GST: ಇಂದಿನಿಂದ ಈ ವಸ್ತುಗಳ ಬೆಲೆ ಭರ್ಜರಿ ಇಳಿಕೆ, ಜನಸಾಮಾನ್ಯರಿಗೆ ಕೇಂದ್ರದಿಂದ ಗುಡ್ ನ್ಯೂಸ್.

ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಇದ್ದ GST ಕಡಿಮೆ ಮಾಡಲಾಗಿದ್ದು ಇಂದಿನಿಂದ ಹಲವು ಇಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಕೆ ಆಗಲಿದೆ.

GST Deduction In Electronic: ಹೊಸ ವರ್ಷದ ಆರಂಭದಿಂದ ದೇಶದಲ್ಲಿ ಸಾಕಷ್ಟು ನಿಯಮಗಳು ಬದಲಾಗಿವೆ. ದೇಶದ ಜನರು ಹಣದುಬ್ಬರದ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಇನ್ನು ಹಣಕಾಸು ವರ್ಷದ ಪ್ರಾರಂಭದಿಂದ ಅನೇಕ ದೇಶದದ ನಾಗರಿಕರಿಗೆ ಸಾಕಷ್ಟು ಆರ್ಥಿಕ ನಷ್ಟ ಎದುರಾಗಿದೆ.

ಬ್ಯಾಂಕ್ ಸಾಲದ ದರಗಳಿಂದ ಹಿಡಿದು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯ ಪರಿಣಾಮದಿಂದ ಹೊರ ಬರಲು ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

The central government has decided to reduce the GST on electronic goods.
Image Credit: telegraphindia

ದೇಶದ ಜನರಿಗೆ ಸರ್ಕಾರದಿಂದ ಸಿಹಿ ಸುದ್ದಿ
ಸರ್ಕಾರ ಇದೀಗ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ GST ಕಡಿಮೆ ಮಾಡಲು ನಿರ್ಧರಿಸಿದೆ. ಇನ್ನುಮುಂದೆ ಗ್ರಾಹಕರು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ 31 .3 ಪ್ರತಿಶತ ಜಿಎಸ್ ಟಿ ಪಾವತಿಸುವ ಅಗತ್ಯವಿಲ್ಲ. GST ಹೊರೆ ಕಡಿಮೆ ಮಾಡುವ ಮೂಲಕ ಸರ್ಕಾರ ದೇಶದ ಜನರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಸರ್ಕಾರ ಯಾವ ಯಾವ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಜಿಎಸ್ ಟಿಯನ್ನು ಕಡಿಮೆ ಮಾಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಈ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ GST ಕಡಿತ
ವಾಷಿಂಗ್ ಮೆಷಿನ್, ಮೊಬೈಲ್ ಫೋನ್, ರೆಫ್ರಿಜರೇಟರ್, ಗೃಹೋಪಯೋಗಿ ವಸ್ತುಗಳು, ಯುಪಿಎಸ್ ಮತ್ತಿತರ ಎಲೆಕ್ಟ್ರಾನಿಕ್ಸ್, ಸರಕುಗಳು ಇತ್ಯಾದಿಗಳ ಮೇಲಿನ ಜಿಎಸ್ ಟಿಯನ್ನು ಸರ್ಕಾರ ಇಳಿಸಲು ನಿರ್ಧರಿಸಿದೆ. ಈ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಜನಸಾಮಾನ್ಯರು 31 .3 ಪ್ರತಿಶತ ಜಿಎಸ್ ಟಿ ಪಾವತಿಸುತ್ತಿದ್ದರು. ಸರ್ಕಾರದ ಈ ನಿರ್ಧಾರವು ಜನರ ಜಿಎಸ್ ಟಿ ಪಾವತಿಯ ಹೊರೆಯನ್ನು ಕಡಿಮೆ ಮಾಡಲಿದೆ.

The central government has now decided to reduce the GST on electronic goods.
Image Credit: vayana

*ಇನ್ನು 27 ಇಂಚು ಹಾಗೂ ಅದಕ್ಕಿಂತ ಕಡಿಮೆ ಗಾತ್ರದ ಟಿವಿ ಖರೀದಿಯ ಮೇಲೆ ಸರ್ಕಾರವು ಜಿಎಸ್ ಟಿಯನ್ನು ಶೇ. 31 .3 ರಿಂದ ಶೇ. 18 ಕ್ಕೆ ಇಳಿಸಿದೆ. ಸಣ್ಣ ಗಾತ್ರದ ಟಿವಿ ಖರೀದಿಗೆ ಮಾತ್ರ ಕಡಿಮೆ ಜಿಎಸ್ ಟಿ ಅನ್ವಯವಾಗಲಿದೆ.

Join Nadunudi News WhatsApp Group

* ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮಾರಾಟ ಹೆಚ್ಚುತ್ತಿದೆ. ಇದೀಗ ಸರ್ಕಾರ ಮೊಬೈಲ್ ಖರೀದಿಯ ಮೇಲೆ ಜಿಎಸ್ ಟಿಯನ್ನು ಶೇ. 31 .3 ರಿಂದ ಶೇ. 12 ಕ್ಕೆ ಇಳಿಸಿದೆ.

*ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಪ್ಯಾನ್ , ಕೂಲರ್ ಸೇರಿದಂತೆ ಇನ್ನಿತರ ಗೃಹೋಪಯೋಗಿ ವಸ್ತುಗಳ ಮೇಲಿನ ಜಿಎಸ್ ಟಿ ಶೇ. 31 .3 ರಿಂದ ಶೇ. 18 ಕ್ಕೆ ಕಡಿಮೆ ಮಾಡಲಾಗಿದೆ. ಗೃಹೋಪಯೋಗಿ ವಸ್ತುಗಳ ಖರೀದಿಯ ಮೇಲೆ ಶೇ. 12 ರಷ್ಟು ಜಿಎಸ್ ಟಿಯನ್ನು ಕಡಿತಗೊಳಿಸಲಾಗಿದೆ.

* ಎಲ್ ಇಡಿ ಗಳ ಮೇಲಿನ ಜಿಎಸ್ ಟಿಯನ್ನು ಶೇ. 15 ರಷ್ಟು ಹಾಗೂ ಮಿಕ್ಸರ್, ಜ್ಯೂಸರ್ ಗಳ ಮೇಲಿನ ಜಿಎಸ್ ಟಿಯನ್ನು ಶೇ. 31 .3 ರಿಂದ ಶೇ. 18 ಕ್ಕೆ ಕಡಿಮೆ ಮಾಡಲಾಗಿದೆ.

Join Nadunudi News WhatsApp Group