Toll Tax 2024: ಇನ್ಮುಂದೆ Fastag ನಲ್ಲಿ ಹಣ ಇಲ್ಲದಿದ್ದರೂ ಚಿಂತಿಸುವ ಅಗತ್ಯ ಇಲ್ಲ ಇಲ್ಲ, Toll ನಿಯಮ ಬದಲಾವಣೆ

ಇನ್ಮುಂದೆ ಟೋಲ್ ಗೇಟ್ ನಲ್ಲಿ Fastag ಅಗತ್ಯ ಇಲ್ಲ, ಜಾರಿಗೆ ಬಂತು ಹೊಸ ಟೋಲ್ ಸಿಸ್ಟಮ್

GPS Toll Technology Launch: ಪ್ರಸ್ತುತ ಕೇಂದ್ರ ಸರ್ಕಾರ ಟೋಲ್ ಟ್ಯಾಕ್ಸ್ ಸಂಗ್ರಹಣೆಗೆ ಹೆಚ್ಚಿನ ವ್ಯವಸ್ಥೆ ಜಾರಿಗೊಳಿಸಿದೆ. ಅನೇಕ ತಂತ್ರಜ್ಞಗಳನ್ನು ಬಳಸಿ ಟೋಲ್ ಸಂಗ್ರಹಣೆ ಮಾಡಲಾಗುತ್ತಿದೆ. ಸದ್ಯ ಕೇಂದ್ರ ರಸ್ತೆ ಸಾರಿಗೆ ಸಚಿವರಾದ Nitin Gadkari ಅವರು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಟೋಲ್ ಟ್ಯಾಕ್ಸ್ ನಿಯಮದಲ್ಲಿ ಬದಲಾವಣೆ ತರಲು ಈಗ ಕೇಂದ್ರ ಸರ್ಕಾರ ಮುಂದಾಗಿದ್ದು ಹೊಸ ವಿಧಾನದ ಮೂಲಕ ಟೋಲ್ ಸಂಗ್ರಹಣೆ ಮಾಡಲು ಯೋಜನೆಯನ್ನ ರೂಪಿಸಲಾಗಿದೆ. ಈ ಮೂಲಕ ಹೆದ್ದಾರಿಯಲ್ಲಿ ಸಂಚಾರ ಮಾಡುವವರ ಟೋಲ್ ಸಂಗ್ರಹಣೆ ಸುಲಭವಾಗಲಿದೆ.

GPS Toll System India
Image Credit: Civilsdaily

ಇನ್ಮುಂದೆ Fastag ನಲ್ಲಿ ಹಣ ಇಲ್ಲದಿದ್ದರೂ ಚಿಂತಿಸುವ ಅಗತ್ಯ ಇಲ್ಲ
Toll Plaza ಗಳಲ್ಲಿ ಎಷ್ಟೇ ತಂತ್ರಜ್ಞಾನಗಳನ್ನು ಬಳಸಿದರು ಕೂಡ ವಾಹನ ಸವಾರರಿಗೆ ಟೋಲ್ ಪ್ಲಾಜಾದಲ್ಲಿ ಎದುರಾಗುವ ಸಮಸ್ಯೆ ನಿವಾರಣೆ ಆಗುತ್ತಿಲ್ಲ ಎನ್ನಬಹುದು. ಈಗಾಗಲೇ Toll ಪ್ಲಾಜದಲ್ಲಿ FASTag ಅನ್ನು ಅಳವಡಿಸಲಾಗಿದೆ.ಈ FASTag ನ ಸಹಾಯದಿಂದ ಆದಷ್ಟು ವೇಗವಾಗಿ ಟೋಲ್ ಗಳನ್ನೂ ಸಂಗ್ರಹಿಸಲಾಗುತ್ತಿದೆ.

FASTag ವ್ಯವಸ್ಥೆ ಇದ್ದರೂ ಕೂಡ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆ ಆಗದೆ ಇರುವ ಕಾರಣ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನೀವು Fastag ನಲ್ಲಿ ಹಣ ಇಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಇನ್ನುಮುಂದೆ Fastag ಮೂಲಕ ಟೋಲ್ ಹಣ ಕಟ್ ಆಗಲ್ಲ, ಇದಕ್ಕಾಗಿಯೇ ಹೊಸ ವ್ಯವಸ್ಥೆ ಜಾರಿಯಾಗಲಿದೆ.

GPS Toll Technology Launch
Image Credit: Civilsdaily

ಟೋಲ್ ಸಂಗ್ರಹಣೆಗೆ ಹೊಸ ವ್ಯವಸ್ಥೆ ಜಾರಿ
ಟೋಲ್ ಸಂಗ್ರಹಕ್ಕಾಗಿ ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ANPR (Automated Number Plate Reader) ಕ್ಯಾಮರಾಗಳು ಎನ್ನುವ ಹೊಸ GPS ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇನ್ನು ಎಏನ್ ಪಿಆರ್ ವ್ಯವಸ್ಥೆಯು ವಾಹನದ ಪರವಾನಗಿ ಫಲಕವನ್ನು ಓದುವ ಮೂಲಕ ತೆರಿಗೆಯನ್ನು ವಾಹನದ ಮಾಲಿಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುತ್ತದೆ.

Join Nadunudi News WhatsApp Group

ಪ್ರವೇಶ ಮತ್ತು ನಿರ್ಗಮನದಲ್ಲಿ ಎಏನ್ ಪಿಆರ್ ಕ್ಯಾಮರಗಳನ್ನು ಇರಿಸಲಾಗುತ್ತದೆ. ಇನ್ನು ಹೊಸ ವಾಹನದ ನಂಬರ್ ಪ್ಲೇಟ್ ಗಳಲ್ಲಿ ವಾಹನ ಸಂಖ್ಯೆಯ ಜೊತೆಗೆ GPS ಗಳನ್ನು ಅಳವಡಿಸಲಾಗುತ್ತದೆ. ಹೊಸ ವಾಹನಗಳಲ್ಲಿ GPS Number Plate ಅಳವಡಿಸುವಂತೆ ಕೇಂದ್ರ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದೆ. ಸದ್ಯದಲ್ಲೇ ಟೋಲ್ ಸಂಗ್ರಹಣೆಗೆ GPS ಆಧಾರಿತ ತಂತ್ರಜ್ಞಾನ ಆರಂಭವಾಗಲಿದೆ ಎಂದು ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group