Gruha Lakshmi: ಗೃಹ ಲಕ್ಷ್ಮಿ 11 ನೇ ಕಂತು, ರಾಜ್ಯದ ಎಲ್ಲಾ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್.

ರಾಜ್ಯದ ಎಲ್ಲಾ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್.

Gruha Lakshmi Latest Update: ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 10 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈವರೆಗೆ 20,000 ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ. ಸದ್ಯ ರಾಜ್ಯ ಸರ್ಕಾರ 11 ಕಂತಿನ ಹಣದ ಬಿಡುಗಡೆಗಾಗಿ ಸಿದ್ಧತೆ ಮಾಡಿಕೊಂಡಿದೆ. ಜೂನ್ ನಲ್ಲಿ 11 ಕಂತಿನ ಹಣದ ಬರುವಿಕೆಯಲ್ಲಿ ಗೃಹ ಲಕ್ಷ್ಮಿ ಫಲಾನುಭವಿಗಳು ಕಾಯುತ್ತಿದ್ದಾರೆ.

11 ನೇ ಕಂತಿನ ಹಣದ ಬರುವಿಕೆಗಾಗಿ ಕಾಯುತ್ತಿದ್ದ ಜನರಿಗೆ ಇದೀಗ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ 11 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

Gruha Lakshmi Latest Update
Image Credit: Hindustantimes

ರಾಜ್ಯದ ಎಲ್ಲಾ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್
ಗೃಹ ಲಕ್ಷ್ಮೀ ಪಲಾನುಭವಿಗಳಿಗೆ 11 ನೇ ಕಂತಿನ ಹಣ ಜೂನ್ 20 ರಂದು ಜಮಾ ಆಗಲಿದೆ. ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಜೂನ್ 20 ರ ನಂತರ ಫಲಾನುಭವಿಗಳು 11 ನೇ ಕಂತಿನ ಹಣ ಜಮಾ ಆಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು. ಕರ್ನಾಟಕ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ, ಗೃಹಲಕ್ಷ್ಮಿ ಯೋಜನೆಗೆ 1 ಕೋಟಿಗೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲವೇ ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನಗಳು ಸಿಗುತ್ತಿಲ್ಲ.

ಬ್ಯಾಂಕ್ ಖಾತೆ ಸಮಸ್ಯೆ, ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡದಿರುವುದು, ತಪ್ಪು ಹೆಸರು ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದ ಬ್ಯಾಂಕ್ ಖಾತೆಗೆ (ಡಿಬಿಟಿ) ಗೃಹ ಲಕ್ಷ್ಮಿ ಹಣ ಜಮಾ ಆಗುತ್ತಿಲ್ಲ. ಫಲಾನುಭವಿಗಳು ಆದಷ್ಟು ಬೇಗ ಈ ಸಮಸ್ಯೆಗಳನ್ನು ಸರಿಪಡಿಸಿಕೊಂಡರೆ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಬ್ಯಾಂಕ್ ಖಾತೆಯ ಬದಲಿಗೆ ಪೋಸ್ಟ್ ಆಫೀಸ್ ಖಾತೆಯನ್ನು ತೆರೆಯುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

Gruha Lakshmi Scheme Status Check
Image Credit: Oneindia

ಗೃಹ ಲಕ್ಷ್ಮಿ ಹಣ ಜಮಾ ಆಗಿದೆಯಾ ಎಂದು ತಿಳಿಯುವುದು ಹೇಗೆ…?
•Google Play Store ನಿಂದ ಅಧಿಕೃತ DBT Karnataka Mobile App ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

Join Nadunudi News WhatsApp Group

•ನಂತರ ಅರ್ಜಿದಾರರು ತಮ್ಮ 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.

•ನಿಮ್ಮ ಆಧಾರ್‌ ನಲ್ಲಿರುವಂತೆ ಹೆಸರನ್ನು ನಮೂದಿಸಬೇಕು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ 6 ಅಂಕಿಯ OTP ಅನ್ನು ನಮೂದಿಸಬೇಕು.

•OTP ಅನ್ನು ನಮೂದಿಸಿದ ನಂತರ, ನಾಲ್ಕು (4) ಅಂಕಿಯ ಪಾಸ್‌ ವರ್ಡ್ ಅನ್ನು ರಚಿಸಿ.

•ನಂತರ ಇಲ್ಲಿ ಅರ್ಜಿದಾರರು ಅಂದರೆ ನಿಮ್ಮ ವೈಯಕ್ತಿಕ ವಿವರಗಳು ತೋರುತ್ತದೆ. ಕೊನೆಯ ಕಲಾಂ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಮತ್ತು “ಸರಿ” ಬಟನ್ ಅನ್ನು ಕ್ಲಿಕ್ ಮಾಡಿ.

•ನಂತರ “ಲಾಗಿನ್” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಈಗಾಗಲೇ ರಚಿಸಲಾದ ಪಾಸ್ವರ್ಡ್ ಅನ್ನು ಹಾಕಿ.

•ನಂತರ “ಪಾವತಿ ಸ್ಥಿತಿ” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಗೃಹ ಲಕ್ಷ್ಮಿ ಎಂಬ ಬಟನ್ ಅನ್ನು ಕ್ಲಿಕ್ ಮಾಡಿದರೆ, ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಯಾವ ದಿನಾಂಕವನ್ನು ಹಣ ಠೇವಣಿ ಮಾಡಲಾಗಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿಯುತ್ತದೆ.

Gruha Lakshmi Scheme Money
Image Credit: Kannada News

Join Nadunudi News WhatsApp Group