Gruha Lakshmi: ಇನ್ಮುಂದೆ ಈ ಮಹಿಳೆಯರ ಖಾತೆಗೆ ಬರಲ್ಲ ಗೃಹಲಕ್ಷ್ಮಿ 2000 ರೂ, ಹೊಸ ನಿಯಮ.

ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹೊಸ ನಿಯಮ

Gruha Lakshmi Latest Update: ಪ್ರಸ್ತುತ ರಾಜ್ಯದಲ್ಲಿ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ ಅರ್ಹ ಮಹಿಳೆಯರಿಗೆ ಮಾಸಿಕವಾಗಿ 2000 ಹಣವನ್ನು ಬಿಡುಗಡೆ ಮಾಡುತ್ತಿದೆ. ಅರ್ಹ ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಅನರ್ಹರು ಕೂಡ ಪಡೆಯುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ.

ಈ ನಿಟ್ಟಿನಲ್ಲಿ ಸರ್ಕಾರ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಸದ್ಯ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ನೀವು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದರೆ ತಪ್ಪದೆ ಈ ಲೇಖನವನ್ನು ಓದುವ ಮೂಲಕ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Gruha Lakshmi Latest Update
Image Credit: Hindustan Times

ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹೊಸ ನಿಯಮ
ಒಂದೇ ಕುಟುಂಬದಲ್ಲಿ ಜನರು ಮತ್ತು ಒಂದೇ ಮನೆಯಲ್ಲಿ ವಾಸಿಸುವ ಆ ಮನೆಯ ಸದಸ್ಯರೂ ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದಾರೆ. ಈ ರೀತಿಯ ಪಡಿತರ ಚೀಟಿಗಳೂ ರದ್ದಾಗಿವೆ. ಒಂದೇ ಕುಟುಂಬದ ಸದಸ್ಯರಿಗೆ ಸರ್ಕಾರ ಒಂದೇ ಪಡಿತರ ಚೀಟಿಯನ್ನು ನೀಡುತ್ತಿದೆ. ಆ ಪಡಿತರ ಚೀಟಿಗೆ ಹೆಚ್ಚಿನ ಸದಸ್ಯರು ಕೂಡ ಸೇರಿಸಬಹುದು. ಆದರೆ ಒಂದೇ ಕುಟುಂಬದವರು ಎರಡೆರಡು ರೇಷನ್ ಕಾರ್ಡ್ ಅನ್ನು ಹೊಂದುವುದು ಕಾನೂನು ಬಾಹಿರವಾಗಿದೆ. ಈ ರೀತಿ ಒಂದೇ ಕುಟುಂಬದವರು ಒಂದಕ್ಕಿಂತ ಹೆಚ್ಚಿನ ಪಡಿತರ ಚೀಟಿ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಪಡಿತರ ಚೀಟಿ ಹೊಂದಿರುವವರಿಗೆ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದೆ.

Gruha Lakshmi Scheme Money
Image Credit: Kannada News

ಇನ್ಮುಂದೆ ಈ ಮಹಿಳೆಯರ ಖಾತೆಗೆ ಬರಲ್ಲ ಗೃಹಲಕ್ಷ್ಮಿ 2000 ರೂ
ಹೊಸದಾಗಿ ಮದುವೆಯಾದ ದಂಪತಿಗಳು ಬೇರೆ ಮನೆಯಲ್ಲಿ ವಾಸಿಸುತ್ತಿದ್ದರೆ ಮಾತ್ರ ಹೊಸ ಪಡಿತರ ಚೀಟಿಗಳು ಅವರಿಗೆ ಅನ್ವಯವಾಗುತ್ತವೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ ಅವರು ತಮ್ಮ ಹೆಸರನ್ನು ಹಳೆಯ ಪಡಿತರ ಚೀಟಿಗೆ ಸೇರಿಸಬಹುದು. ಅದೇ ಕುಟುಂಬದಲ್ಲಿದ್ದುಕೊಂಡು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಂತಿಲ್ಲ. ಇನ್ನು ಕೆಲವರು ನಕಲಿ ಪಡಿತರ ಚೀಟಿ ಪಡೆದು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹಾಗೂ ಪ್ರತಿ ತಿಂಗಳು ಉಚಿತ ಪಡಿತರ ಲಾಭ ಪಡೆಯುತ್ತಿದ್ದಾರೆ.

ಅಂತಹವರಿಗಾಗಿ ಇನ್ಮುಂದೆ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಲಿವೆ. ನಕಲಿ ದಾಖಲೆ ನೀಡಿ ಪಡಿತರ ಚೀಟಿ ಪಡೆದಿರುವವರು ಹಾಗೂ ಒಂದೇ ಕುಟುಂಬದಲ್ಲಿ ಎರಡೆರಡು ರೇಷನ್ ಕಾರ್ಡ್ ಹೊಂದಿದವರ ಗೃಹ ಲಕ್ಷ್ಮಿ ಯೋಜನೆಯ ಲಾಭ ಇನ್ನುಮುಂದೆ ರದ್ದಾಗಲಿದೆ. ಇಂತವರು ಇನ್ನುಮುಂದೆ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣ ಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಮನೆಯಲ್ಲಿಯೂ ಈ ರೀತಿಯ ತಪ್ಪುಗಳಾಗಿದ್ದರೆ ಇಂದೇ ಸರಿಪಡಿಸಿಕೊಳ್ಳಿ. ಇಲ್ಲವಾದರೆ ನೀವು ಗೃಹ ಲಕ್ಷ್ಮಿ ಯೋಜನೆಯಿಂದ ವಂಚಿತರಾಗಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group