Gruha Lakshmi: ಈ ಮಹಿಳೆಯರ ಖಾತೆಗೆ ಮಾತ್ರ ಗೃಹಲಕ್ಷ್ಮಿ 7 ನೇ ಕಂತಿನ ಹಣ ಜಮಾ, ಬೇಗ ಖಾತೆ ಚೆಕ್ ಮಾಡಿಕೊಳ್ಳಿ

ಈ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 7 ನೇ ಕಂತಿನ ಹಣ ಜಮಾ

Gruha Lakshmi 7th Installment Money: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆಯನ್ನ ಘೋಷಣೆ ಮಾಡಿತ್ತು. ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಯನ್ನು ವರ್ಷದೊಳಗೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ.

ಇದೀಗ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ Gruha Lakshmi ಯೋಜನೆ ಜಾರಿಗೆ ಬಂದು 5-6 ತಿಂಗಳು ಕಳೆದಿದೆ. ಗೃಹ ಲಕ್ಷ್ಮಿ ಯೋಜನೆ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹಲವು ಮಾರ್ಗವನ್ನ ಜಾರಿಗೆ ತಂದಿದೆ.

Gruha Lakshmi 7th Installment Money
Image Credit: Karnataka Times

ಈ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ 7 ನೇ ಕಂತಿನ ಹಣ ಜಮಾ
ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ 6 ನೇ ಕಂತಿನ ಹಣ ಜಮಾ ಮಾಡಿದೆ. ಆದರೆ 6 ನೇ ಕಂತಿನ ಹಣ ಎಲ್ಲ ಅರ್ಹರ ಖಾತೆಗೆ ತಲುಪಿಲ್ಲ. ಹೀಗಾಗಿ ಫೆಬ್ರವರಿ ತಿಂಗಳ ಹಣ ತಲುಪದೇ ಇದ್ದವರಿಗೆ ಮಾರ್ಚ್ ತಿಂಗಳ ಹಣದ ಜೊತೆಗೆ 4000 ರೂ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ಸಮಸ್ಯೆಗಳನ್ನು ಇಂದೇ ಪರಿಹರಿಸಿಕೊಳ್ಳಿ
•ಗೃಹ ಲಕ್ಷ್ಮಿ ಯೋಜನೆಗೆ ನೀಡಿದ ಬ್ಯಾಂಕ್ ಅಕೌಂಟ್ ಬಂದ್ ಆಗಿದ್ದರೆ, ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಗೃಹ ಲಕ್ಷ್ಮಿ ಯೋಜನೆಗೆ ಜೋಡಿಸಬೇಕು.

•ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೂ ಸಹ ಗೃಹ ಲಕ್ಷ್ಮಿ ಹಣ ಖಾತೆಗೆ ತಲುಪುದಿಲ್ಲ, ಇದಕ್ಕೆ ಇಂದೇ ಬ್ಯಾಂಕ್ ಗೆ ಭೇಟಿ ನೀಡಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.

Join Nadunudi News WhatsApp Group

Gruha Lakshmi New Update
Image Credit: Karnataka Times

•ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಇನ್ನು ಮುಂದೆ ಪ್ರತಿಯೊಬ್ಬರೂ National Payment Corporation of India (NPCI) ಮಾಡಬೇಕು. ನಿಮ್ಮ ಹತ್ತಿರದ ಬ್ಯಾಂಕ್‌ ಗೆ ಭೇಟಿ ನೀಡುವ ಮೂಲಕ NPCI ಅನ್ನು ಮಾಡಬಹುದು. ಆಧಾರ್ ಕಾರ್ಡ್, ಪಡಿತರ ಚೀಟಿ ಜೊತೆಗೆ ಬ್ಯಾಂಕ್ ವಿವರಗಳನ್ನು ನೀಡಿದರೆ NPCI ಮಾಡಿಕೊಡಲಾಗುತ್ತದೆ.

•ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿಯಲು ಸರ್ಕಾರದ ಅಧಿಕೃತ Website ಗೆ ಭೇಟಿ ನೀಡಿ.

Join Nadunudi News WhatsApp Group