DA Hike 2024: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ಮಾರ್ಚ್ ತಿಂಗಳಲ್ಲಿ ಸಂಬಳದಲ್ಲಿ ಮತ್ತೆ ಇಷ್ಟು ಹೆಚ್ಚಳ

ಮಾರ್ಚ್ ತಿಂಗಳಿನಲ್ಲಿ DA ಹೆಚ್ಚಳ ಘೋಷಣೆ, ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ...?

Govt Employees DA Hike In March 2024: ಸದ್ಯ ಕೇಂದ್ರ ಸರ್ಕಾರ ಸರ್ಕಾರೀ ನೌಕರರ ವೇತನ ಹೆಚ್ಚಳದ ಬಗ್ಗೆ ಹೆಚ್ಚು ಚರ್ಚಿಸುತ್ತಿದೆ. ಸರ್ಕಾರೀ ನೌಕರರ ಬಹುದಿನದ ಬೇಡಿಕೆಯಾಗಿರುವ ತುಟ್ಟಿಭತ್ಯೆ ಹೆಚ್ಚಳವು ಈಗಾಗಲೇ ಸಾಕಷ್ಟು ಬಾರಿ ಚರ್ಚೆಗೆ ಒಳಗಾಗಿದೆ. ಸರ್ಕಾರ ನೌಕರರಿಗೆ ಹೆಚ್ಚಿನ ವೇತನವನ್ನು ನೀಡುವುದಾಗಿ ಸಾಕಷ್ಟು ಬಾರಿ ಘೋಷಣೆ ಹೊರಡಿಸಿದೆ.

ಸದ್ಯ ಕೇಂದ್ರ ಸರ್ಕಾರ ಮಾರ್ಚ್ ನಲ್ಲಿ DA ಹೆಚ್ಚಳದ ಘೋಷಣೆ ಮಾಡಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಸರ್ಕಾರ ಮಾರ್ಚ್ ನಲ್ಲಿ DA ಹೆಚ್ಚಳ ಮಾಡಿದರೆ ಎಷ್ಟು DA ಹೆಚ್ಚಳವಾಗುತ್ತದೆ ಎನ್ನುವುದು ಸರ್ಕಾರೀ ನೌಕರರ ಸದ್ಯದ ಪ್ರಶ್ನೆಯಾಗಿದೆ. ಇದೀಗ ನಾವು ಈ ಲೇಖನದಲ್ಲಿ ಸರ್ಕಾರೀ ನೌಕರರ ವೇತನ ಮಾರ್ಚ್ ನಲ್ಲಿ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

DA Hike In March 2024
Image Credit: Businessleague

ಮಾರ್ಚ್ ತಿಂಗಳಿನಲ್ಲಿ DA ಹೆಚ್ಚಳ ಘೋಷಣೆ
ಕೇಂದ್ರ ಸರ್ಕಾರಿ ನೌಕರರಿಗೆ ಈ ಬಾರಿಯೂ ಶೇ 4 ರಷ್ಟು ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ. ಮಾರ್ಚ್ ತಿಂಗಳಲ್ಲಿ ಡಿಯರ್‌ನೆಸ್ ಅಲೋವೆನ್ಸ್ (DA) ಮತ್ತು ಡಿಯರ್‌ ನೆಸ್ ರಿಲೀಫ್ (DR) ಘೋಷಿಸಬಹುದು. ನಿರೀಕ್ಷೆಯಂತೆ ಡಿಎಯನ್ನು ಶೇ.4 ರಷ್ಟು ಹೆಚ್ಚಿಸಿದರೆ ಒಟ್ಟು ತುಟ್ಟಿಭತ್ಯೆ ರೂ. 50 ಆಗಿರುತ್ತದೆ. ದೇಶದ ಹಣದುಬ್ಬರ ದರವನ್ನು ಆಧರಿಸಿ ಗ್ರಾಚ್ಯುಟಿಯನ್ನು ಎಷ್ಟು ಹೆಚ್ಚಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಅದಕ್ಕಾಗಿ, ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (CPI-IW) DA ಅನ್ನು ಹೆಚ್ಚಿಸಲು ಪರಿಗಣಿಸಲಾಗಿದೆ.

ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ…?
ಸರ್ಕಾರ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಘೋಷಿಸುತ್ತದೆ. ನಿವೃತ್ತ ನೌಕರರ ಪಿಂಚಣಿದಾರರಿಗೆ ತುಟ್ಟಿಪರಿಹಾರ ನೀಡಲಾಗುತ್ತದೆ. ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಜನವರಿಯಿಂದ ಜೂನ್ ವರೆಗೆ ಮತ್ತು ಜುಲೈನಿಂದ ಡಿಸೆಂಬರ್ ವರೆಗೆ ಹೆಚ್ಚಿಸಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಶೇಕಡ ನಾಲ್ಕರಷ್ಟು ಹೆಚ್ಚಳವಾಗಿದೆ.

Government Employees DA Hike News
Image Credit: Trak

ಮಾರ್ಚ್‌ ನಲ್ಲಿ ಡಿಎ ಹೆಚ್ಚಳವನ್ನು ಘೋಷಿಸಿದರೆ, ಅದು ಜನವರಿಯಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಒಬ್ಬ ನೌಕರನ ಸಂಬಳ ರೂ 70,000 ಮತ್ತು ಅವನ ಮೂಲ ವೇತನ ರೂ 30,000 ಎಂದು ಭಾವಿಸೋಣ. ಈಗ ಅವರಿಗೆ 46% ಡಿಎ ಬರುತ್ತಿದೆ ಅಂದರೆ 13,800 ರೂ.ಗಳನ್ನು ತುಟ್ಟಿಭತ್ಯೆಯಾಗಿ ಪಡೆಯುತ್ತಿದ್ದಾರೆ. ಈಗ ತುಟ್ಟಿಭಟಿ ಶೇ. 50 ಹೆಚ್ಚಾದರೆ, ನಂತರ 30,000 ರೂ. ಮೂಲ ವೇತನ ಪಡೆಯುವವರಿಗೆ ಭತ್ಯೆ 15,000 ರೂ. ಆಗುತ್ತದೆ. ಅಂದರೆ ಈ ಹೆಚ್ಚಳವು ನೌಕರರ ಸಂಬಳದಲ್ಲಿ 1200 ರೂ. ಏರಿಕೆಯಾಗುತ್ತದೆ.

Join Nadunudi News WhatsApp Group

Join Nadunudi News WhatsApp Group