7th Pay Commission: ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ಸಂಬಳದ ಜೊತೆಗೆ ಪಿಂಚಣಿ ಕೂಡ ಹೆಚ್ಚಳ.

ಸರ್ಕಾರೀ ನೌಕರರ ಸಂಬಳ ಹೆಚ್ಚಾದ ಕಾರಣ ಈಗ ಸರ್ಕಾರೀ ನೌಕರರ ಪಿಂಚಣಿ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ.

7th Pay Commission Pension: ಕೇಂದ್ರ ಸರ್ಕಾರದಿಂದ (Central Government) ಈಗಾಗಲೇ ಸರ್ಕಾರಿ ನೌಕರರಿಗೆ ಡಿಎ ಮತ್ತು ಟಿಎ ಹೆಚ್ಚಳ ಮಾಡಲಾಗಿದೆ. ಇದರಿಂದ ಸರ್ಕಾರೀ ನೌಕರರು ನೆಮ್ಮದಿಯಿಂದ ಇದ್ದಾರೆ. ಸರ್ಕಾರಿ ನೌಕರರ ಡಿಎ ಮೊದಲು 42% ಇದ್ದಿದ್ದು ಇತ್ತೀಚಿಗೆ 46% ಹೆಚ್ಚಳ ಮಾಡಿದ್ದಾರೆ.

ಇನ್ನು ಜೂನ್ ತಿಂಗಳಲ್ಲಿ ತುಟ್ಟಿಭತ್ಯೆಯಲ್ಲಿ 50% ಹೆಚ್ಚಳ ಆಗಲಿದೆಯೆಂದು ಕೇಂದ್ರ ಸರ್ಕಾರದಿಂದ ಮಾಹಿತಿ ಹೊರ ಬಿದ್ದಿದೆ. ಇದೀಗ ಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಸಿಹಿ ಸುದ್ದಿ ಲಭಿಸಿದೆ.

Under the 7th pay scale, the salary of central government employees has also been increased along with the pension amount.
Image Credit: indiablooms

ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಸಿಹಿ ಸುದ್ದಿ
ಇದೀಗ ಸರ್ಕಾರಿ ನೌಕರರ ವೃದ್ದಾಪ್ಯ ಪಿಂಚಣಿ ಯೋಜನೆಯಲ್ಲಿ ಹೆಚ್ಚಳವಾಗುತ್ತದೆ ಎಂಬ ಸುದ್ದಿ ಹರಡಿದೆ. ದೇಶದಲ್ಲಿ ಲಕ್ಷಾಂತರ ಜನರು ಪಿಂಚಣಿ ಹಣವನ್ನು ಪಡೆಯುತ್ತಿದ್ದಾರೆ. ಅಂತಹವರಿಗೆ ಇದು ಸಿಹಿ ಸುದ್ದಿ ಆಗಿದೆ.

ಸರ್ಕಾರಿ ನೌಕರರು ಈ ವರ್ಷ ಹೆಚ್ಚಿನ ಪಿಂಚಣಿಯನ್ನು ಪಡೆಯಲಿದ್ದಾರೆ. ದೇಶಾದ್ಯಂತ ಪಿಂಚಣಿ ವ್ಯವಸ್ಥೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೆ ವೇಳೆ ಕೇಂದ್ರ ಸರ್ಕಾರ ವೃದ್ದಾಪ್ಯ ಪಿಂಚಣಿದಾರರಿಗೆ ಪಿಂಚಣಿ ಮತ್ತು ವೇತನ ಹೆಚ್ಚಾಗಲಿದೆ ಎಂಬ ಸುದ್ದಿ ಹರಡಿದೆ.

It is said that due to increase in DA and TA of central government employees under 7th pay, their pension is also expected to increase.
Image Credit: abplive

ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ
ಈ ವರ್ಷ ಸರ್ಕಾರಿ ನೌಕರರ ಕನಿಷ್ಠ ವೇತನದ ಮಿತಿಯಲ್ಲಿ 15,000 ದಿಂದ 21,000 ದವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಇದು ಹೆಚ್ಚಾದ ನಂತರ ನೌಕರರ ವೃದ್ದಾಪ್ಯ ಪಿಂಚಣಿಯಲ್ಲೂ ಸಹ ಹೆಚ್ಚಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ಸರ್ಕಾರಿ ನೌಕರರ ವೇತನದ ಮಿತಿಯನ್ನು ಹೆಚ್ಚಿಸಿದರೆ ಅವರ ಪಿಂಚಣಿ ಸಹ ಹೆಚ್ಚಳ ಆಗಲಿದೆ. ವೇತನದ ಹೆಚ್ಚಳದ ನಂತರ ಮಾಸಿಕ ಪಿಂಚಣಿ ಕೊಡುಗೆ 1,749 ರೂಪಾಯಿಗೆ ತಲುಪಲಿದೆ.

Join Nadunudi News WhatsApp Group

Join Nadunudi News WhatsApp Group