾಸ ಇರುತ್ತದೆ.

70 ಸಾವಿರದ ಗಡಿದಾಟಿ ಐತಿಹಾಸಿಕ ಏರಿಕೆ ಕಂಡ ಚಿನ್ನದ ಬೆಲೆ
ಈಗಂತೂ ಮದುವೆಯ ಸೀಸನ್ ಆಗಿದೆ. ಈ ಕಾರಣಕ್ಕೆ ಚಿನ್ನದ ಬೆಲೆ ಗಗನಕ್ಕೇರಿದೆ ಎಂದರೆ ತಪ್ಪಾಗಲಾರದು. ಚಿನ್ನದ ಬೆಲೆಯೂ ದಿನೇ ದಿನೇ ಏರಿಕೆ ಕಾಣುತ್ತ ಕಳೆದ ವಾರದಲ್ಲಿ 60 ಸಾವಿರ ಗಡಿ ದಾಟಿತ್ತು. ಇದೀಗ ಚಿನ್ನದ ಬೆಲೆಯ ಏರಿಕೆಯು 70 ಸಾವಿರ ಗಡಿ ದಾಟಿದೆ. ಭಾರತದಲ್ಲಿ ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 850 ರೂ. ಏರಿಕೆಯೊಂದಿಗೆ ದಾಖಲೆಯ 70,050 ರೂ.ಗೆ ಮಾರಾಟವಾಗಿದೆ. ಕಳೆದ ಅವಧಿಯಲ್ಲಿ ಚಿನ್ನದ ಬೆಲೆ 69,200 ರೂ.ಗೆ ಏರಿತ್ತು. ಈ ಬಾರಿ 70,000 ರೂ. ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

Gold Rate Hike In April
Image Credit: ibtimes

ಜಾಗತಿಕ ಬೆಳವಣಿಗೆಯ ಆಧಾರದ ಮೇಲೆ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಇನ್ನು ಏಪ್ರಿಲ್ ತಿಂಗಳ 5 ದಿನಗಳಲ್ಲಿ ಚಿನ್ನದ ಬೆಲೆ 21,00 ರೂ. ಏರಿಕೆ ಕಂಡಿದೆ. ಚಿನ್ನದ ಬೆಲೆ 70 ಸಾವಿರ ಗಡಿ ದಾಟಲು ಇನ್ನು ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಇನ್ನೆರಡು ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾದರೆ ಚಿನ್ನದ ಬೆಲೆ 70 ಸಾವಿರಕ್ಕಿಂತಲೂ ಹೆಚ್ಚು ಏರಿಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಾಗಲೇ ಚಿನ್ನದ ಬೆಲೆ ಬಡವರ ಕೈಗೆ ಸಿಗದಂತಾಗಿದೆ. ಚಿನ್ನದ ಬೆಲೆಯ ಏರಿಕೆಯ ಪ್ರಮಾಣ ನೋಡಿದರೆ ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಬಹುದು.

Join Nadunudi News WhatsApp Group

Gold Rate Hike Latest News
Image Credit: Samayam

Join Nadunudi News WhatsApp Group